ಐದು ಮತ್ತು ಎಂಟನೇ ತರಗತಿ ಪರೀಕ್ಷೆ: ಹೈಕೋರ್ಟ್‌ನಲ್ಲಿ ನಡೆದದ್ದೇನು...?
ಐದು ಮತ್ತು ಎಂಟನೇ ತರಗತಿ ಪರೀಕ್ಷೆ: ಹೈಕೋರ್ಟ್‌ನಲ್ಲಿ ನಡೆದದ್ದೇನು...?
ಕರ್ನಾಟಕದಲ್ಲಿ ಐದು ಮತ್ತು ಎಂಟನೇ ತರಗತಿಯ ವಿದ್ಯಾರ್ಥಿಗಳಿಗೆ ರಾಜ್ಯ ಮಟ್ಟದ ಮಂಡಳಿ ಪರೀಕ್ಷೆ ನಡೆಸಲು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ಹೊರಡಿಸಲಾಗಿದ್ದ ಸುತ್ತೋಲೆ ರದ್ದುಪಡಿಸಲಾಗಿದೆ.
ಕರ್ನಾಟಕ ನೋಂದಾಯಿತ ಅನುದಾನ ರಹಿತ ಖಾಸಗಿ ಶಾಲೆಗಳ ಸಂಘ (ರುಪ್ಸಾ) ಹಾಗೂ ಇತರರು ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ಪುರಸ್ಕರಿಸಿದೆ.
ನ್ಯಾ. ಪ್ರದೀಪ್ ಸಿಂಗ್ ಯೆರೂರ್ ನೇತೃತ್ವದ ಏಕಸದಸ್ಯ ಪೀಠ ಈ ಆದೇಶ ಹೊರಡಿಸಿದೆ.
ಇದೇ ವೇಳೆ, ಕರ್ನಾಟಕದಲ್ಲಿ ಐದು ಮತ್ತು ಎಂಟನೇ ತರಗತಿಯ ವಿದ್ಯಾರ್ಥಿಗಳಿಗೆ ನಡೆಸಲು ಉದ್ದೇಶಿಸಿರುವ ರಾಜ್ಯ ಮಟ್ಟದ ಮಂಡಳಿ ಪರೀಕ್ಷೆಯಲ್ಲಿ ಪಠ್ಯ ಕ್ರಮದ ಹೊರತಾಗಿ ಯಾವುದೇ ಪ್ರಶ್ನೆಗಳು ಇಲ್ಲ ಎಂಬುದನ್ನು ಪ್ರಮಾಣಮುಖೇನ ಅಫಿಡವಿಟ್ ಸಲ್ಲಿಸುವಂತೆ ಶಿಕ್ಷಣ ಇಲಾಖೆಗೆ ಹೈಕೋರ್ಟ್ ಸೂಚನೆ ನೀಡಿದೆ.
ಕಲಿಕಾ ಚೇತರಿಕೆ ಕೂಡ ಪಠ್ಯಕ್ರಮದ ಭಾಗವೇ ಆಗಿದ್ದು, ಮಕ್ಕಳ ಬುದ್ದಿಮತ್ತೆಗೆ ಸಕಾರಾತ್ಮಕವಾಗಿ ಉದ್ದೀಪಿಸುವ ನಿಟ್ಟಿನಲ್ಲಿ ಈ ಪರೀಕ್ಷೆ ನಿಗದಿಪಡಿಸಲಾಗಿದೆ ಎಂಬ ಸರ್ಕಾರದ ವಾದಕ್ಕೆ ಹೈಕೋರ್ಟ್ ಈ ಸೂಚನೆ ನೀಡಿದೆ.