-->
ಕೊಲೀಜಿಯಂ ಶಿಫಾರಸ್ಸುಗಳ ತಿರಸ್ಕಾರ: ಕೇಂದ್ರದ ಕ್ರಮ ಪ್ರಜಾಸತ್ತೆಗೆ ಮಾರಕ- ನಿವೃತ್ತ ನ್ಯಾ. ರೋಹಿಂಗ್ಟನ್ ನಾರಿಮನ್

ಕೊಲೀಜಿಯಂ ಶಿಫಾರಸ್ಸುಗಳ ತಿರಸ್ಕಾರ: ಕೇಂದ್ರದ ಕ್ರಮ ಪ್ರಜಾಸತ್ತೆಗೆ ಮಾರಕ- ನಿವೃತ್ತ ನ್ಯಾ. ರೋಹಿಂಗ್ಟನ್ ನಾರಿಮನ್

ಕೊಲೀಜಿಯಂ ಶಿಫಾರಸ್ಸುಗಳ ತಿರಸ್ಕಾರ: ಕೇಂದ್ರದ ಕ್ರಮ ಪ್ರಜಾಸತ್ತೆಗೆ ಮಾರಕ- ನಿವೃತ್ತ ನ್ಯಾ. ರೋಹಿಂಗ್ಟನ್ ನಾರಿಮನ್







ಕೊಲೀಜಿಯಂ ವ್ಯವಸ್ಥೆಯಲ್ಲಿ ರಾಜಕೀಯ ನಾಯಕರನ್ನು ತೂರಿಸಬೇಕು ಎಂಬ ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಹೇಳಿಕೆಗೆ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ರೋಹಿಂಗ್ಟನ್ ಫಾಲಿ ನಾರಿಮನ್ ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ.



ಕೊಲೀಜಿಯಂ ವ್ಯವಸ್ಥೆ ಬದಲಿಸುವ ಕೇಂದ್ರದ ನಿರ್ಧಾರವನ್ನು ಖಂಡಿಸಿದ ಅವರು, ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಗಂಭೀರ ಅಪಾಯದ ಸಂಕೇತ ಎಂದು ಮಾರ್ಮಿಕವಾಗಿ ನುಡಿದರು.



ಕೊಲೀಜಿಯಂ ಶಿಫಾರಸ್ಸುಗಳನ್ನು ಕೇಂದ್ರ ಸರ್ಕಾರ ಸುಮ್ಮನೆ ಇರಿಸಿಕೊಂಡು ಕ್ರಮ ಕೈಗೊಳ್ಳದೇ ಇರುವುದು ದೇಶದ ಪ್ರಜಾಸತ್ತೆಗೆ ಹಿತಕರವಲ್ಲ. ತಪ್ಪೋ ಸರಿಯೋ ಅದನ್ನು ಒಪ್ಪಿಕೊಳ್ಳಲೇಬೇಕು ಎಂದು ಅವರು ನುಡಿದರು.



ಸುಪ್ರೀಂ ಕೋರ್ಟ್‌ ತೀರ್ಪನ್ನು ಟೀಕಿಸಲು ಕಾನೂನು ಸಚಿವರಿಗೆ ಹಕ್ಕಿದೆ. ಆದರೆ, ಆ ವ್ಯವಸ್ಥೆ ರಚನೆಗೆ ಕಾರಣವಾದ ಎರಡನೇ ನ್ಯಾಯಾಧೀಶರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ 1993ರಲ್ಲಿ ನೀಡಿದ್ದ ತೀರ್ಪಿಗೆ ಕೇಂದ್ರ ಸರ್ಕಾರ ಬದ್ಧವಾಗಿರಬೇಕು ಎಂದು ಹೇಳಿದ ಅವರು, ಸಂವಿಧಾನಿಕ ನ್ಯಾಯಪೀಠ ಸಂವಿಧಾನವನ್ನು ವ್ಯಾಖ್ಯಾನಿಸಿದರೆ ಆ ತೀರ್ಪನ್ನು ಪಾಲಿಸುವುದು ಸಂವಿಧಾನದ ಅಡಿಯಲ್ಲಿ ಅಧಿಕಾರದಲ್ಲಿ ಇರುವವರ ಆದ್ಯ ಕರ್ತವ್ಯವಾಗಿದೆ ಎಂದು ಸ್ಪಷ್ಟಪಡಿಸಿದರು.



ನ್ಯಾಯಮೂರ್ತಿಗಳ ನೇಮಕಾತಿ ಪ್ರಕ್ರಿಯೆಯು ನಿಜವಾಗಿಯೂ ಈಗಿನ ಕಾಲದ ಅಗತ್ಯವಾಗಿ ಬೇಕಾದ ನ್ಯಾಯಾಂಗ ಸ್ವಾತಂತ್ಯಕ್ಕೆ ಉತ್ತರವಾಗಿದೆ ಎಂದು ಹೇಳಿದ ಅವರು, ಕಾಲಕ್ಕೆ ಅನುಗುಣವಾಗಿ ಸಂವಿಧಾನದ ಆದರ್ಶಗಳನ್ನು ವಿಕಸನಗೊಳಿಸುವುದು ಸುಪ್ರೀಂಕೋರ್ಟಿನ ಕರ್ತವ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.









Ads on article

Advertise in articles 1

advertising articles 2

Advertise under the article