-->
ದತ್ತು ಮಕ್ಕಳಿಗೂ ಮೃತ ಸರ್ಕಾರಿ ನೌಕರನ ಕೌಟುಂಬಿಕ ಪಿಂಚಣಿ ಸೌಲಭ್ಯ ಷರತ್ತುಬದ್ಧ: ಸುಪ್ರೀಂ ಕೋರ್ಟ್‌

ದತ್ತು ಮಕ್ಕಳಿಗೂ ಮೃತ ಸರ್ಕಾರಿ ನೌಕರನ ಕೌಟುಂಬಿಕ ಪಿಂಚಣಿ ಸೌಲಭ್ಯ ಷರತ್ತುಬದ್ಧ: ಸುಪ್ರೀಂ ಕೋರ್ಟ್‌

ದತ್ತು ಮಕ್ಕಳಿಗೂ ಮೃತ ಸರ್ಕಾರಿ ನೌಕರನ ಕೌಟುಂಬಿಕ ಪಿಂಚಣಿ ಸೌಲಭ್ಯ ಷರತ್ತುಬದ್ಧ: ಸುಪ್ರೀಂ ಕೋರ್ಟ್‌





ಮೃತ ಸರ್ಕಾರಿ ನೌಕರನ ಪಿಂಚಣಿಯಲ್ಲಿ ದತ್ತು ಮಕ್ಕಳಿಗೂ ಪಿಂಚಣಿ ಸೌಲಭ್ಯ ವಿಸ್ತರಿಸುವುದು ಷರತ್ತುಬದ್ಧ. ಸರ್ಕಾರಿ ನೌಕರ ತಮ್ಮ ಜೀವಿತಾವಧಿಯಲ್ಲಿ ಕಾನೂನುಬದ್ಧವಾಗಿ ಗಂಡು ಯಾ ಹೆಣ್ಣು ಮಕ್ಕಳನ್ನು ದತ್ತುಪಡೆದಿರಬೇಕು ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ.



ಸರ್ಕಾರಿ ನೌಕರ ಮೃತಪಟ್ಟ ಬಳಿಕ ಅವರ ಪತ್ನಿ/ಪತಿ ಮಗುವನ್ನು ದತ್ತು ಸ್ವೀಕರಿಸಿದರೆ ಆ ಮಗುವಿಗೆ ಕೌಟುಂಬಿಕ ಪಿಂಚಣಿ ಸೌಲಭ್ಯ ವಿಸ್ತರಿಸಲಾಗದು ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.



ಪ್ರಕರಣ: ಶ್ರೀ ರಾಮ್ ಶ್ರೀಧರ್ ಚಿಮುರ್ಕರ್ Vs ಭಾರತ ಸರ್ಕಾರ

ಸುಪ್ರೀಂ ಕೋರ್ಟ್‌



''ಕೇಂದ್ರ ನಾಗರಿಕ ಸೇವೆಗಳ (ಪಿಂಚಣಿ) ನಿಯಮಗಳು, 1972'' ಇದರ ನಿಯಮ 54 (14) (ಬಿ) ಅಡಿಯಲ್ಲಿ ಕುಟುಂಬ ಪದವನ್ನು ವ್ಯಾಖ್ಯಾನ ಮಾಡಲಾಗಿದೆ. ಈ ವ್ಯಾಖ್ಯಾನದ ವ್ಯಾಪ್ತಿಗೆ ನೌಕರ ಮೃತಪಟ್ಟ ಬಳಿಕ ದತ್ತುಪಡೆದ ಮಗುವನ್ನು ತರಲಾಗದು ಎಂದು ನ್ಯಾ. ಕೆ.ಎಂ. ಜೋಸೆಫ್ ಮತ್ತು ನ್ಯಾ. ಬಿ.ವಿ. ನಾಗರತ್ನ ಅವರಿದ್ದ ವಿಭಾಗೀಯ ಪೀಠ ಹೇಳಿದೆ.



