-->
ಮಂಚಕ್ಕೇರಲು ಒತ್ತಾಯಿಸಿದ ಪೊಲೀಸ್ ಅಧಿಕಾರಿ: ಜಡ್ಜ್ ಮುಂದೆಯೇ ಮಹಿಳಾ ಆಯೋಗಕ್ಕೆ ದೂರು

ಮಂಚಕ್ಕೇರಲು ಒತ್ತಾಯಿಸಿದ ಪೊಲೀಸ್ ಅಧಿಕಾರಿ: ಜಡ್ಜ್ ಮುಂದೆಯೇ ಮಹಿಳಾ ಆಯೋಗಕ್ಕೆ ದೂರು

ಮಂಚಕ್ಕೇರಲು ಒತ್ತಾಯಿಸಿದ ಪೊಲೀಸ್ ಅಧಿಕಾರಿ: ಜಡ್ಜ್ ಮುಂದೆಯೇ ಮಹಿಳಾ ಆಯೋಗಕ್ಕೆ ದೂರು





ಪೊಲೀಸ್ ಅಧಿಕಾರಿಯೊಬ್ಬರು ತನ್ನನ್ನು ಮಂಚ ಹಂಚಿಕೊಳ್ಳಲು ಹಾಗೂ ತನ್ನೊಂದಿಗೆ ಸೆಕ್ಸ್ ಮಾಡುವಂತೆ ಬಲವಂತಪಡಿಸಿದ್ದಾರೆ ಎಂದು ವ್ಯಕ್ತಿಯೊಬ್ಬರು ಜಡ್ಜ್ ಸಮ್ಮುಖದಲ್ಲೇ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ.



ಈ ಘಟನೆ ನಡೆದಿರುವುದು ಮಂಗಳೂರಿನ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ನೇತ್ರಾವತಿ ಸಭಾಂಗಣದಲ್ಲಿ.



ಲಿಂಗತ್ವ ಅಲ್ಪಸಂಖ್ಯಾತರ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಲು ಮಹಿಳಾ ಆಯೋಗದಿಂದ ಕಾರ್ಯಾಗಾರ ಏರ್ಪಡಿಸಲಾಗಿತ್ತು. ಈ ಕಾರ್ಯಾಗಾರದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾಧ ಶೋಭಾ ಬಿ.ಜೆ. ಅವರೂ ಉಪಸ್ಥಿತರಿದ್ದರು.



ಮಂಗಳೂರಿನ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತನ್ನೊಂದಿಗೆ ಲೈಂಗಿಕ ಕ್ರಿಯೆ ನಡೆಸುವಂತೆ ಒತ್ತಾಯಿಸಿದ್ದಾರೆ ಎಂದು ಲಿಂಗತ್ವ ಅಲ್ಪಸಂಖ್ಯಾತೆಯೊಬ್ಬರು ಬಹಿರಂಗವಾಗಿ ಆರೋಪ ಮಾಡಿದ್ದಾರೆ.



ಈ ಪ್ರಕರಣವನ್ನು ಸಮಗ್ರವಾಗಿ ತನಿಖೆ ನಡೆಸಬೇಕು. ಪೊಲೀಸ್ ಅಧಿಕಾರಿಯನ್ನು ತಕ್ಷಣ ಅಮಾನತು ಮಾಡಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಎಸ್‌ಡಿಪಿಐ ಒತ್ತಾಯಿಸಿದೆ.

Ads on article

Advertise in articles 1

advertising articles 2

Advertise under the article