ಒಂದೇ ಹೆಸರಿನ ಎರಡು ಸೊಸೈಟಿ ನೋಂದಣಿಗೆ ಅವಕಾಶವಿಲ್ಲ: ಕರ್ನಾಟಕ ಹೈಕೋರ್ಟ್
ಒಂದೇ ಹೆಸರಿನ ಎರಡು ಸೊಸೈಟಿ ನೋಂದಣಿಗೆ ಅವಕಾಶವಿಲ್ಲ: ಕರ್ನಾಟಕ ಹೈಕೋರ್ಟ್
ಒಂದೇ ಹೆಸರಿನ ಎರಡು ಸೊಸೈಟಿಗಳ ನೋಂದಣಿಗೆ ಅವಕಾಶವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿದೆ. ಈಗಾಗಲೇ ನೋಂದಣಿಯಾಗಿದ್ದ ಸೊಸೈಟಿಯ ಹೆಸರನ್ನೇ ಹೋಲುವ ಇನ್ನೊಂದು ಸೊಸೈಟಿಯ ನೋಂದಣಿಗೆ ಅವಕಾಶ ನೀಡಲಾಗದು ಎಂದು ನ್ಯಾಯಪೀಠ ತೀರ್ಪಿನಲ್ಲಿ ಹೇಳಿದೆ.
ಬೆಂಗಳೂರು ನಗರ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ನೋಂದಣಿ ರದ್ದುಪಡಿಸಿದ ಸಹಕಾರ ಸಂಘಗಳ ಉಪ ನೋಂದಣಾಧಿಕಾರಿಗಳ ಆದೇಶವನ್ನು ಪ್ರಶ್ನಿಸಿ ಅದರ ಅಧ್ಯಕ್ಷ ಮಹೇಶ್ ಮತ್ತು ಇತರರು ಹೈಕೋರ್ಟ್ ಮೊರೆ ಹೋಗಿದ್ದರು.
ಈ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಂಡ ನ್ಯಾ. ನಾಗಪ್ರಸನ್ನ ನೇತೃತ್ವದ ನ್ಯಾಯಪೀಠ ಈ ಆದೇಶ ಮಾಡಿದೆ.
ಸಂಸ್ಥೆಯ ನೋಂದಣಿಯನ್ನು ರದ್ದು ಮಾಡಿದ ಸಹಕಾರ ಸಂಘಗಳ ಉಪ ನೋಂದಣಾಧಿಕಾರಿಗಳ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಂಡ ನ್ಯಾಯಪೀಠ ಈ ಆದೇಶ ನೀಡಿದೆ.
ಕರ್ನಾಟಕ ಸಹಕಾರ ಸಂಘಗಳ ಕಾಯ್ದೆಯ ಕಲಂ 7 ಪ್ರಕಾರ, ಈಗಾಗಲೇ ನೋಂದಣಿ ಆಗಿರುವ ಸೊಸೈಟಿ ಯಾ ಸಂಸ್ಥೆ ಹೆಸರಿನಲ್ಲಿ ಯಾ ಅದನ್ನು ಹೋಲುವ ಮತ್ತೊಂದು ಹೆಸರಿನಲ್ಲಿ ಇನ್ನೊಂದು ಸಂಸ್ಥೆಯನ್ನು ರಿಜಿಸ್ಟರ್ ಮಾಡಲು ಅವಕಾಶವಿಲ್ಲ ಎಂದು ನ್ಯಾಯಪೀಠ ಹೇಳಿದೆ.
ಸದ್ರಿ ಈ ಪ್ರಕರಣದಲ್ಲಿ ಪ್ರತಿವಾದಿ ಸಂಘವನ್ನು ನೋಂದಾಯಿಸುವ ಸುಮಾರು ನಾಲ್ಕು ತಿಂಗಳ ಮೊದಲೇ ಅರ್ಜಿದಾರ ಸಂಘ ನೋಂದಣಿಯಾಗಿದೆ. ಇದರಿಂದ ಪ್ರತಿವಾದಿಯವರ ಸಂಘವನ್ನು ರಿಜಿಸ್ಟರ್ ಮಾಡುವ ಮೂಲಕ ಸಹಕಾರ ಸಂಘಗಳ ಉಪ ನೋಂದಣಾಧಿಕಾರಿಯವರು ಕಾಯ್ದೆಯನ್ನು ಉಲ್ಲಂಘಿಸಿದ್ದಾರೆ ಎಂದು ಹೇಳಿದ ನ್ಯಾಯಪೀಠ, ಪ್ರತಿವಾದಿ ಸಂಸ್ಥೆಯ ನೋಂದಣಿಯನ್ನು ರದ್ದುಪಡಿಸಿ ಆದೇಶಿಸಿದೆ.