ವಕೀಲರಿಗೆ ಆರೋಗ್ಯ ವಿಮೆ: ಕಾರ್ಪಸ್ ಫಂಡ್‌ಗೆ ಶೇ. 50 ಕೊಡುಗೆ- ರಾಜ್ಯ ಸರ್ಕಾರ ಅನುಮೋದನೆ
ವಕೀಲರಿಗೆ ಆರೋಗ್ಯ ವಿಮೆ: ಕಾರ್ಪಸ್ ಫಂಡ್‌ಗೆ ಶೇ. 50 ಕೊಡುಗೆ- ರಾಜ್ಯ ಸರ್ಕಾರ ಅನುಮೋದನೆ
ರಾಜ್ಯದ ವಕೀಲರಿಗೆ ಆರೋಗ್ಯ ವಿಮಾ ಸೌಲಭ್ಯ ದೊರೆಯಬೇಕು ಎಂಬುದು ಕರ್ನಾಟಕ ರಾಜ್ಯ ವಕೀಲ ಪರಿಷತ್ತಿನ ಒತ್ತಾಸೆ. ಇದಕ್ಕೆ ರಾಜ್ಯ ಸರ್ಕಾರ ಆರ್ಥಿಕ ಸಂಪನ್ಮೂಲ ಒದಗಿಸಬೇಕು ಎಂಬ ಬೇಡಿಕೆ ಬಹುಕಾಲದಿಂದ ಮಾಡುತ್ತಲೇ ಬರಲಾಗಿದೆ.
ಕಳೆದ 2022ರ ಜುಲೈನಲ್ಲಿ ರಾಜ್ಯ ಸರ್ಕಾರ ನೀಡಿದ ಭರವಸೆಯಂತೆ, ಈ ಬಾರಿಯ ಬಜೆಟ್‌ನಲ್ಲಿ 50 ಕೋಟಿ ರೂ. ಅನುದಾನವನ್ನು ಘೋಷಿಸಲಾಗಿದೆ.
ಎಲ್ಲ ವಕೀಲರಿಗೂ ಆರೋಗ್ಯ ವಿಮೆ ಒದಗಿಸಬೇಕು ಎಂದು ಕರ್ನಾಟಕ ರಾಜ್ಯ ವಕೀಲರ ಪರಿಷತ್ತು ಬಯಸಿತ್ತು. ಇದಕ್ಕಾಗಿ ಒಂದು ಕಾರ್ಪಸ್ ಫಂಡ್ ಸ್ಥಾಪಿಸಲು KSBC ಉದ್ದೇಶಿಸಿತ್ತು. ಆದರೆ, ಇದಕ್ಕೆ ಅನುದಾನದ ಕೊರತೆಯಿಂದ ಈ ಕಾರ್ಯ ಮುಂದೂಡುತ್ತಲೇ ಬಂದಿತ್ತು.
ಈ ಬಗ್ಗೆ ವಕೀಲರು ಸರ್ಕಾರದ ಜೊತೆಗೆ ನಡೆಸಿದ ಸಂಧಾನ ಫಲ ಕೊಟ್ಟ ಹಿನ್ನೆಲೆಯಲ್ಲಿ 2022ರ ಜೂನ್ 24ರಂದು ಸರ್ಕಾರ ಆದೇಶ ಹೊರಡಿಸಿತ್ತು. ಈ ನಡವಳಿಯಲ್ಲಿ ಸರ್ಕಾರ ತಾನು 50 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡುವ ಘೋಷಣೆಯನ್ನು ಮಾಡಿತ್ತು.
ಈ ಮೂಲ ನಿಧಿ ಒಂದು ಬಾರಿಯ ಅನುದಾನ ಮಾತ್ರ. ಅದನ್ನು ಮುಂದಕ್ಕೆ ತೆಗೆದುಕೊಂಡು ಹೋಗುವುದು ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಹೊಣೆ. ಈ ಕಾರಣದಿಂದ ಶೇ. 100 ಅಂದರೆ 100 ಕೋಟಿ ರೂ.ಗಳನ್ನು ಸರ್ಕಾರವೇ ಭರಿಸಬೇಕು ಎಂದು ವಕೀಲರ ಒತ್ತಾಯಿಸಿದ್ದರು.
ಆದರೆ, ಬೊಮ್ಮಾಯಿ ಸರ್ಕಾರ ಈ ಬಾರಿಯ ಬಜೆಟ್‌ನಲ್ಲಿ ವಕೀಲರ ಆರೋಗ್ಯ ವಿಮೆಯ ಕಾರ್ಪಸ್ ಫಂಡ್‌ಗೆ ತನ್ನ ಕೊಡುಗೆಯಾಗಿ ಶೇ. 50ನ್ನು ನೀಡುವುದಾಗಿ ಘೋಷಿಸಿದೆ.
ಇದನ್ನೂ ಓದಿ;
ವಕೀಲರಿಗೆ ಆರೋಗ್ಯ ವಿಮೆ: ವಕೀಲರ ಸಂಘದ ಮೂಲಧನ ಸ್ಥಾಪನೆಗೆ 50 ಕೋಟಿ ಅನುದಾನ