ಸುಪ್ರೀಂ ಕೋರ್ಟ್‌ಗೆ ಮತ್ತೆ ಐವರು ನ್ಯಾಯಮೂರ್ತಿಗಳು : ಇನ್ನು ಖಾಲಿ ಇರೋದು ಕೇವಲ ಎರಡೇ ಹುದ್ದೆ!
ಸುಪ್ರೀಂ ಕೋರ್ಟ್‌ಗೆ ಮತ್ತೆ ಐವರು ನ್ಯಾಯಮೂರ್ತಿಗಳು : ಇನ್ನು ಖಾಲಿ ಇರೋದು ಕೇವಲ ಎರಡೇ ಹುದ್ದೆ!
ದೇಶದ ಅತ್ಯುನ್ನತ ನ್ಯಾಯ ದೇಗುಲ ಸುಪ್ರೀಂ ಕೋರ್ಟ್‌ಗೆ ಮತ್ತೆ ಐವರು ಹೊಸ ನ್ಯಾಯಮೂರ್ತಿಗಳನ್ನು ನೇಮಕ ಮಾಡಲಾಗಿದೆ. ಕೇಂದ್ರ ಸರ್ಕಾರ ಈ ಬಗ್ಗೆ ಅಧಿಸೂಚನೆ ಹೊರಡಿಸಿದ್ದು, ಇನ್ನು ಖಾಲಿ ಇರುವ ನ್ಯಾಯಾಧೀಶರ ಹುದ್ದೆ ಕೇವಲ ಎರಡಕ್ಕೆ ಇಳಿದಿದೆ.
ಸುಪ್ರೀಂ ಕೋರ್ಟ್‌ನ ನೂತನ ನ್ಯಾಯಮೂರ್ತಿಗಳಾಗಿ ನೇಮಕಗೊಂಡ ಐವರು ನ್ಯಾಯಮೂರ್ತಿಗಳ ವಿವರ ಇಂತಿದೆ
ನ್ಯಾ. ಪಂಕಜ್ ಮಿತ್ತಲ್, ರಾಜಸ್ತಾನ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ
ನ್ಯಾ. ಸಂಜಯ್ ಕರೋಲ್, ಪಟ್ನಾ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ
ನ್ಯಾ. ಪಿ. ವಿ. ಸಂಜಯ್ ಕುಮಾರ್, ಮಣಿಪುರ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ
ನ್ಯಾ. ಅಹ್ಸನುದ್ದೀನ್ ಅಮಾನುಲ್ಲ, ಪಟ್ನಾ ಹೈಕೋರ್ಟ್ ಹಾಲಿ ನ್ಯಾಯಮೂರ್ತಿ
ನ್ಯಾ. ಮನೋಜ್ ಮಿಸ್ರ, ಅಲಹಾಬಾದ್ ಹೈಕೋರ್ಟ್ ಹಾಲಿ ನ್ಯಾಯಮೂರ್ತಿ
ಈ ಎಲ್ಲ ಐವರು ಹೈಕೋರ್ಟ್ ನ್ಯಾಯಮೂರ್ತಿಗಳಿಗೆ ಪದೋನ್ನತಿ ನೀಡಲು ಸುಪ್ರೀಂ ಕೋರ್ಟ್ ಕೊಲೀಜಿಯಂ 2022ರ ಡಿಸೆಂಬರ್ 13ರಂದು ಶಿಫಾರಸು ಮಾಡಿತ್ತು. ಈ ನೇಮಕಾತಿ ಬಳಿಕ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ಸಂಖ್ಯೆ 32ಕ್ಕೆ ಏರಿದೆ. ಇನ್ನು ಒಟ್ಟು ನ್ಯಾಯಮೂರ್ತಿ ಹುದ್ದೆಗಳ ಪೈಕಿ ಕೇವಲ ಎರಡು ಮಾತ್ರ ಖಾಲಿ ಉಳಿದಿವೆ.
ನೇಮಕ ವಿಳಂಬ ಮಾಡಿದ್ದಕ್ಕಾಗಿ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರವನ್ನು ಶುಕ್ರವಾರ ತರಾಟೆಗೆ ತೆಗೆದುಕೊಂಡಿತ್ತು. ನ್ಯಾಯಮೂರ್ತಿಗಳ ಹುದ್ದೆಗೆ ಇವರ ಹೆಸರನ್ನು 2022ರ ಡಿಸೆಂಬರ್‌ನಲ್ಲಿ ಶಿಫಾರಸು ಮಾಡಲಾಗಿತ್ತು.