ಜಾತಿ ನಿಂದನೆ ಉದ್ದೇಶಪೂರ್ವಕವಾಗಿದ್ದರೆ ಮಾತ್ರ ಅಪರಾಧ: ಎಸ್‌ಸಿ/ಎಸ್‌ಟಿ ಕಾಯ್ದೆ ದೌರ್ಜನ್ಯ ತಡೆ ಕಾಯ್ದೆಗೆ ಹೈಕೋರ್ಟ್ ಪರಿಭಾಷೆ
ಜಾತಿ ನಿಂದನೆ ಉದ್ದೇಶಪೂರ್ವಕವಾಗಿದ್ದರೆ ಮಾತ್ರ ಅಪರಾಧ: ಎಸ್‌ಸಿ/ಎಸ್‌ಟಿ ಕಾಯ್ದೆ ದೌರ್ಜನ್ಯ ತಡೆ ಕಾಯ್ದೆಗೆ ಹೈಕೋರ್ಟ್ ಪರಿಭಾಷೆ
ಪರಿಶಿಷ್ಟ ಜಾತಿ ಅಥವಾ ಪಂಗಡದ ವ್ಯಕ್ತಿಯನ್ನು ಅವಮಾನ ಮಾಡುವ ಉದ್ದೇಶ ಇಲ್ಲದೆ ಜಾತಿ ಹೆಸರು ಪ್ರಸ್ತಾಪಿಸದರೆ ಅದು ಎಸ್‌ಸಿ, ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಅಪರಾಧ ಆಗುವುದಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಸ್ಪಷ್ಟಪಡಿಸಿದೆ.
ಪರಿಶಿಷ್ಟ ವ್ಯಕ್ತಿಯನ್ನು ಅವಮಾನ ಮಾಡಲು ಇಲ್ಲವೇ ಉದ್ದೇಶಪೂರ್ವಕವಾಗಿ ಜಾತಿ ಹಿಡಿದು ನಿಂದಿಸಿದರೆ ಅದು ಎಸ್‌ಸಿ ಎಸ್‌ಟಿ ದೌರ್ಜನ್ಯ ಕಾಯ್ದೆಯಡಿ ಅಪರಾಧವಾಗುತ್ತದೆ ಎಂದು ನ್ಯಾಯಪೀಠ ಹೇಳಿದೆ.
ಎಸ್‌ಸಿ/ಎಸ್‌ಟಿ ಕಾಯ್ದೆ ದೌರ್ಜನ್ಯ ತಡೆ ಕಾಯ್ದೆ ಅಡಿ ತಮ್ಮ ವಿರುದ್ಧ ದಾಖಲಾದ ಪ್ರಕರಣವನ್ನು ರದ್ದುಗೊಳಿಸಬೇಕು ಎಂದು ಆನೇಕಲ್‌ನ ಶೈಲೇಶ್ ಕುಮಾರ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.
ಪ್ರಕರಣದ ವಿವರ
2020 ಜೂನ್ 14ರಂದು ಜಯಮ್ಮ ಎಂಬವರು ಸೂರ್ಯನಗರದ ಪೊಲೀಸರಿಗೆ ದೂರು ನೀಡಿ ಕ್ರಿಕೆಟ್ ಆಟದ ವಿಚಾರದಲ್ಲಿ ನಡೆದ ಗಲಾಟೆಗೆ ಸಂಬಂಧಿಸಿದಂತೆ ಗುಂಪೊಂದು ನನ್ನ ಮಗನನ್ನು ಅಪಹರಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿತ್ತು ಎಂದು ಆರೋಪಿಸಿದ್ದರು.
ಶೈಲೇಶ್ ಮತ್ತಿತರರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಲಾಗಿತ್ತು. ವಿಚಾರಣೆ ನಡೆಸಿ ಪೀಠ, ಪ್ಕರಣದಲ್ಲಿ ಸಂತ್ರಸ್ತನ ಜಾತಿ ನಿಂದನೆ ಉದ್ದೇಶಪೂರ್ವಕ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ, ವಿವರವೂ ಇಲ್ಲ ಎಂದು ಹೇಳಿ ಪ್ರಕರಣವನ್ನು ರದ್ದುಪಡಿಸಿತು.
.