-->
NI Act: ಅವಧಿ ಮೀರಿದ ಸಾಲಕ್ಕೆ ನೀಡಲಾದ ಚೆಕ್- CrPC ಸೆಕ್ಷನ್ 482ರ ಅಡಿಯಲ್ಲಿ ಇತ್ಯರ್ಥ ಮಾಡಬಹುದೇ..?

NI Act: ಅವಧಿ ಮೀರಿದ ಸಾಲಕ್ಕೆ ನೀಡಲಾದ ಚೆಕ್- CrPC ಸೆಕ್ಷನ್ 482ರ ಅಡಿಯಲ್ಲಿ ಇತ್ಯರ್ಥ ಮಾಡಬಹುದೇ..?

NI Act: ಅವಧಿ ಮೀರಿದ ಸಾಲಕ್ಕೆ ನೀಡಲಾದ ಚೆಕ್- CrPC ಸೆಕ್ಷನ್ 482ರ ಅಡಿಯಲ್ಲಿ ಇತ್ಯರ್ಥ ಮಾಡಬಹುದೇ..?



ಚೆಕ್ ಅಮಾನ್ಯ ಪ್ರಕರಣಕ್ಕೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ಅವಧಿ ಮೀರಿದ ಸಾಲಕ್ಕೆ ನೀಡಲಾದ ಚೆಕ್ ಆಗಿದೆ ಎಂಬುದನ್ನು CrPC ಸೆಕ್ಷನ್ 482ರ ಅಡಿಯಲ್ಲಿ ಸಲ್ಲಿಸಿದ ಅರ್ಜಿಯಲ್ಲಿ ನಿರ್ಧರಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.

CrPC ಸೆಕ್ಷನ್ 482ರ ಅಡಿಯಲ್ಲಿ ಸಲ್ಲಿಸಿದ ಅರ್ಜಿಯಲ್ಲಿ ಪ್ರಕರಣದಲ್ಲಿ ಇರುವ ವಿವಾದಿತ ಚೆಕ್ ಅನ್ನು ಅವಧಿ ಮೀರಿದ ಸಾಲಕ್ಕಾಗಿ ನೀಡಲಾಗಿದೆಯೇ ಅಥವಾ ಇಲ್ಲವೇ ಎಂಬ ಪ್ರಶ್ನೆಯನ್ನು ನಿರ್ಧರಿಸಲಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಗಮನಿಸಿದೆ.

ನ್ಯಾ. ಎಸ್. ಅಬ್ದುಲ್ ನಜೀರ್ ಮತ್ತು ಜೆ.ಬಿ. ಪರ್ಡಿವಾಲಾ ಅವರನ್ನೊಳಗೊಂಡ ವಿಭಾಗೀಯ ಪೀಠ ಈ ಮಹತ್ವದ ತೀರ್ಪು ನೀಡಿದೆ.

ನೆಗೋಶಿಯೇಬಲ್ ಇನ್‌ಸ್ಟ್ರುಮೆಂಟ್ ಕಾಯ್ದೆಯ ಸೆಕ್ಷನ್ 138 ರ ಅಡಿಯಲ್ಲಿ ಸಲ್ಲಿಸಿದ ದೂರನ್ನು ಅವಧಿ ಮೀರಿದ ಸಾಲಕ್ಕೆ ಸಂಬಂಧಿಸಿದಂತೆ ನೀಡಲಾದ ಚೆಕ್ ಎಂಬ ಕಾರಣಕ್ಕೆ ರದ್ದುಗೊಳಿಸಿದ ವಿಚಾರಣಾ ನ್ಯಾಯಾಲಯದ ಆದೇಶವನ್ನು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಎತ್ತಿಹಿಡಿದಿತ್ತು. 

ಆರೋಪಿಯು ಮೂರು ವರ್ಷಗಳ ಅವಧಿಯೊಳಗೆ ಅಂದರೆ ಸಾಲವನ್ನು ವಸೂಲಿ ಮಾಡುವ ಕಾಲಮಿತಿಯ ಅವಧಿಯೊಳಗೆ ಹೇಳಲಾದ ಸಾಲದ ಸ್ವೀಕೃತಿಗೆ ಸಂಬಂಧಿಸಿದಂತೆ ಸಂಪೂರ್ಣ ದೂರಿನಲ್ಲಿ ಯಾವುದೇ ರೀತಿಯ ವಿವರಣೆಯನ್ನು ಹೊಂದಿಲ್ಲ ಎಂದು ಹೈಕೋರ್ಟ್ ಗಮನಿಸಿತ್ತು.

ಈ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯ ವಿಚಾರಣೆಯನ್ನು ನಡೆಸಿದ ನ್ಯಾಯಪೀಠ ಈ ಮಹತ್ವದ ತೀರ್ಪು ನೀಡಿದೆ.


ಪ್ರಕರಣ: ಯೋಗೇಶ್ ಜೈನ್ Vs ಸುಮೇಶ್ ಛಡ್ಡಾ

ಸುಪ್ರೀಂ ಕೋರ್ಟ್  (10-10-2022)

Ads on article

Advertise in articles 1

advertising articles 2

Advertise under the article