![ವಕೀಲರ ಕಿವಿ ಮೇಲೆ ಹೂವಿಟ್ಟ ಸರ್ಕಾರ?: ಒಬ್ಬ ಸಚಿವರ ಹಠಮಾರಿ ಧೋರಣೆಗೆ ಸಂರಕ್ಷಣಾ ಕಾಯ್ದೆಗೆ ಹಿನ್ನಡೆ ವಕೀಲರ ಕಿವಿ ಮೇಲೆ ಹೂವಿಟ್ಟ ಸರ್ಕಾರ?: ಒಬ್ಬ ಸಚಿವರ ಹಠಮಾರಿ ಧೋರಣೆಗೆ ಸಂರಕ್ಷಣಾ ಕಾಯ್ದೆಗೆ ಹಿನ್ನಡೆ](https://blogger.googleusercontent.com/img/b/R29vZ2xl/AVvXsEg35Q8SdiYBGbqp4aZ2BcbpdViK9IsjZHyX6uMpKUEvqCrF1ECohi4zyck0deq3fpTvADSefNuawTiWkaiB_oJqPIO5Qc4hZMIdJUe3eoV2hg0lWTXeGIhWuioiUHL6XYOFcLgWmLADlESv8WGvqynpucA3OF77_aYU7wYtjm7TNwsH78dXAggqHz5mMQ/w640-h462/Court%20Beat%20News%20(2).jpg)
ವಕೀಲರ ಕಿವಿ ಮೇಲೆ ಹೂವಿಟ್ಟ ಸರ್ಕಾರ?: ಒಬ್ಬ ಸಚಿವರ ಹಠಮಾರಿ ಧೋರಣೆಗೆ ಸಂರಕ್ಷಣಾ ಕಾಯ್ದೆಗೆ ಹಿನ್ನಡೆ
ವಕೀಲರ ಕಿವಿ ಮೇಲೆ ಹೂವಿಟ್ಟ ಸರ್ಕಾರ?: ಒಬ್ಬ ಸಚಿವರ ಹಠಮಾರಿ ಧೋರಣೆಗೆ ಸಂರಕ್ಷಣಾ ಕಾಯ್ದೆಗೆ ಹಿನ್ನಡೆ
ಕೊನೆಗೂ ವಕೀಲರ ಸಂರಕ್ಷಣಾ ಕಾಯ್ದೆಗೆ ಹಿನ್ನಡೆಯಾಗಿದೆ. ವಕೀಲರ ಸಂರಕ್ಷಣಾ ಕಾಯ್ದೆ ಜಾರಿಯಾಗಬೇಕು ಎಂದು ಪ್ರಬಲ ಒತ್ತಡದ ಮಧ್ಯೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸದನದಲ್ಲಿ ನ್ಯಾಯವಾದಿಗಳ ಸಂರಕ್ಷಣಾ ಕಾಯ್ದೆಯನ್ನು ಸದನದಲ್ಲಿ ಮಂಡಿಸಿದ್ದರು.
ಈ ಕಾಯ್ದೆಯನ್ನು ಜಾರಿಗೆ ತರಲು ವಕೀಲರು ನಿರಂತರ ಭಾರೀ ಪ್ರತಿಭಟನೆಗಳನ್ನು ನಡೆಸಿದ್ದರು. ಆದರೆ, ಅಧಿವೇಶನದ ಕೊನೆಯ ದಿನ ಕರ್ನಾಟಕ ನ್ಯಾಯವಾದಿಗಳ ಮೇಲಿನ ಹಿಂಸಾಚಾರ ನಿಷೇಧ ವಿಧೇಯಕ 2023ಕ್ಕೆ ಅನುಮೋದನೆ ನೀಡಲಾಗಲಿಲ್ಲ.
ವಿಧೇಯಕ ಚರ್ಚೆಗೆ ಬರಲು ಕಾಲಾವಕಾಶದ ಕೊರತೆ ಮತ್ತು ಕೋರಂ ಇಲ್ಲದ ಕಾರಣ ಜಾರಿಗೆ ಬರಲು ಸಾದ್ಯವಾಗಲಿಲ್ಲ ಎಂಬ ನೆಪವನ್ನು ರಾಜ್ಯ ಸರ್ಕಾರ ಮುಂದೊಡ್ಡಿದೆ. ಇದು ನಿಜಕ್ಕೂ ವಕೀಲರ ಸಮುದಾಯಕ್ಕೆ ನೋವಿನ ಸಂಗತಿ.
