-->
ಕಾಮಗಾರಿ ನಡೆಯದೆ ಐದು ಕೋಟಿ ನಕಲಿ ಬಿಲ್: ಬಿಜೆಪಿ ಶಾಸಕನಿಗೆ ಜೈಲು!

ಕಾಮಗಾರಿ ನಡೆಯದೆ ಐದು ಕೋಟಿ ನಕಲಿ ಬಿಲ್: ಬಿಜೆಪಿ ಶಾಸಕನಿಗೆ ಜೈಲು!

ಕಾಮಗಾರಿ ನಡೆಯದೆ ಐದು ಕೋಟಿ ನಕಲಿ ಬಿಲ್: ಬಿಜೆಪಿ ಶಾಸಕನಿಗೆ ಜೈಲು!





ನಕಲಿ ಬಿಲ್ ಸೃಷ್ಟಿಸಿ ಅಕ್ರಮ ಎಸಗಿದ ಅಪರಾಧದಲ್ಲಿ ಆಡಳಿತಾರೂಢ ಪಕ್ಷ ಬಿಜೆಪಿಯ ಶಾಸಕ ನೆಹರೂ ಓಲೇಕಾರ್ ಅವರಿಗೆ ಜೈಲು ಶಿಕ್ಷೆ ವಿಧಿಸಲಾಗಿದೆ.



ಹಾವೇರಿ ನಗರಸಭೆಯ ಕಾಮಗಾರಿಗಳನ್ನು ನಡೆಯದಿದ್ದರೂ ನಡೆದಿದೆ ಎಂದು ಬಿಂಬಿಸಿ ಅಕ್ರಮವಾಗಿ ನಕಲಿ ಬಿಲ್ ಸೃಷ್ಟಿ ಮಾಡಲಾಗಿತ್ತು. ಈ ಮೂಲಕ ಐದು ಕೋಟಿ ರೂಪಾಯಿಗೂ ಅಧಿಕ ಅಕ್ರಮ ಎಸಗಲಾಗಿತ್ತು. ಸ್ಥಳೀಯ ಸಾಮಾಜಿಕ ಕಾರ್ಯಕರ್ತ ಶಶಿಧರ್ ಮಹಾದೇವಪ್ಪ ಹಳ್ಳಿಕೆರೆ ಈ ಬಗ್ಗೆ ದೂರು ಸಲ್ಲಿಸಿದ್ದರು.



ಸದ್ರಿ ದೂರನ್ನು ವಿಚಾರಣೆಗೆ ಎತ್ತಿಕೊಂಡ ಜನಪ್ರತಿನಿಧಿಗಳ ನ್ಯಾಯಾಲಯ, ಆರೋಪ ಸಾಬೀತಾಗಿದೆ ಎಂದು ಪ್ರಕಟಿಸಿದೆ. ಅಲ್ಲದೆ, ಪ್ರಕರಣದ ಆರೋಪಿಗಳಾದ ಶಾಸಕ ನೆಹರೂ ಓಲೇಕಾರ್ ಹಾಗೂ ಇತರ ಎಂಟು ಮಂದಿಗೆ ಎರಡು ವರ್ಷಗಳ ಜೈಲು ಶಿಕ್ಷೆ ಹಾಗೂ ತಲಾ ಎರಡು ಸಾವಿರ ರೂ.ಗಳ ದಂಡ ವಿಧಿಸಿ ತೀರ್ಪು ನೀಡಿದೆ.



ಈ ತೀರ್ಪು ಹಿನ್ನೆಲೆಯಲ್ಲಿ ಶಾಸಕ ನೆಹರೂ ಓಲೇಕಾರ್ ಅವರು ಶಾಸಕ ಸ್ಥಾನದಿಂದ ತಕ್ಷಣದಿಂದ ಜಾರಿಯಾಗುವಂತೆ ಅನರ್ಹಗೊಂಡಿದ್ದಾರೆ.


Ads on article

Advertise in articles 1

advertising articles 2

Advertise under the article