-->
ನಿಮಗಿದು ತಿಳಿದಿರಲಿ!- ಮನೆಯಲ್ಲಿ ಎಷ್ಟು ಹಣ ಇರಬಹುದು..? ಆದಾಯ ತೆರಿಗೆ ಇಲಾಖೆ ಹೇರಿದ ಹಣದ ಮಿತಿ ಎಷ್ಟು ಗೊತ್ತೇ..?

ನಿಮಗಿದು ತಿಳಿದಿರಲಿ!- ಮನೆಯಲ್ಲಿ ಎಷ್ಟು ಹಣ ಇರಬಹುದು..? ಆದಾಯ ತೆರಿಗೆ ಇಲಾಖೆ ಹೇರಿದ ಹಣದ ಮಿತಿ ಎಷ್ಟು ಗೊತ್ತೇ..?

ನಿಮಗಿದು ತಿಳಿದಿರಲಿ!- ಮನೆಯಲ್ಲಿ ಎಷ್ಟು ಹಣ ಇರಬಹುದು..? ಆದಾಯ ತೆರಿಗೆ ಇಲಾಖೆ ಹೇರಿದ ಹಣದ ಮಿತಿ ಎಷ್ಟು ಗೊತ್ತೇ..?





ಇದು ಆದಾಯ ತೆರಿಗೆ ಇಲಾಖೆ ಹೊರಡಿಸಿದ ಮಾರ್ಗಸೂಚಿ... ಮತ್ತು ಎಲ್ಲರಿಗೂ ಇದು ಗೊತ್ತಿರಲಿ ಎಂಬ ಉದ್ದೇಶದಿಂದ ಈ ಮಾಹಿತಿಯನ್ನು ನೀಡಲಾಗುತ್ತಿದೆ.



ಮನೆಯಲ್ಲಿ ದೊಡ್ಡ ಪ್ರಮಾಣದ ನಗದು ಹಣ ತೆಗೆದಿಡುವ ಅಭ್ಯಾಸ ಹೊಂದಿದವರು ಈ ಸುದ್ದಿಯನ್ನು ಓದಲೇಬೇಕು. ಮನೆಯಲ್ಲಿ ಎಷ್ಟು ಮೊತ್ತದ ನಗದು ಹಣ ಇಡಬಹುದು ಎಂಬುದಕ್ಕೆ ಆದಾಯ ತೆರಿಗೆ ಇಲಾಖೆ ಮಾರ್ಗಸೂಚಿ ಹೊರಡಿಸಿದೆ.



ಹೆಚ್ಚಿನವರು ತಮ್ಮ ವ್ಯಾಪಾರ ವಹಿವಾಟಿನ ಮೊತ್ತವನ್ನು ಕ್ಯಾಶ್‌ನಲ್ಲೇ ಮಾಡುತ್ತಾರೆ. ಅದನ್ನು ತಮ್ಮ ಬ್ಯಾಂಕಿನ ಖಾತೆಯಲ್ಲಿ ಇಡುವುದಕ್ಕೆ ಅವರು ಉದಾಸೀನತೆ ತೋರುತ್ತಾರೆ. ಅಂತವರು ಬಹು ಎಚ್ಚರಿಕೆ ವಹಿಸಬೇಕು. ಯಾವುದೇ ಸಂದರ್ಭದಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನಿಮ್ಮ ಮನೆಗೆ ದಾಳಿ ನಡೆಸಿ ಅಕ್ರಮ ನಗದು ಹಣವನ್ನು ಜಪ್ತಿ ಮಾಡಬಹುದು!



ಹೊಸ ಮಾರ್ಗಸೂಚಿಯ ನಿಯಮಾವಳಿಗಳು ಹೀಗಿವೆ..;

ಒಂದು ಹಣಕಾಸು ವರ್ಷದಲ್ಲಿ 20 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಪ್ರಮಾಣದ ವಹಿವಾಟನ್ನು ಲೆಕ್ಕವಿಲ್ಲದೆ ನಡೆಸಿದ್ದರೆ ಅದಕ್ಕೆ ದಂಡ ವಿಧಿಸಬಹುದು.


