-->
ನ್ಯಾಯಪೀಠಕ್ಕೆ ಬೆದರಿಕೆ ಹಾಕಬೇಡಿ, ಕೋರ್ಟ್‌ನಿಂದ ಹೊರನಡೆಯಿರಿ: ವಕೀಲರಿಗೆ ಸಿಜೆಐ ಚಂದ್ರಚೂಡ್ ಹೇಳಿದ್ದೇಕೆ..?

ನ್ಯಾಯಪೀಠಕ್ಕೆ ಬೆದರಿಕೆ ಹಾಕಬೇಡಿ, ಕೋರ್ಟ್‌ನಿಂದ ಹೊರನಡೆಯಿರಿ: ವಕೀಲರಿಗೆ ಸಿಜೆಐ ಚಂದ್ರಚೂಡ್ ಹೇಳಿದ್ದೇಕೆ..?

ನ್ಯಾಯಪೀಠಕ್ಕೆ ಬೆದರಿಕೆ ಹಾಕಬೇಡಿ, ಕೋರ್ಟ್‌ನಿಂದ ಹೊರನಡೆಯಿರಿ: ವಕೀಲರಿಗೆ ಸಿಜೆಐ ಚಂದ್ರಚೂಡ್ ಹೇಳಿದ್ದೇಕೆ..?




ಸುಪ್ರೀಂ ಕೋರ್ಟ್ ವಕೀಲರ ಸಂಘದ ಅಧ್ಯಕ್ಷ ವಿಕಾಸ್ ಸಿಂಗ್ ಮತ್ತು ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಮಧ್ಯೆ ಏರುಧ್ವನಿಯ ಮಾತಿನ ಸಮರ ನಡೆದ ಪ್ರಸಂಗ ನಡೆಯಿತು. 


ನ್ಯಾಯಪೀಠಕ್ಕೆ ಬೆದರಿಕೆ ಹಾಕಬೇಡಿ, ನೀವು ಏರಿದ ಧ್ವನಿಯಲ್ಲಿ ಮಾತನಾಡಬೇಡಿ.. ಕೋರ್ಟ್‌ನಿಂದ ಹೊರನಡೆಯಿರಿ ಎಂದು ಸೂಚಿಸುವ ಕ್ಷಣಕ್ಕೂ ಸುಪ್ರೀಂ ಕೋರ್ಟ್‌ ಕಲಾಪ ಸಾಕ್ಷಿಯಾಯಿತು.



ವಕೀಲರ ಸಂಘದ ನಿವೇಶನ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿ ಸಿಜೆಐ ಚಂದ್ರಚೂಡ್ ಮತ್ತು ವಕೀಲರಾದ ವಿಕಾಸ್ ಸಿಂಗ್ ಮಧ್ಯೆ ವಾಗ್ವಾದ ಬೆಳೆಯಿತು. ನ್ಯಾ. ಪಿ.ಎಸ್. ನರಸಿಂಹ ಮತ್ತು ಜೆ.ಬಿ. ಪರ್ದಿವಾಲಾ ಈ ನ್ಯಾಯಪೀಠದಲ್ಲಿ ಇದ್ದರು.


ಅರ್ಜಿ ವಿಚಾರಣೆ ವೇಳೆ ವಿಕಾಸ್ ಸಿಂಗ್, ಕಳೆದ ಆರು ತಿಂಗಳಿನಿಂದ ಈ ಅರ್ಜಿಯನ್ನು ವಿಚಾರಣೆ ಪಟ್ಟಿಗೆ ಸೇರಿಸಲು ಹೆಣಗಾಡುತ್ತಿದ್ದೇನೆ. ನನ್ನನ್ನು ಸಾಮಾನ್ಯ ಫಿರ್ಯಾದುದಾರ ಎಂದು ಪರಿಗಣಿಸಿ ಎಂದು ಚಂದ್ರಚೂಡ್ ನೇತೃತ್ವದ ನ್ಯಾಯಪೀಠಕ್ಕೆ ಹೇಳಿದರು.


