ರಾಜ್ಯದ 9 ತಾಲೂಕುಗಳಲ್ಲಿ ಉಪ ನೋಂದಣಿ ಕಚೇರಿ ಆರಂಭ
ರಾಜ್ಯದ 9 ತಾಲೂಕುಗಳಲ್ಲಿ ಉಪ ನೋಂದಣಿ ಕಚೇರಿ ಆರಂಭ
ನೂತನವಾಗಿ ತಾಲೂಕು ಆಗಿರುವ ರಾಜ್ಯದ ಒಂಬತ್ತು ತಾಲೂಕು ಕೇಂದ್ರಗಳಲ್ಲಿ ಉಪ ನೊಂದಾವಣಿ ಕಚೇರಿ ಆರಂಭಿಸಲು ರಾಜ್ಯ ಸರಕಾರ ಒಪ್ಪಿಗೆ ನೀಡಿದೆ.
ಇತ್ತೀಚೆಗೆ ಹೊಸದಾಗಿ ರಚನೆಯಾದ 50 ತಾಲೂಕುಗಳ ಪೈಕಿ ಎಂಟು ತಾಲೂಕುಗಳಲ್ಲಿ ಉಪನೋಂದಾವಣಿ ಕಚೇರಿ ಆರಂಭವಾಗಲಿದೆ. ಕಂದಾಯ ಇಲಾಖೆ ಈ ಕುರಿತು ಆದೇಶ ಹೊರಡಿಸಿದೆ.
ಈ ಒಟ್ಟು ನೂತನ ಎಂಟು ಸಬ್ ರಿಜಿಸ್ಟರ್ ಕಚೇರಿಗಳಿಗೆ ಸಂಬಂಧಿಸಿದಂತೆ 32 ಹೊಸ ಹುದ್ದೆಗಳನ್ನು ಸೃಜಿಸಲಾಗಿದೆ. ಇದರಿಂದಾಗಿ ಆ ತಾಲೂಕಿನ ಜನರಿಗೆ ನೋಂದಾವಣಿಯಲ್ಲಿ ಉಪಯೋಗ ಆಗಲಿದೆ.
ಹೊಸದಾಗಿ ರಚನೆಯಾದ ಐವತ್ತು ತಾಲೂಕುಗಳ ಪೈಕಿ 34 ತಾಲೂಕುಗಳಲ್ಲಿ ಉಪನಂದಾಣಿ ಕಚೇರಿಗಳನ್ನು ಆರಂಭಿಸಲಾಗುತ್ತದೆ.
ಈ ಪೈಕಿ ಮೊದಲ ಹಂತದಲ್ಲಿ ಎಂಟು ಉಪನೋಂದಾವಣಿ ಕಚೇರಿಗಳನ್ನು ಆರಂಭಿಸಲಾಗುತ್ತದೆ. ಹೊಸದಾಗಿ ಆರಂಭವಾಗುವ ರಿಜಿಸ್ಟರ್ ಕಚೇರಿಗೆ ತಲಾ ಒಬ್ಬ ಉಪನಂದಣಿ ಅಧಿಕಾರಿ ಒಬ್ಬ ಪ್ರಥಮ ದರ್ಜೆ ಸಹಾಯಕ, ಒಬ್ಬ ಡಾಟಾ ಎಂಟ್ರಿ ಆಪರೇಟರ್ ಮತ್ತು ಹೊರಗುತ್ತಿಗೆ ಆಧಾರದಲ್ಲಿ ಒಬ್ಬ ಡಿ ದರ್ಜೆ ನೌಕರರ ನೇಮಕಾತಿಗೆ ಮಂಜೂರಾತಿ ನೀಡಲಾಗಿದೆ.
50 ತಾಲೂಕುಗಳ ಪೈಕಿ 34 ತಾಲೂಕುಗಳಲ್ಲಿ ಹೊಸದಾಗಿ ಉಪನೋಂದಾವಣಿ ಕಚೇರಿಗಳನ್ನು ಆರಂಭಿಸಲು ಪ್ರಸ್ತಾವನೆ ಸಲ್ಲಿಸಲಾಗಿತ್ತು. ನಿಗದಿಪಡಿಸಿದ ಮಾನದಂಡಗಳನ್ನು ಪೂರೈಸಿರುವ ವಿವರಗಳೊಂದಿಗೆ ಕೆಲವು ಕಚೇರಿಗಳು ಪ್ರಸ್ತುತ ಇರುವ ಮಾನದಂಡಗಳನ್ನು ಪೂರೈಸಿರಲಿಲ್. ಆದಾಗ್ಯೂ ಹೊಸ ತಾಲೂಕು ರಚನೆಯಾಗಿರುವುದರಿಂದ ಹೊಸ ನೋಂದಣಿ ಕಚೇರಿಗೆ ಪ್ರಾರಂಭಿಸಲು ಅನುಮತಿ ನೀಡುವಂತೆ ಕೋರಿಕೊಂಡಿರುತ್ತಾರೆ.
ಪ್ರತಿ ಉಪನೋಂದಾವಣಿ ಕಚೇರಿಗೆ ಈ ಕೆಳಕಂಡ ಹುದ್ದೆಗಳನ್ನು ಮಂಜೂರು ಮಾಡುವಂತೆ ನೋಂದಾವಣೆ ಪರೀಕ್ಷಕರು ಮತ್ತು ಮುದ್ರಾಂಕಗಳ ಆಯುಕ್ತರು ಮನವಿ ಸಲ್ಲಿಸಿದ್ದರು ಈ ಪ್ರಸ್ತಾವನೆಯನ್ನು ಪರಿಶೀಲಿಸಿ ಸರಕಾರ ಆದೇಶ ಹೊರಡಿಸಿದೆ.
ಹೊಸ ಕಚೇರಿಗಳು ಎಲ್ಲಿ ಕಂದಾಯ ಇಲಾಖೆ ಸದ್ಯದ ಆದೇಶದಲ್ಲಿ ಬೆಳಗಾವಿಯ ಕಾಗವಾಡ, ಕೊಪ್ಪಳದ ಕೂಕನೂರು ಮತ್ತು ಕನಕಗಿರಿ, ರಾಯಚೂರಿನ ಸಿರಿವಾರ, ಉಡುಪಿಯ ಕಾಪು, ವಿಜಯಪುರದ ಬಬಲೇಶ್ವರ ಮತ್ತು ತಾಳಿಕೋಟೆ ತಾಲೂಕುಗಳಲ್ಲಿ ಹೊಸ ಕಚೇರಿ ತೆರೆಯಲು ಅನುಮತಿ ನೀಡಲಾಗಿದೆ.