ಒಪ್ಪಂದ ಉಲ್ಲಂಘಿಸಿದ ಮಾತ್ರಕ್ಕೆ ಕ್ರಿಮಿನಲ್ ಪ್ರಕರಣ ಹೂಡಲಾಗದು: ಸುಪ್ರೀಂ ಕೋರ್ಟ್
ಒಪ್ಪಂದ ಉಲ್ಲಂಘಿಸಿದ ಮಾತ್ರಕ್ಕೆ ಕ್ರಿಮಿನಲ್ ಪ್ರಕರಣ ಹೂಡಲಾಗದು: ಸುಪ್ರೀಂ ಕೋರ್ಟ್
ಒಪ್ಪಂದ ಉಲ್ಲಂಘಿಸಿದ ಮಾತ್ರಕ್ಕೆ ಒಬ್ಬನ ಮೇಲೆ ಕ್ರಿಮಿನಲ್ ಕೇಸು ಹೂಡಲು ಬರುವುದಿಲ್ಲ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ.
ಸರಬ್‌ಜಿತ್ ಕೌರ್ VS ಪಂಜಾಬ್ ಸರ್ಕಾರ ಮತ್ತಿರರು ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಈ ತೀರ್ಪು ನೀಡಿದ್ದು, ನ್ಯಾ. ಅಭಯ ಶ್ರೀನಿವಾಸ ಓಕಾ ಮತ್ತು ನ್ಯಾ. ರಾಜೇಶ್ ಬಿಂದಾಲ್ ನೇತೃತ್ವದ ವಿಭಾಗೀಯ ಪೀಠ ಈ ಮಹತ್ವದ ತೀರ್ಪು ನೀಡಿದೆ.
ಕೇವಲ ಭರವಸೆ ಈಡೇರಿಸಲಿಲ್ಲ ಎಂಬ ಆರೋಪಕ್ಕೆ ಕ್ರಿಮಿನಲ್ ಕೇಸ್ ಹೂಡಲಾಗದು. ವಹಿವಾಟಿನ ಆರಂಭದಲ್ಲಿ ವಂಚನೆ ಮತ್ತು ಅಪ್ರಮಾಣಿಕ ಉದ್ದೇಶ ಇಲ್ಲದೆ ಕೇವಲ ಒಪ್ಪಂದ ಉಲ್ಲಂಘನೆ ಆದ ಮಾತ್ರಕ್ಕೆ ಕ್ರಿಮಿನಲ್ ಕೇಸ್ ಹೂಡಲಾಗದು ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು.
ದೂರಿನಲ್ಲಿ ಮಾಡಲಾದ ಆರೋಪಗಳು ಸಿವಿಲ್ ಸ್ವರೂಪದಲ್ಲಿ ಇದ್ದು, ಅದನ್ನು ಕ್ರಿಮಿನಲ್ ಮೊಕದ್ದಮೆಯಾಗಿ ಪರಿವರ್ತಿಸಿ ತಾನು ನೀಡಿದ ಮೊತ್ತವನ್ನು ಮರಳಿಸುವಂತೆ ಮೇಲ್ಮನವಿದಾರನ ಮೇಲೆ ಒತ್ತಡ ಹೇರುವಂತೆ ಈ ಪ್ರಕರಣದಲ್ಲಿ ಮಾಡಲಾಗಿದೆ ಎಂಬುದನ್ನು ನ್ಯಾಯಪೀಠ ಗಮನಿಸಿತು.
ಸದ್ರಿ ಪ್ರಕರಣದಲ್ಲಿ ಆಸ್ತಿ ಖರೀದಿಗೆ ಸಂಬಂಧಿಸಿದಂತೆ ಪ್ರಕರಣದ ಆರೋಪಿಯಾಗಿರುವ ಮೇಲ್ಮನವಿದಾರನ ಮೇಲೆ ವಂಚನೆ ಆರೋಪದ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಪ್ರತಿವಾದಿ ನೀಡಿದ ದೂರನ್ನು ಆಧಾರದಲ್ಲಿ ಪೊಲೀಸರು FIR ದಾಖಲಿಸಿದ್ದರು.
.