ಮಧ್ಯಸ್ಥಿಕೆ ಪ್ರಕ್ರಿಯೆಯಲ್ಲಿ ಸಾಕ್ಷ್ಯ ಅಧಿನಿಯಮದ ಸೆಕ್ಷನ್ 65-ಬಿ ಅನ್ವಯವಾಗದು: ಹೈಕೋರ್ಟ್ ತೀರ್ಪು
ಮಧ್ಯಸ್ಥಿಕೆ ಪ್ರಕ್ರಿಯೆಯಲ್ಲಿ ಸಾಕ್ಷ್ಯ ಅಧಿನಿಯಮದ ಸೆಕ್ಷನ್ 65-ಬಿ ಅನ್ವಯವಾಗದು: ಹೈಕೋರ್ಟ್ ತೀರ್ಪು
ಆರ್ಬಿಟ್ರೇಷನ್ ಖಟ್ಲೆಗಳಲ್ಲಿ, ಮಧ್ಯಸ್ಥಿಕೆ ವ್ಯಾಜ್ಯದಲ್ಲಿ ಭಾರತೀಯ ಸಾಕ್ಷ್ಯ ಅಧಿನಿಯಮದ ಕಲಂ 65(b) ಅನ್ವಯವಾಗದು ಎಂದು ದೆಹಲಿ ಹೈಕೋರ್ಟ್ ತೀರ್ಪು ನೀಡಿದೆ.
ಮಿಲೇನಿಯಂ ಸ್ಕೂಲ್ Vs ಪವನ್ ದವರ್ ಪ್ರಕರಣದಲ್ಲಿ ದೆಹಲಿ ಹೈಕೋರ್ಟ್‌ನ ನ್ಯಾ. ವಿಭು ಬಕ್ರು ನೇತೃತ್ವದ ಏಕಸದಸ್ಯ ಪೀಠ ಈ ತೀರ್ಪು ನೀಡಿದೆ.
ಟ್ರಿಬ್ಯೂನಲ್, ಮಧ್ಯಸ್ಥಿಕೆ ಪ್ರಕರಣಗಳಲ್ಲಿ ವಿಚಾರಣೆಯ ನಡೆಯುವ ವೇಳೆ, ನ್ಯಾಯ ತೀರ್ಮಾನದ ಸಂದರ್ಭದಲ್ಲಿ ಯಾವುದೇ ಸಾಕ್ಷಿಯ ಸ್ವೀಕಾರಾರ್ಹತೆ, ಪ್ರಸ್ತುತತೆ, ವಸ್ತು ಮತ್ತು ಮೌಲ್ಯವನ್ನು ನಿರ್ಧರಿಸುವಾಗ, ಭಾರತೀಯ ಸಾಕ್ಷ್ಯ ಕಾಯಿದೆ, 1872 ಅಥವಾ ಸಿವಿಲ್ ಪ್ರಕ್ರಿಯಾ ಸಂಹಿತೆ 1908 ಅಥವಾ ಯಾವುದೇ ಕಟ್ಟುನಿಟ್ಟಾದ ಸಾಕ್ಷ್ಯದ ನಿಯಮಗಳಿಂದ ಬದ್ಧವಾಗಿರುವುದಿಲ್ಲ ಎಂಬುದಾಗಿ ನ್ಯಾಯಪೀಠ ತನ್ನ ತೀರ್ಪಿನಲ್ಲಿ ಹೇಳಿದೆ.
ಸಾಕ್ಷ್ಯಾಧಾರ ಕಾಯಿದೆಯ ತತ್ವಗಳನ್ನು ಸಾಮಾನ್ಯವಾಗಿ ಮಧ್ಯಸ್ಥಿಕೆ ಪ್ರಕ್ರಿಯೆಗಳಲ್ಲಿ ಅನ್ವಯಿಸಲಾಗಿದೆ. ಆದರೂ, sensu stricto ಎಂಬ ತತ್ವವನ್ನು ಮಧ್ಯಸ್ಥಿಕೆ ನ್ಯಾಯ ವಿಚಾರಣೆ ವೇಳೆ ಕಟ್ಟುನಿಟ್ಟಾಗಿ ಅನ್ವಯಿಸಲು ಬರುವುದಿಲ್ಲ ಎಂದು ನ್ಯಾಯಾಲಯ ತಿಳಿಸಿದೆ.
ಎವಿಡೆನ್ಸ್ ಆಕ್ಟ್‌ನ ಸೆಕ್ಷನ್ 65-ಬಿ ಮಧ್ಯಸ್ಥಿಕೆ ಪ್ರಕ್ರಿಯೆಗಳಿಗೆ ಅನ್ವಯಿಸುವುದಿಲ್ಲ, ಆದರೂ ಆರ್ಬಿಟ್ರಲ್ ಟ್ರಿಬ್ಯೂನಲ್ ಕೇವಲ ಆಕ್ಟ್ನ ಸೆಕ್ಷನ್ 65-ಬಿ ಅಡಿಯಲ್ಲಿ ಪ್ರಮಾಣಪತ್ರ ಒದಗಿಸಿಲ್ಲ ಅಥವಾ ಸರ್ಟಿಫಿಕೇಟ್ ದೋಷಪೂರಿತವಾಗಿದೆ ಎಂಬ ಕಾರಣಕ್ಕಾಗಿ ಸೇವಾ ಲೋಪದ ಕುರಿತ ಅರ್ಜಿದಾರರ ಸಂಪೂರ್ಣ ಸಾಕ್ಷ್ಯವನ್ನು ಕಡೆಗಣಿಸಲಾಗದು ಎಂದು ಹೇಳಿದೆ.