63 ವರ್ಷಗಳ ಇತಿಹಾಸದ ಗುಜರಾತ್ ಹೈಕೋರ್ಟ್‌ಗೆ ಮೊದಲ ಮಹಿಳಾ ಸಿಜೆ ನೇಮಕ
63 ವರ್ಷಗಳ ಇತಿಹಾಸದ ಗುಜರಾತ್ ಹೈಕೋರ್ಟ್‌ಗೆ ಮೊದಲ ಮಹಿಳಾ ಸಿಜೆ ನೇಮಕ
63 ವರ್ಷಗಳ ಇತಿಹಾಸದಲ್ಲೇ ಗುಜರಾತ್ ಹೈಕೋರ್ಟ್‌ಗೆ ಮೊದಲ ಮಹಿಳಾ ಮುಖ್ಯ ನ್ಯಾಯಮೂರ್ತಿಯಾಗಿ ಸೋನಿಯಾ ನೇಮಕವಾಗಿದ್ದಾರೆ.
ಇದರ ಜೊತೆಗೆ ಇತರ ನಾಲ್ಕು ಹೈಕೋರ್ಟ್‌ಗಳಿಗೆ ಮುಖ್ಯ ನ್ಯಾಯಮೂರ್ತಿಗಳನ್ನು ನೇಮಕ ಮಾಡಿ ಕೇಂದ್ರ ಅಧಿಸೂಚನೆ ಹೊರಡಿಸಿದೆ.
ಗುಜರಾತ್, ಗುವಾಹಟಿ, ತ್ರಿಪುರ ಮತ್ತು ರಾಜಸ್ತಾನ ಹೈಕೋರ್ಟ್‌ಗಳಿಗೆ ಮುಖ್ಯ ನ್ಯಾಯಮೂರ್ತಿಗಳ ನೇಮಕವಾಗಿದೆ.
ಗುಜರಾತ್ ಹೈಕೋರ್ಟ್‌ಗೆ ಸೋನಿಯಾ ಗಿರಿಧರ್ ಗೋಕನಿ, ಗುವಾಹಟಿ ಹೈಕೋರ್ಟ್‌ಗೆ ನೋಂಗ್ ಮೈಕಪಂ ಕೋಟೇಶ್ವರ್ ಸಿಂಗ್, ತ್ರಿಪುರ ಹೈಕೋರ್ಟ್‌ಗೆ ಸಂದೀಪ್ ಮೆಹ್ತಾ ಮತ್ತು ರಾಜಸ್ತಾನ್ ಹೈಕೋರ್ಟ್‌ಗೆ ಜಸ್ವಂತ್ ಸಿಂಗ್ ಅವರನ್ನು ಮುಖ್ಯ ನ್ಯಾಯಮೂರ್ತಿಗಳನ್ನಾಗಿ ನೇಮಕ ಮಾಡಲಾಗಿದೆ.
ಗುಜರಾತ್ ಹೈಕೋರ್ಟ್ ಸಿಜೆ ಆಗಿದ್ದ ಅರವಿಂದ ಕುಮಾರ್ ಅವರು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ಮೇಲ್ದರ್ಜೆಗೇರಿದ್ದರು. ಅವರ ಸ್ಥಾನದಲ್ಲಿ ನ್ಯಾ. ಸೋನಿಯಾ ಹಂಗಾಮಿ ಸಿಜೆ ಆಗಿ ಕಾರ್ಯನಿರ್ವಹಿಸುತ್ತಿದ್ದರು.
ಇದೀಗ ಮುಖ್ಯ ನ್ಯಾಯಮೂರ್ತಿಯಾಗಿ ಹುದ್ದೆ ಅಲಂಕರಿಸುವ ಮೂಲಕ ನ್ಯಾ. ಸೋನಿಯಾ ಅವರು ಗುಜರಾತ್ ಇತಿಹಾಸದಲ್ಲೇ ಮೊದಲ ಸಿಜೆ ಆದ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.