ಇತರರ ಬ್ಯಾಂಕಿನ ಖಾತೆಗೆ 50 ಸಾವಿರ ಯಾ ಅದಕ್ಕಿಂತ ಹೆಚ್ಚಿನ ಮೊತ್ತದ ಹಣವನ್ನು ಜಮೆ ಮಾಡಬೇಕಿದ್ದರೆ ಆಧಾರ್‌ ಕಾರ್ಡ್ ಮತ್ತು ಪಾನ್‌ ಕಾರ್ಡ್ ನಂಬರ್‌ ನೀಡಲೇಬೇಕು.


ತಮ್ಮ ಬ್ಯಾಂಕ್‌ ಖಾತೆಗೆ 20 ಲಕ್ಷ ರೂಪಾಯಗೂ ಅಧಿಕ ಮೊತ್ತವನ್ನು ಒಂದು ಆರ್ಥಿಕ ವರ್ಷದಲ್ಲಿ ಜಮೆ ಮಾಡಿದರೆ ಅದಕ್ಕೆ ಅವರು ತಮ್ಮ ಪಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ನಂಬರನ್ನು ನಮೂದಿಸಬೇಕು. ಇಲ್ಲವೇ ಬ್ಯಾಂಕ್‌ಗೆ ಅದರ ವಿವರ ನೀಡಬೇಕು.


ಎರಡು ಲಕ್ಷ ಯಾ ಅದಕ್ಕಿಂತ ಹೆಚ್ಚಿನ ಮೊತ್ತದ ಹಣಕಾಸಿನ ವ್ಯವಹಾರವನ್ನು ನಗದಾಗಿ ನಡೆಸುವಂತಿಲ್ಲ.


ಎರಡು ಲಕ್ಷ ಯಾ ಅದಕ್ಕಿಂತ ಹೆಚ್ಚಿನ ಮೊತ್ತದ ಹಣಕಾಸಿನ ವ್ಯವಹಾರವನ್ನು ನಗದಾಗಿ ನಡೆಸುವಂತಿದ್ದರೆ ಅಂಥವರು ತಮ್ಮ ಆಧಾರ್‌ ಕಾರ್ಡ್ ಮತ್ತು ಪಾನ್‌ ಕಾರ್ಡ್ ನಂಬರ್‌ ಮಾಹಿತಿ ನೀಡಲೇಬೇಕು.


ರೂ. 2000/-ಕ್ಕಿಂತಲೂ ಅಧಿಕ ಮೊತ್ತದ ಹಣವನ್ನು ನಗದು ರೂಪದಲ್ಲಿ ದೇಣಿಗೆ, ವಂತಿಗೆ ಯಾ ದಾನ ನೀಡುವಂತಿಲ್ಲ.


ಯಾವುದೇ ಒಬ್ಬ ವ್ಯಕ್ತಿ 20 ಸಾವಿರ ರೂಪಾಯಿಗಿಂತ ಹೆಚ್ಚಿನ ಮೊತ್ತದ ನಗದನ್ನು ಇನ್ನೊಬ್ಬ ವ್ಯಕ್ತಿಗೆ ಸಾಲವಾಗಿ ನೀಡುವಂತಿಲ್ಲ.


2 ಕೋಟಿ ರೂಪಾಯಿಗಿಂತ ಹೆಚ್ಚಿನ ಮೊತ್ತದ ಹಣವನ್ನು ಖಾತೆಯಿಂದ ಪಡೆದುಕೊಂಡರೆ ಅವರು ಮೂಲದಲ್ಲೇ ತೆರಿಗೆ ಪಾವತಿ(TDS) ಮಾಡಬೇಕು.




Ads on article

Advertise in articles 1

advertising articles 2

Advertise under the article