ಸರ್ಕಾರಿ ನೌಕರರು ಮೃತಪಟ್ಟ ಬಳಿಕ ಅವರಿಗೆ ಮಗು ಜನಿಸಿದರೆ ಆಗ ಆ ಮಗುವಿಗೆ ಕುಟುಂಬ ಪಿಂಚಣಿ ಸೌಲಭ್ಯ ಇದೆ. ಈ ಮಕ್ಕಳು ದತ್ತು ಮಕ್ಕಳಿಗಿಂತ ಭಿನ್ನ ಎಂದು ನ್ಯಾಯಾಲಯ ತಿಳಿಸಿದೆ. ಮೃತ ಸರ್ಕಾರಿ ನೌಕರ ಮೃತಪಟ್ಟ ಬಳಿಕ ಆತನ ಪತ್ನಿ ದತ್ತು ಪಡೆದ ಪುತ್ರರೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಂಡ ನ್ಯಾಯಪೀಠ, ಈ ಅಭಿಪ್ರಾಯ ವ್ಯಕ್ತಪಡಿಸಿದೆ.



ಒಂದು ವೇಳೆ, ಸರ್ಕಾರಿ ನೌಕರರು ದತ್ತುಮಗುವನ್ನು ತಮ್ಮ ಜೀವಿತಾವಧಿಯಲ್ಲಿ ಕಾನೂನುಬದ್ಧವಾಗಿ ಪಡೆದುಕೊಂಡಿದ್ದರೆ, ಆ ದತ್ತು ಮಗು ಅದು ಹೆಣ್ಣಾಗಲೀ, ಗಂಡಾಗಲಿ ಕೌಟುಂಬಿಕ ಪಿಂಚಣಿ ಸೌಲಭ್ಯದ ವ್ಯಾಪ್ತಿಗೆ ಬರುತ್ತಾರೆ. ಆದರೆ, ಈ ಸೌಲಭ್ಯವನ್ನು, ಆ ನೌಕರನ ಸಾವಿನ ನಂತರ ಆತನ ಪತ್ನಿ ಪಡೆಯುವ ದತ್ತುಮಕ್ಕಳಿಗೆ ವಿಸ್ತರಿಸಲಾಗುವುದಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.



ಜೀವನಾಧಾರವಾಗಿದ್ದ ನೌಕರರು ಮೃತಪಟ್ಟ ಬಳಿಕ ಅವರ ಅವಲಂಬಿತರಿಗೆ ನೆರವು ನೀಡಲು ಈ ಕೌಟುಂಬಿಕ ಪಿಂಚಣಿ ಸೌಲಭ್ಯ ಕಲ್ಪಿಸಲಾಗಿದೆ. ಆದರೆ, ಅವಲಂಬಿತರು ಸರ್ಕಾರಿ ನೌಕರರ ಜೊತೆಗೆ ನೇರ ಸಂಬಂಧ ಹೊಂದಿರಬೇಕೇ ಹೊರತು ದೂರದ ಸಂಬಂಧಿಗಳಿಗೆ ಅವಕಾಶವಿಲ್ಲ.



ಆದರೆ, ನೌಕರನ ಸಾವಿನ ನಂತರ, ಅವರ ಅವಲಂಬಿತರಲ್ಲದ ಇತರ ವ್ಯಕ್ತಿಗಳನ್ನು ಪಿಂಚಣಿ ನಿಯಮಗಳ ಅಡಿಯಲ್ಲಿ ''ಕುಟುಂಬ'' ಎಂಬ ವ್ಯಾಖ್ಯಾನದ ವ್ಯಾಪ್ತಿಗೆ ತರಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿತು.



ಹಿಂದೂ ಕಾನೂನು ಪ್ರಕಾರ, ದತ್ತು ಪುತ್ರರ ಹಕ್ಕುಗಳು ಮತ್ತು ಕುಟುಂಬ ಪಿಂಚಣಿ ಪಡೆಯುವ ಹಕ್ಕುಗಳ ನಡುವೆ ದೊಡ್ಡ ಹಾಗೂ ಪ್ರಮುಖ ವ್ಯತ್ಯಾಸವಿದೆ. ಒಂದು ವೇಳೆ, ಇದನ್ನು ಕಡೆಗಣಿಸಿದರೆ, ಸಾರ್ವಜನಿಕ ಬೊಕ್ಕಸಕ್ಕೆ ಹೊರೆ ಆಗುತ್ತದೆ ಎಂದು ನ್ಯಾಯಪೀಠ ಹೇಳಿದೆ.



Ads on article

Advertise in articles 1

advertising articles 2

Advertise under the article