ಮೈಮುಟ್ಟದೆ ವೈದ್ಯರು ರೋಗಿಗಳಿಗೆ ಚಿಕಿತ್ಸೆ ನೀಡಲಾಗದು: ನಿರೀಕ್ಷಣಾ ಜಾಮೀನು ತಿರಸ್ಕರಿಸಿದ ಕೇರಳ ಹೈಕೋರ್ಟ್
Tuesday, February 28, 2023
ಮೈಮುಟ್ಟದೆ ವೈದ್ಯರು ರೋಗಿಗಳಿಗೆ ಚಿಕಿತ್ಸೆ ನೀಡಲಾಗದು: ನಿರೀಕ್ಷಣಾ ಜಾಮೀನು ತಿರಸ್ಕರಿಸಿದ ಕೇರಳ ಹೈಕೋರ್ಟ್
ತನ್ನ ಪತ್ನಿಯ ಮೈಮುಟ್ಟಿ ಅಸಭ್ಯತನದಿಂದ ವರ್ತಿಸಿದರು ಎಂದು ಕೋಪಗೊಂಡು ವೈದ್ಯರ ಮೇಲೆ ದಾಳಿ ನಡೆಸಿದ ಆರೋಪಿಯ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಕೇರಳ ಹೈಕೋರ್ಟ್ ತಿರಸ್ಕರಿಸಿದೆ.
ಮಹಿಳೆಯಾದರೂ ಸರಿಯೇ ರೋಗಿಯ ಮೈಮುಟ್ಟದೆ, ಸೂಕ್ತ ಪರಿಶೀಲನೆ ನಡೆಸದೆ ವೈದ್ಯರು ರೋಗಿಗಳಿಗೆ ಚಿಕಿತ್ಸೆ ನೀಡಲಾಗದು ಎಂದು ಎ. ಬದ್ರುದ್ದೀನ್ ನೇತೃತ್ವದ ಏಕಸದಸ್ಯ ನ್ಯಾಯಪೀಠ ಹೇಳಿದೆ.
ಮೈಮುಟ್ಟದೆ ಚಿಕಿತ್ಸೆ ನೀಡಬೇಕೆಂದು ಬಯಸುವುದು ವೈದ್ಯಕೀಯ ವೃತ್ತಿಯನ್ನು ನಡೆಸಲು ಕಷ್ಟಸಾಧ್ಯವಾಗುವಂತೆ ಮಾಡುತ್ತದೆ. ಮೈಮುಟ್ಟಿದರೆ ಅಸಭ್ಯವಾಗಿ ವರ್ತಿಸಿದರು ಎಂದು ಪರಿಗಣಿಸಲಾಗದು ಎಂದು ನ್ಯಾಯಪೀಠ ಹೇಳಿದೆ.
ಆದರೂ, ಕೆಲವೊಮ್ಮೆ ತಮ್ಮ ಮಿತಿಯನ್ನು ಮೀರಿ ವೈದ್ಯರು ನಡೆಸುವ ಅತಿರೇಕದ ವರ್ತನೆಯನ್ನು ಕಡೆಗಣಿಸಲಾಗದು ಎಂದು ನ್ಯಾಯಪೀಠ ಗಮನಿಸಿತು.
ಪ್ರಕರಣ: ಜಮ್‌ಶಿದ್ ಪಿ.ವಿ. Vs ಕೇರಳ ರಾಜ್ಯ (ಕೇರಳ ಹೈಕೋರ್ಟ್)