ವಕೀಲರ ಸಂರಕ್ಷಣಾ ಕಾಯ್ದೆ: ನ್ಯಾಯವಾದಿಗಳು ಮತ್ತೆ ಹೋರಾಟದ ಕಣಕ್ಕೆ
ವಕೀಲರ ಸಂರಕ್ಷಣಾ ಕಾಯ್ದೆ: ನ್ಯಾಯವಾದಿಗಳು ಮತ್ತೆ ಹೋರಾಟದ ಕಣಕ್ಕೆ
ವಕೀಲರ ಮೇಲಿನ ದಾಳಿ, ಹಲ್ಲೆ ಮತ್ತು ದೌರ್ಜನ್ಯವನ್ನು ತಡೆಯಲು ಶಕ್ತಿಶಾಲಿ ಕಾನೂನು ಅಗತ್ಯವಿದೆ ಎಂಬ ಹಿನ್ನೆಲೆಯಲ್ಲಿ ಈಗಾಗಲೇ ರೂಪಿಸಲಾದ ವಕೀಲರ ಸಂರಕ್ಷಣಾ ಕಾಯ್ದೆಯನ್ನು ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಸೋಮವಾರ ವಕೀಲರು ಮತ್ತೆ ಹೋರಾಟದ ಕಣಕ್ಕೆ ಧುಮುಕಿದ್ದಾರೆ.
ಕರ್ನಾಟಕ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಬೃಹತ್ ಹೋರಾಟ ನಡೆಯಲಿದ್ದು, ಬೆಂಗಳೂರು ವಕೀಲರು ಮತ್ತು ಇತರ ಜಿಲ್ಲೆಗಳ ವಕೀಲರ ಸಂಘದ ಮುಖಂಡರ ನೇತೃತ್ವದಲ್ಲಿ ಬೃಹತ್ ಪ್ರತಿಭಟನಾ Rally ನಡೆಯಲಿದೆ.
ಈ ಹೋರಾಟಕ್ಕೆ ಈಗಾಗಲೇ ರಾಜ್ಯಾದ್ಯಂತ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು, ಸರ್ಕಾರ ಕಳೆದ ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ನೀಡಿದ ಭರವಸೆಯನ್ನು ಈಡೇರಿಸಬೇಕು ಎಂದು ಒತ್ತಾಯಿಸಲಾಗಿದೆ.
ಬೆಂಗಳೂರು ವಕೀಲರ ಸಂಘದ ನೇತೃತ್ವದಲ್ಲಿ ಹಿರಿಯ ವಕೀಲರು ಸೇರಿ ಈಗಾಗಲೇ ಕರಡು ಮಸೂದೆಯನ್ನು ರೂಪಿಸಿದ್ದು, ಈ ಮಸೂದೆಗೆ ಆಡಳಿತ ಪಕ್ಷ ಬಿಜೆಪಿ ಮತ್ತು ಪ್ರತಿಪಕ್ಷ ಕಾಂಗ್ರೆಸ್ ಸಹಿತ ಎಲ್ಲ ಪಕ್ಷಗಳೂ ಸಹಮತ ವ್ಯಕ್ತಪಡಿಸಿದ್ದವು. ಆದರೆ, ಈ ಮಸೂದೆಯನ್ನು ಅಂಗೀಕರಿಸುವಲ್ಲಿ ವಿಳಂಬವೇಕೆ ಎಂಬ ವಕೀಲ ಸಮುದಾಯದ ಪ್ರಶ್ನೆಗೆ ಉತ್ತರವಿಲ್ಲದಂತಾಗಿದೆ.
ಸ್ಥಳದಾನ: ಕೆ. ಸುರೇಶ್ ಕುಮಾರ್, ವಕೀಲರು ಬೆಂಗಳೂರು