ಆದರೆ, ಇದಕ್ಕೆ ಕಾನೂನು ಸಚಿವರ ಹಠಮಾರಿ ಧೋರಣೆಯೇ ಕಾರಣ ಎಂಬ ಮಾತು ವಕೀಲರ ಸಮುದಾಯದಲ್ಲಿ ಪ್ರಬಲವಾಗಿ ಮೂಡಿಬಂದಿದೆ. ಅಧಿವೇಶನದಲ್ಲಿ ವಿಧೇಯಕವನ್ನು ಮಂಡಿಸುವ ಮೊದಲು, ಸಚಿವರು ಎರಡು ದಿನ ಈ ಕಾಯಿದೆಯ ಕಡತವನ್ನು ತಮ್ಮ ಕಛೇರಿಯಿಂದ ಬಿಡುಗಡೆ ಮಾಡಲು ನಿರಾಕರಿಸಿದ್ದರು.
ನಂತರ ಈ ವಿಧೇಯಕದ ಮಂಡನೆಗೂ ವಿರೋಧಿಸಿ ಹಲವಾರು ಪ್ರಯತ್ನಗಳನ್ನು ನಡೆಸಿದರು. ಆದರೆ, ಸ್ವತಃ ಮುಖ್ಯಮಂತ್ರಿಗಳೇ ಇನ್ನೊಂದು ಕಡತ ತಯಾರಿಸಿ ಮಂಡನೆ ಮಾಡಿದರು ಎಂಬುದು ಸಚಿವ ಸಂಪುಟದೊಳಗಿನ ಅಪಸ್ವರಕ್ಕೆ ಕನ್ನಡಿ ಹಿಡಿದಂತಾಗಿದೆ.
ಆದರೆ, ಅಧಿವೇಶನದ ಕೊನೆಯ ದಿನ ಕಾಲಾವಕಾಶ ಇಲ್ಲದೆ ಕಾಯ್ದೆ ಜಾರಿಗೆ ಇದ್ದ ಅವಕಾಶದಿಂದ ಕಾಲ ಮಿಂಚಿಹೋಯಿತು. ಇದೀಗ ಮುಂದಿನ ಅಧಿವೇಶನ ಯಾ ಆದ್ಯಾದೇಶವೇ ಈಗ ಉಳಿದಿರುವ ದಾರಿ ಎಂಬ ಮಾತು ವಕೀಲರ ಸಮುದಾಯದಿಂದ ಕೇಳಿಬಂದಿದೆ.
ವಿಧೇಯಕಕ್ಕೂ ವಕೀಲರ ಅಸಂತೃಪ್ತಿ!
ಅಧಿವೇಶನದಲ್ಲಿ ಮಂಡಿಸಲಾದ ನ್ಯಾಯವಾದಿಗಳ ಸಂರಕ್ಷಣಾ ಕಾಯ್ದೆ ಬಗ್ಗೆಯೂ ವಕೀಲರಲ್ಲಿ ಸಂತೃಪ್ತಿ ಮೂಡಿದೆ.
ವಕೀಲರ ಸಂರಕ್ಷಣಾ ಕಾಯ್ದೆಯ ನಿಯಮ 6 ಮತ್ತು 7 ವಕೀಲರಿಗೆ ಯಾವುದೇ ಅನುಕೂಲವಲ್ಲದ ನಿಯಮವನ್ನು ಅಳವಡಿಸಲಾಗಿದೆ.
ಈ ನಿಯಮಗಳಿಗೆ ತಿದ್ದುಪಡಿ ಮಾಡಿ, ಕರ್ತವ್ಯ ನಿರತ ವಕೀಲರನ್ನು ಬಂಧಿಸಲು ನ್ಯಾಯಿಕ ದಂಡಾಧಿಕಾರಿ/ಮ್ಯಾಜಿಸ್ಟ್ರೇಟ್ ಅವರ ಪೂರ್ವಾನುಮತಿ ಅಗತ್ಯ ಎಂಬ ನಿಯಮ ತಿದ್ದುಪಡಿ ಮಾಡಬೇಕು ಎಂಬ ಮಾತು ಕೇಳಿಬಂದಿದೆ.