ವಕೀಲರ ಪಾಲಿಗೆ ಐತಿಹಾಸಿಕ ಕ್ಷಣ: ನ್ಯಾಯವಾದಿಗಳ ಕಾಯ್ದೆಗೆ ಅನುಮೋದನೆ
Thursday, February 23, 2023
ವಕೀಲರ ಪಾಲಿಗೆ ಐತಿಹಾಸಿಕ ಕ್ಷಣ: ನ್ಯಾಯವಾದಿಗಳ ಕಾಯ್ದೆಗೆ ಅನುಮೋದನೆ
ಬಹು ಮಹತ್ವಾಕಾಂಕ್ಷೆಯ ವಕೀಲರ ಸಂರಕ್ಷಣಾ ಕಾಯ್ದೆಯನ್ನು ರಾಜ್ಯ ವಿಧಾನಸಭೆಯಲ್ಲಿ ಮಂಡಿಸಲಾಗಿದೆ.
ಈ ಕಾಯ್ದೆ ವಕೀಲರ ಬಹು ದಿನದ ಬೇಡಿಕೆಯಾಗಿತ್ತು. ಈ ಕಾಯ್ದೆಗಾಗಿ ವಕೀಲರ ಸಮುದಾಯದಿಂದ ಪ್ರಬಲ ಒತ್ತಾಯ ಮತ್ತು ಹೋರಾಟಗಳು ನಡೆದಿದ್ದವು.
ರಾಜ್ಯಾದ್ಯಂತ ಹೋರಾಟದ ಫಲವಾಗಿ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರ ಈ ಕಾಯ್ದೆಯನ್ನು ಸದನದಲ್ಲಿ ಮಂಡಿಸಿದೆ.