ಎಸ್‌ಎಸ್‌ಎಲ್‌ಸಿ, ಪಿಯುಸಿ ಆದವರಿಗೆ ಕೋರ್ಟಿನಲ್ಲಿ ಉದ್ಯೋಗ: ಇಲ್ಲಿದೆ ಮಾಹಿತಿ
ಎಸ್‌ಎಸ್‌ಎಲ್‌ಸಿ, ಪಿಯುಸಿ ಆದವರಿಗೆ ಕೋರ್ಟಿನಲ್ಲಿ ಉದ್ಯೋಗ: ಇಲ್ಲಿದೆ ಮಾಹಿತಿ
ತನ್ನ ವಿವಿಧ ಕೋರ್ಟ್‌ಗಳಲ್ಲಿ ಖಾಲಿ ಇರುವ ಟೈಪಿಸ್ಟ್/ಕಾಪಿಸ್ಟ್ ಮತ್ತು ಜವಾನ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ನಿಟ್ಟಿನಲ್ಲಿ ಧಾರವಾಡದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ಕಚೇರಿಯು ದಿನಾಂಕ 31-01-2023ರಂದು ಅಧಿಸೂಚನೆ ಹೊರಡಿಸಿದೆ.
ಅಧಿಸೂಚನೆಯ ಸಂಖ್ಯೆ: ADM./01.2023 ಆಗಿರುತ್ತದೆ. ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಈ ಹುದ್ದೆಗೆ ಆಯ್ಕೆ ಬಯಸಿ ತಮ್ಮ ಅರ್ಜಿಗಳನ್ನು ಹಾಕಬಹುದು.
ಹೆಚ್ಚಿನ ವಿವರಗಳು ಹೀಗಿವೆ...
ಬೆರಳಚ್ಚು ನಕಲುಗಾರರು - 02 ಹುದ್ದೆಗಳು
ಜವಾನ ಹುದ್ದೆ - 29 ಹುದ್ದೆ
ಬೆರಳಚ್ಚು ನಕಲುಗಾರರು ಹುದ್ದೆಗೆ ಪಿಯುಸಿ ಯಾ ತತ್ಸಮಾನ ಮತ್ತು ಬೆರಳಚ್ಚು ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು.
ಜವಾನ ಹುದ್ದೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಪಾಸ್ ಆಗಿರಬೇಕು. ಕನ್ನಡ ಓದಲು ಬರೆಯಲು ತಿಳಿದಿರಬೇಕು.
ವಯಸ್ಸು ಕನಿಷ್ಟ 18 ವರ್ಷ ಆಗಿರಬೇಕು.
ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸತಕ್ಕದ್ದು.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 1-03-2023
ಹೆಚ್ಚಿನ ವಿವರಗಳಿಗೆ ಈ ಕೆಳಗಿನ ಜಾಲತಾಣ ಲಿಂಕ್ ಕ್ಲಿಕ್ ಮಾಡಿ.
https://districts.ecourts.gov.in/dharwad-onlinerecruitment
ಅಧಿಸೂಚನೆ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ
https://districts.ecourts.gov.in/sites/default/files/Notification01-2023.pdf
.