![ನ್ಯಾಯಾಲಯದಲ್ಲಿ ಜಾರಿಗೆ ಬಂತು ವಕೀಲರ ಆನ್‌ಲೈನ್ ಹಾಜರಾತಿ ಪೋರ್ಟಲ್! ನ್ಯಾಯಾಲಯದಲ್ಲಿ ಜಾರಿಗೆ ಬಂತು ವಕೀಲರ ಆನ್‌ಲೈನ್ ಹಾಜರಾತಿ ಪೋರ್ಟಲ್!](https://i.ytimg.com/vi/-yb8mpMvAz8/hqdefault.jpg)
ನ್ಯಾಯಾಲಯದಲ್ಲಿ ಜಾರಿಗೆ ಬಂತು ವಕೀಲರ ಆನ್‌ಲೈನ್ ಹಾಜರಾತಿ ಪೋರ್ಟಲ್!
ನ್ಯಾಯಾಲಯದಲ್ಲಿ ಜಾರಿಗೆ ಬಂತು ವಕೀಲರ ಆನ್‌ಲೈನ್ ಹಾಜರಾತಿ ಪೋರ್ಟಲ್!
ಸುಪ್ರೀಂ ಕೋರ್ಟ್ ಮತ್ತೊಂದು ಮೈಲುಗಲ್ಲು ಕ್ರಮಿಸಿದೆ. ಇತಿಹಾಸದಲ್ಲಿ ಮೊದಲ ಬಾರಿಗೆ ವಕೀಲರ ಹಾಜರಾತಿ ಆನ್‌ಲೈನ್ ಪೋರ್ಟಲ್ ಸರ್ವೋಚ್ಛ ನ್ಯಾಯಾಲಯದಲ್ಲಿ ಕಾರ್ಯಾರಂಭ ಮಾಡಿದೆ.
ಕಲಾಪಕ್ಕೆ ವಕೀಲರ ಹಾಜರಾತಿ ಮಾಹಿತಿ ತಿಳಿಸುವ ಆನ್‌ಲೈನ್ ಪೋರ್ಟಲ್ ಶುಭಾರಂಭಗೊಂಡಿದ್ದು, ತಂತ್ರಜ್ಞಾನದ ಹೊಸ ದಾರಿಯಲ್ಲಿ ಸುಪ್ರೀಂ ಕೋರ್ಟ್ ದಿಟ್ಟ ಹೆಜ್ಜೆ ಇಟ್ಟಿದೆ.
ಈ ಹಿಂದಿನ ವಿಧಾನ: ವಕೀಲರು ತಮ್ಮ ಹೆಸರು, ಪ್ರಕರಣದ ಸಂಖ್ಯೆಯನ್ನು ನಿರ್ದಿಷ್ಟ ನಮೂನೆಯಲ್ಲಿ ಲಿಖಿತವಾಗಿ ಯಾ ಇಮೇಲ್ ಮೂಲಕ ಮಾನ್ಯ ನ್ಯಾಯಪೀಠದ ಮುಂದೆ ಸಲ್ಲಿಸಬೇಕಿತ್ತು.
ಈ ಮೂಲಕ ಸಂಬಂಧಿಸಿದ ವಕೀಲರು ಹಾಜರಾಗಿದ್ದಾರೆ ಎಂದು ಪರಿಗಣಿಸಲಾಗುತ್ತಿತ್ತು. ಕೋರ್ಟಿನ ತೀರ್ಪುಗಳಲ್ಲಿ ವಕೀಲರ ಹೆಸರು ಉಲ್ಲೇಖವಾಗುತ್ತಿತ್ತು. 2023ರ ಜನವರಿ 2ರಿಂದ ಈ ವಿಧಾನ ಕೊನೆಗೊಂಡಿದೆ.
ನಿಖರತೆ, ಕಾರ್ಯಕ್ಷಮತೆ ತರುವ ಉದ್ದೇಶದಿಂದ ಅಡ್ವಕೇಟ್ ಆನ್ ರೆಕಾರ್ಡ್ (AOR) ವಿಧಾನವನ್ನು ಪರಿಚಯಿಸಲಾಗಿದೆ.
Read This Also:
ವಕೀಲಿಕೆ ನಡೆಸದ ವಕೀಲರಿಗೆ ಸಂಕಷ್ಟ: ಐದು ವರ್ಷ ವೃತ್ತಿಯಿಂದ ದೂರವಿದ್ದರೆ ಮತ್ತೆ ಪರೀಕ್ಷೆ?
What is a Decree..?: Definition & execution of a decree
ಅತ್ಯಾಚಾರ ಪ್ರಕರಣ: ಪೊಲೀಸ್ ಹೇಳಿಕೆಯಲ್ಲಾದ ಲೋಪ ಇದ್ದರೂ SC-ST ಕಾಯ್ದೆ ಅನ್ವಯ: ಸುಪ್ರೀಂ ಕೋರ್ಟ್