ವಕೀಲರ ಸಂರಕ್ಷಣಾ ಕಾಯ್ದೆಗೆ ಮತ್ತೆ ವಿಘ್ನ: ನಾಲ್ವರು ಹಿರಿಯ ಸಚಿವರಿಂದ ವಿರೋಧ
ವಕೀಲರ ಸಂರಕ್ಷಣಾ ಕಾಯ್ದೆಗೆ ಮತ್ತೆ ವಿಘ್ನ: ನಾಲ್ವರು ಹಿರಿಯ ಸಚಿವರಿಂದ ವಿರೋಧ
ವಕೀಲರ ಸಮುದಾಯಕ್ಕೊಂದು ಕಹಿ ಸುದ್ದಿ. ವಕೀಲರ ಹಿತರಕ್ಷಣಾ ಕಾಯ್ದೆ ಜಾರಿಗೆ ಮತ್ತೊಂದು ಅಡ್ಡಿ ಉಂಟಾಗಿದೆ.
ವಕೀಲರ ಹಿತ ರಕ್ಷಣೆಗಾಗಿ ಕಾಯ್ದೆ ಜಾರಿ ಮಾಡಬೇಕು ಎಂಬ ಕೂಗಿಗೆ ಸರಕಾರದಲ್ಲಿ ಒಡಕು ಮೂಡಿದೆ.
ಸರ್ಕಾರ ವಕೀಲರ ಬೇಡಿಕೆಗೆ ಮೌಖಿಕವಾಗಿ ಸ್ಪಂದಿಸಿದ್ದರೂ ಸಚಿವ ಸಂಪುಟದ ಈ ಬಗ್ಗೆ ಒಮ್ಮತ ಮೂಡಿಲ್ಲ.
ವಕೀಲರ ಹಿತರಕ್ಷಣೆ ಕಾಯ್ದೆ ಜಾರಿ ಮಾಡುವುದನ್ನು ಸಚಿವ ಸಂಪುಟ ಸಭೆಯಲ್ಲಿ ಚರ್ಚೆಗೆ ಎತ್ತಿಕೊಳ್ಳಲಾಯಿತು. ಸಚಿವ ಸಂಪುಟದ ಮುಂದೆ ವಕೀಲರ ರಕ್ಷಣಾ ಕಾಯಿದೆ ತರುವ ಪ್ರಸ್ತಾಪಕ್ಕೆ ನಾಲ್ವರು ಸಚಿವರು ವಿರೋಧ ವ್ಯಕ್ತಪಡಿಸಿದರು. ಇನ್ನೂ ಮುಂದುವರಿದು, ಹಿರಿಯ ಸಚಿವರೊಬ್ಬರು ಲಿಖಿತವಾಗಿ ತಮ್ಮ ಅಸಮ್ಮತಿಯನ್ನು ವ್ಯಕ್ತಪಡಿಸಿದರು.
ಈ ಬಗ್ಗೆ ಕೆಲ ಕಾಲ ಚರ್ಚೆ ನಡೆದ ಬಳಿಕ ಅಂತಿಮವಾಗಿ ಸದನದಲ್ಲಿ ವಕೀಲರ ಸಂರಕ್ಷಣಾ ಕಾಯ್ದೆಯನ್ನು ಮಂಡನೆ ಮಾಡಬೇಕು ಎನ್ನುವ ವಿಚಾರವನ್ನು ಮುಖ್ಯಮಂತ್ರಿಗಳ ವಿವೇಚನೆಗೆ ಬಿಡಲಾಗಿದೆ.
ಇದರಿಂದ ವಕೀಲ ಸಮುದಾಯದ ಬಹು ನಿರೀಕ್ಷಿತ "ವಕೀಲರ ಸಂರಕ್ಷಣಾ ಕಾಯ್ದೆ' ಮತ್ತೆ ನೆನೆಗುದಿಗೆ ಬಿದ್ದಂತಾಗಿದೆ.