ನ್ಯಾಯಾಂಗದಲ್ಲಿ ಮಧ್ಯಪ್ರವೇಶ: ಕಾರ್ಯಾಂಗಕ್ಕೆ ತಕ್ಕ ಪ್ರತ್ಯುತ್ತರ- ನ್ಯಾಯಾಂಗಕ್ಕೆ ಹಿರಿಯ ವಕೀಲ ದುಷ್ಯಂತ್ ದವೆ ಸಲಹೆ
ನ್ಯಾಯಾಂಗದಲ್ಲಿ ಮಧ್ಯಪ್ರವೇಶ: ಕಾರ್ಯಾಂಗಕ್ಕೆ ತಕ್ಕ ಪ್ರತ್ಯುತ್ತರ- ನ್ಯಾಯಾಂಗಕ್ಕೆ ಹಿರಿಯ ವಕೀಲ ದುಷ್ಯಂತ್ ದವೆ ಸಲಹೆ
ನ್ಯಾಯಾಂಗ ಮುಕ್ತ ಮತ್ತು ನಿರ್ಭೀತವಾಗಿರಬೇಕು. ನ್ಯಾಯಾಂಗದ ಪ್ರಕ್ರಿಯೆಯಲ್ಲಿ ಶಾಸಕಾಂಗ ಮತ್ತು ಕಾರ್ಯಾಂಗ ಮೂಗು ತೂರಿಸುವ ಪ್ರವೃತ್ತಿ ಇತ್ತೀಚಿಗೆ ಗಣನೀಯವಾಗಿ ಹೆಚ್ಚುತ್ತಿದೆ ಎಂದು ಸುಪ್ರೀಂ ಕೋರ್ಟ್ ಹಿರಿಯ ವಕೀಲ ದುಷ್ಯಂತ್ ದವೆ ಆತಂಕ ವ್ಯಕ್ತಪಡಿಸಿದ್ದಾರೆ.
ಪದೇ ಪದೇ ನಡೆಯುತ್ತಿರುವ ಈ ಅತಿಕ್ರಮಣ, ವ್ಯಾಪ್ತಿ ಮೀರಿ ವರ್ತಿಸುವ ಪ್ರವೃತ್ತಿ ತಡೆಗಟ್ಟಲು ನ್ಯಾಯಾಂಗ ಸೂಕ್ತ ಪ್ರತ್ಯುತ್ತರ ನೀಡಬೇಕಾಗಿದ ಅಗತ್ಯವಿದೆ ಎಂದು ಅವರು ಪ್ರತಿಪಾದಿಸಿದರು.
ನ್ಯಾಯಾಂಗದ ಪ್ರಕ್ರಿಯೆಯಲ್ಲಿ ಸರ್ಕಾರ ಹಸ್ತಕ್ಷೇಪ ಮಾಡಿದರೆ ಅದಕ್ಕೆ ತೀಕ್ಷ್ಣ ಪ್ರತ್ಯುತ್ತರ ನೀಡಬೇಕಾಗಿದೆ. ಆದರೆ, ಮಧ್ಯಪ್ರವೇಶ ಮಾಡಲಾಗುತ್ತಿದೆ ಎಂಬುದನ್ನು ನ್ಯಾಯಾಂಗ ಹೇಳುತ್ತಿಲ್ಲ. ಹಾಗಾಗಿ, ನಾವು ಏನೂ ಮಾಡಲಾಗದ ಪರಿಸ್ಥಿತಿಗೆ ಬಂದಿದ್ದೇವೆ. ನ್ಯಾಯಾಂಗ ಈಗಲಾದರೂ ಎಚ್ಚೆತ್ತು ಎದ್ದು ನಿಲ್ಲಬೇಕಿದೆ ಎಂದು ಅವರು ಕರೆ ನೀಡಿದರು.
ಇಸ್ರೇಲ್‌ನಲ್ಲಿ ಬೆಂಜಮಿನ್ ನೆತನ್ಯಾಹು ಅವಧಿಯಲ್ಲಿ ಮತ್ತು ಪಾಕಿಸ್ತಾನದಲ್ಲಿ ಪರ್ವೇಜ್ ಮುಷರಫ್ ಸಮಯದಲ್ಲಿ ಆಯಾ ದೇಶದಲ್ಲಿ ನ್ಯಾಯಾಂಗದ ಮೇಲೆ ದಾಳಿಯಾಯಿತು. ಆಗ ನ್ಯಾಯಾಂಗ, ವಕೀಲರು, ಸಮಾಜ ಇದನ್ನು ವಿರೋಧಿಸಿತು. ಪ್ರಜಾಪ್ರಭುತ್ವ ಉಳಿಯಿತು ಎಂದು ದವೆ ಉಲ್ಲೇಖಿಸಿದರು.
ನ್ಯಾ. ಯು.ಯು. ಲಲಿತ್, ನ್ಯಾ. ಗುಪ್ತರಂತಹ ಅನೇಕ ಮಹೋನ್ನತ ನ್ಯಾಯಾಧೀಶರನ್ನು ನನ್ನ 44 ವರ್ಷಗಳ ವೃತ್ತಿ ಜೀವನದಲ್ಲಿ ನೋಡಿದ್ದೇನೆ. ಆದರೆ, ಇಂತಹ ಪೀಳಿಗೆ ನಶಿಸುತ್ತಿದೆ. ನ್ಯಾಯಾಂಗದಲ್ಲಿ ಈಗಿನ ಪೀಠಾಸೀನ ಅಧಿಕಾರಿಗಳು ಈಗ ದೊಡ್ಡ ಸಂಖ್ಯೆಯಲ್ಲಿ ಪ್ರಶ್ನಾರ್ಹರಾಗಿದ್ಧಾರೆ. ಹೆಚ್ಚಿವರಲ್ಲಿ ಪ್ರಾವೀಣ್ಯತೆಯಲ್ಲಿ ಕೊರತೆ ಕೊರತೆ ಇದ್ದರೆ, ಹಲವರಲ್ಲಿ ಜ್ಞಾನದ ಕೊರತೆ ಇದೆ, ಬದ್ಧತೆಯ ಕೊರತೆ ಹೆಚ್ಚಿನವರಲ್ಲಿದೆ ಎಂದು ದುಷ್ಯಂತ್ ದವೆ ಮಾರ್ಮಿಕವಾಗಿ ನುಡಿದರು.
ಸಾಮಾಜಿಕ ಕಾರ್ಯಕರ್ತರು, ಪ್ರತಿಪಕ್ಷ ನಾಯಕರನ್ನು ಟಾರ್ಗೆಟ್ ಮಾಡಿ ಕ್ಷುಲ್ಲಕ ಕಾರಣಗಳಿಗೆ ಬಂಧಿಸಲಾಗುತ್ತಿದೆ. ಹಾಸ್ಯಾಸ್ಪದ ಎಂದರೆ ಪ್ರಧಾನ ಮಂತ್ರಿಯನ್ನು ತಮಾಷೆ ಮಾಡಿದ Stand up Comedian ಗಳನ್ನೂ ಬಂಧಿಸಲಾಗುತ್ತಿದೆ. ವಿಚಾರಣಾ ನ್ಯಾಯಾಲಯದಲ್ಲಿ ಅವರಿಗೆ ಜಾಮೀನು ಕೂಡ ಸುಲಭದಲ್ಲಿ ಸಿಗುತ್ತಿಲ್ಲ. ಇದು ನಿಜಕ್ಕೂ ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ದುಷ್ಯಂತ್ ದವೆ ಆಕ್ರೋಶ ವ್ಯಕ್ತಪಡಿಸಿದರು.
..