ಬಾಲ್ಯ ವಿವಾಹ: ಬಲವಂತದ ಮದುವೆ ಮಾಡಿದ ತಾಯಿ–ಮಗನಿಗೆ 20 ವರ್ಷ ಕಠಿಣ ಕಾರಾಗೃಹ ವಾಸ
ಬಾಲ್ಯ ವಿವಾಹ: ಬಲವಂತದ ಮದುವೆ ಮಾಡಿದ ತಾಯಿ–ಮಗನಿಗೆ 20 ವರ್ಷ ಕಠಿಣ ಕಾರಾಗೃಹ ವಾಸ
ಬಾಲ್ಯ ವಿವಾಹಕ್ಕೆ ಪ್ರೇರಣೆ, ಬಲವಂತದ ಮದುವೆ ಮಾಡಿದ್ದ ಆರೋಪದಲ್ಲಿ ತಾಯಿ ಮಗನಿಗೆ ಚಾಮರಾಜನಗರ ಜಿಲ್ಲಾ ಮಕ್ಕಳ ಸ್ನೇಹಿ ನ್ಯಾಯಾಲಯ 20 ವರ್ಷಗಳ ಜೈಲು ವಾಸದ ಶಿಕ್ಷೆ ನೀಡಿದೆ.
ಅಪರಾಧಿಗಳು ಅಪ್ರಾಪ್ತ ಬಾಲಕಿಯನ್ನು ಒತ್ತಾಯಪೂರ್ವಕವಾಗಿ ಹಾಗೂ ಬಲವಂತದಿಂದ ಮದುವೆಗೆ ಒತ್ತಾಯಿಸಿದ್ದರು. ಯುವಕ ಬಾಲಕಿಯನ್ನು ಮದುವೆ ಆಗಿದ್ದರೆ ಈ ಮದುವೆಗೆ ಈತನ ತಾಯಿ ಸಹಕರಿಸಿದ್ದರು.
ಅಪರಾಧಿಗಳಾದ ತಾಯಿ ಮತ್ತು ಮಗ ಇಬ್ಬರಿಗೆ 20 ವರ್ಷ ಕಠಿಣ ಶಿಕ್ಷೆ ವಿಧಿಸಿ ಚಾಮರಾಜನಗರ ಜಿಲ್ಲಾ ಮಕ್ಕಳ ಸ್ನೇಹಿ ನ್ಯಾಯಾಲಯ ಈ ಮಹತ್ವದ ಆದೇಶ ನೀಡಿದೆ.
ತಮಿಳು ನಾಡು ತಿರಚಂಗೂರು ತಾಲೂಕಿನ 25 ವರ್ಷದ ಶರಣ್ ರಾಜ್ ಹಾಗೂ 40 ವರ್ಷದ ಈತನ ತಾಯಿ ಸೆಲ್ವಿ ಶಿಕ್ಷೆಗೊಳಗಾದ ಅಪರಾಧಿಗಳು.
ಅಪರಾಧಿ ಯುವಕ ಶರಣ್ 14 ವರ್ಷದ ಬಾಲಕಿಯನ್ನು ಪುಸಲಾಯಿಸಿ ಬೈಕಿನಲ್ಲಿ ಹತ್ತಿಸಿಕೊಂಡು ಬಂದು ಬಲವಂತದಿಂದ ಮದುವೆಯಾಗಿದ್ದ. ಹಾಗೂ ಆ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ.
ಪ್ರಕರಣದ ವಿಚಾರಣೆ ನಡೆಸಿದ ಬಾಲನ್ಯಾಯ ಮಂಡಳಿಯ ನ್ಯಾಯಾಧೀಶೆ ನಿಶಾರಾಣಿ ಅವರು ಪ್ರಕರಣದ ಆರೋಪಿಗಳಾದ ತಾಯಿ ಮತ್ತು ಮಗನಿಗೆ ಈ ಕಠಿಣ ಶಿಕ್ಷೆ ವಿಧಿಸಿದ್ದಾರೆ. ಈ ಪ್ರಕರಣದಲ್ಲಿ ಮತ್ತೋರ್ವ ಆರೋಪಿ ತಲೆ ಮರೆಸಿಕೊಂಡಿದ್ದಾನೆ.
ಪ್ರಕರಣದ ಕಲಾಪದಲ್ಲಿ ಆರೋಪಿಗಳ ವಿರುದ್ಧದ ಕೃತ್ಯ ಸಾಬೀತಾದ ಹಿನ್ನೆಲೆಯಲ್ಲಿ ತಾಯಿ-ಮಗನಿಗೆ ತಲಾ 20 ವರ್ಷ ಕಠಿಣ ಜೈಲು ಶಿಕ್ಷೆ 10 ಸಾವಿರ ರೂ. ದಂಡ ವಿಧಿಸಿದ್ದಾರೆ.
ನೊಂದ ಬಾಲಕಿಗೆ ಕಾನೂನು ಸೇವಾ ಪ್ರಾಧಿಕಾರವು 1 ಲಕ್ಷ ರೂ. ಪರಿಹಾರವನ್ನು 30 ದಿನದೊಳಗೆ ಕೊಡಬೇಕೆಂದು ಆದೇಶಿಸಿದ್ದಾರೆ.