ಎಸ್‌ಸಿಬಿಎ ಸಲ್ಲಿಸಿದ್ದ ಅರ್ಜಿಯಿಂದಾಗಿಯೇ ಸುಪ್ರೀಂ ಕೋರ್ಟ್‌ಗೆ ಅಪ್ಪು ಘರ್ ಜಮೀನು ಲಭಿಸಿದೆ. ಆದರೆ, ಇಷ್ಟ ಇಲ್ಲದಿದ್ದರೂ ಸಂಘಕ್ಕೆ ಕೇವಲ ಒಂದು ಬ್ಲಾಕ್ ಮಾತ್ರ ನೀಡಲಾಗಿದೆ. ಆಗಿನ ಸಿಜೆಐ ಎನ್.ವಿ. ರಮಣ ಅವರ ಅಧಿಕಾರಾವಧಿಯಲ್ಲೇ ಸಂಘದ ಕಟ್ಟಡ ನಿರ್ಮಾಣ ಕಾರ್ಯ ಆರಂಭವಾಗಬೇಕಿತ್ತು ಎಂದು ವಿಕಾಸ್ ಸಿಂಗ್ ಹೇಳಿದರು.


ಇದಕ್ಕೆ ಪ್ರತಿಕ್ರಿಯೆ ನೀಡಿದ ಡಿವೈ ಚಂದ್ರಚೂಡ್, ನೀವು ಈ ರೀತಿ ಜಮೀನಿಗೆ ಬೇಡಿಕೆ ಇಡಬಾರದು. ನೀವು ಒಂದು ದಿನ ನಿಗದಿ ಮಾಡಿ, ನಾವು ಇಡೀ ದಿನ ಬೇರೆ ಕೆಲಸ ಇಲ್ಲದೆ ಈ ವಿಚಾರದಲ್ಲೇ ಕುಳಿತುಕೊಳ್ಳುತ್ತೇವೆ ಎಂದು ಖಾರವಾಗಿ ನುಡಿದರು.


ಅದಕ್ಕೆ ಏರು ಧ್ವನಿಯಲ್ಲಿ ಮಾತನಾಡಿದ ವಿಕಾಸ್ ಸಿಂಗ್, ನೀವು ಇಡೀ ದಿನ ಸುಮ್ಮನೆ ಕುಳಿತುಕೊಳ್ಳುತ್ತೀರಿ ಎಂದು ಹೇಳಿದ್ದಲ್ಲ. ಅರ್ಜಿಯನ್ನು ವಿಚಾರಣೆಯ ಪಟ್ಟಿಗೆ ಸೇರಿಸಲು ನಾನು ಪ್ರಯತ್ನಿಸುತ್ತಿದ್ದೇನೆ. ನನ್ನ ಪ್ರಯತ್ನ ಸಫಲವಾಗದಿದ್ದರೆ ನಾನು ನಿಮ್ಮ ಮನೆ ಬಾಗಿಲಿಗೆ ಬಂದು ನ್ಯಾಯ ಕೇಳುತ್ತೇನೆ. ಆದರೆ, ವಕೀಲರ ಸಂಘವನ್ನು ಈ ರೀತಿ ನಡೆಸಿಕೊಳ್ಳುವುದು ಸರಿಯಲ್ಲ ಎಂದು ಹೇಳಿದರು.


ಇದಕ್ಕೆ ಗರಂ ಆದ ಚಂದ್ರಚೂಡ್, ನೀವು ಮುಖ್ಯ ನ್ಯಾಯಮೂರ್ತಿಯನ್ನು ಬೆದರಿಸುತ್ತಿದ್ದೀರಿ. ನೀವು ವರ್ತಿಸುವ ರೀತಿಯೇ ಇದು ಎಂದು ಪ್ರಶ್ನಿಸಿದರು. ಅರ್ಜಿಯನ್ನು ವಿಚಾರಣೆಯ ಪಟ್ಟಿಗೆ ಸೇರಿಸುವುದಿಲ್ಲ. ದಯವಿಟ್ಟು ಇಲ್ಲಿಂದ ಹೊರನಡೆಯಿರಿ ಎಂದು ಗದರಿದರು.


Ads on article

Advertise in articles 1

advertising articles 2

Advertise under the article