ಸುಪ್ರೀಂ ಕೋರ್ಟ್ ಐತಿಹಾಸಿಕ ನಡೆ: ಪ್ರಾದೇಶಿಕ ಭಾಷೆಯಲ್ಲೂ ತೀರ್ಪು ಲಭ್ಯ
ಸುಪ್ರೀಂ ಕೋರ್ಟ್ ಐತಿಹಾಸಿಕ ನಡೆ: ಪ್ರಾದೇಶಿಕ ಭಾಷೆಯಲ್ಲೂ ತೀರ್ಪು ಲಭ್ಯ
ವಿದ್ಯುನ್ಮಾನ ತಂತ್ರಜ್ಞಾನ ಯುಗಕ್ಕೆ ಕಾನೂನನ್ನೂ ಒಗ್ಗಿಸಿಕೊಳ್ಳುವ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ಹೆಜ್ಜೆ ಇಟ್ಟಿದೆ. 2022ರ ಜನವರಿ 26ರಿಂದ ಸುಪ್ರೀಂ ಕೋರ್ಟ್‌ನ ಸಾವಿರಕ್ಕೂ ಅಧಿಕ ತೀರ್ಪುಗಳು ಪ್ರಾದೇಶಿಕ ಭಾಷೆಯಲ್ಲಿ ಬಿಡುಗಡೆಯಾಗಿದೆ.
ಕನ್ನಡ, ಒಡಿಯಾ, ಗಾರೋ ಸಹಿತ ಹಲವು ಪ್ರಾದೇಶಿಕ ಭಾಷೆಗಳಲ್ಲೂ ಸುಪ್ರೀಂ ಕೋರ್ಟ್‌ನ ತೀರ್ಪುಗಳು ಲಭ್ಯವಾಗಲಿದೆ.
ಈಗಾಗಲೇ e-scr ಮತ್ತು ಲಭ್ಯ ಇರುವ 34000ಕ್ಕೂ ಅಧಿಕ ತೀರ್ಪುಗಳು ಈಗಾಗಲೇ ಅಂತರ್ಜಾಲದಲ್ಲಿ ಲಭ್ಯ ಇದ್ದು, ಗಣರಾಜ್ಯೋತ್ಸವ ದಿನದಂದು ಪ್ರಾದೇಶಿಕ ಭಾಷೆಗಳಲ್ಲೂ ತೀರ್ಪುಗಳು ಲಭ್ಯವಾಯಿತು.
ಈ ತೀರ್ಪುಗಳ ಭಾಷಾಂತರ ಪ್ರಕ್ರಿಯೆಗೆ ನ್ಯಾಯಮೂರ್ತಿ ಅಭಯ ಶ್ರೀನಿವಾಸ್ ಓಕಾ ಅವರ ನೇತೃತ್ವದ ಸಮಿತಿ ರಚಿಸಲಾಗಿದೆ. ಕರ್ನಾಟಕ ಹೈಕೋರ್ಟ್‌ನ ನ್ಯಾ. ಸೂರಜ್ ಗೋವಿಂದರಾಜ್ ಅವರೂ ಸಮಿತಿಯ ಸದಸ್ಯರಾಗಿದ್ದಾರೆ.
ಉಳಿದಂತೆ, ರಾಷ್ಟ್ರೀಯ ಮಾಹಿತಿ ಕೇಂದ್ರದ ಶರ್ಮಿಷ್ಠಾ, ದೆಹಲಿ IITಯ ಮಿತೇಶ್ ಕಪ್ರಾ, ಏಕ್ ಸ್ಟೆಪ್ ಪ್ರತಿಷ್ಠಾನದ ವಿವೇಕ್ ರಾಘವನ್, ಆಗಾಮಿ ಸಂಸ್ಥೆಯ ಸುಪ್ರಿಯಾ ಶಂಕರನ್ ಸಮಿತಿಯ ಇತರ ಸದಸ್ಯರು.
ಸುಪ್ರೀಂ ಕೋರ್ಟ್ ತೀರ್ಪುಗಳನ್ನು ಪ್ರಾದೇಶಿಕ ಭಾಷೆಗಳಲ್ಲಿ ಬಿಡುಗಡೆ ಮಾಡುವ ನಿಟ್ಟಿನಲ್ಲಿ ಪ್ರಾದೇಶಿಕ ಭಾಷೆಗಳಲ್ಲಿ ಸುಪ್ರೀಂ ಕೋರ್ಟ್‌ನ 1,091 ತೀರ್ಪುಗಳನ್ನು ಬಿಡುಗಡೆ ಮಾಡಲಾಗಿದೆ.
ಇನ್ನು ಸ್ಥಳೀಯ ಭಾಷೆಗಳಲ್ಲಿ ತೀರ್ಪುಗಳು ಲಭ್ಯವಾಗಲಿದ್ದು, ಈ ಮಹಾ ಯೋಜನೆಯ ಭಾಗವಾಗಿ ಮೊದಲ ಹಂತದ ತೀರ್ಪುಗಳು ಪ್ರಕಟವಾಗಿದೆ. ವಕೀಲರ ಸಮುದಾಯ ತಾವು ಬಳಸುವ ಭಾಷೆಯಲ್ಲಿ ಈ ತೀರ್ಪುಗಳನ್ನು ಬಳಸಬೇಕು ಎಂಬುದು ನಮ್ಮ ಉದ್ದೇಶ ಎಂದು ಮುಖ್ಯ ನ್ಯಾಯಮೂರ್ತಿ ನ್ಯಾ. ಡಿ.ವೈ. ಚಂದ್ರದೂಡ್ ಹೇಳಿದರು.