-->
Consumer Case: ಸಾಲದ ಜೊತೆಗೆ ಅಧಿಕ ಮೊತ್ತ ಪಡೆದ ಸೊಸೈಟಿ- ರೈತರಿಗೆ ಬಡ್ಡಿ ಸಹಿತ ವಾಪಸ್ ನೀಡಲು ರಾಜ್ಯ ಗ್ರಾಹಕರ ಆಯೋಗ ಆದೇಶ

Consumer Case: ಸಾಲದ ಜೊತೆಗೆ ಅಧಿಕ ಮೊತ್ತ ಪಡೆದ ಸೊಸೈಟಿ- ರೈತರಿಗೆ ಬಡ್ಡಿ ಸಹಿತ ವಾಪಸ್ ನೀಡಲು ರಾಜ್ಯ ಗ್ರಾಹಕರ ಆಯೋಗ ಆದೇಶ

ಸಾಲದ ಜೊತೆಗೆ ಅಧಿಕ ಮೊತ್ತ ಪಡೆದ ಸೊಸೈಟಿ- ರೈತರಿಗೆ ಬಡ್ಡಿ ಸಹಿತ ವಾಪಸ್ ನೀಡಲು ರಾಜ್ಯ ಗ್ರಾಹಕರ ಆಯೋಗ ಆದೇಶ





ಸಹಕಾರ ಕ್ರೆಡಿಕ್ ಸೊಸೈಟಿಯೊಂದು ಸಾಲ ಮತ್ತು ಸಾಲದ ಬಡ್ಡಿ ಮೊತ್ತದ ಜೊತೆಗೆ ರೈತರೊಬ್ಬರಿಂದ ಹೆಚ್ಚುವರಿಯಾಗಿ ಪಡೆದಿದ್ದ 38.18 ಲಕ್ಷ ರೂ.ಗಳನ್ನು ಬಡ್ಡಿ ಸಹಿತ ಮರಳಿಸುವಂತೆ ಕರ್ನಾಟಕ ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ತೀರ್ಪು ನೀಡಿದೆ.



ಬೆಳಗಾವಿಯ ಭೀಮಪ್ಪ ಹನುಮಂತಪ್ಪ ರಾಡಿ ಅವರು ಕೃಷಿ ಭೂಮಿಯ ಅಭಿವೃದ್ಧಿಗೆ ಶ್ರೀಮಾತಾ ಕೋ-ಅಪರೇಟಿವ್ ಕ್ರೆಡಿಟ್ ಸೊಸೈಟಿಯಿಂದ ಆಸ್ತಿಯ ಅಡಮಾನ ಪತ್ರದ ಮೂಲಕ ಮೂರು ಕೋಟಿ ರೂಪಾಯಿ ಸಾಲ ಪಡೆದುಕೊಂಡಿದ್ದರು.



ಸಾಲದ ಮೊತ್ತವನ್ನು ಬಡ್ಡಿ ಸಹಿತ ಹಿಂತಿರುಗಿಸುವಾಗ ಸೊಸೈಟಿಯು 38.18 ಲಕ್ಷ ರೂಪಾಯಿ ಹೆಚ್ಚುವರಿಯಾಗಿ ಪಡೆದಿತ್ತು.



ಗ್ರಾಹಕರಿಂದ ಹೆಚ್ಚುವರಿಯಾಗಿ ಪಡೆದಿರುವ ಹಣ ಪಡೆಯುವುದು ಸಾಲದ ಒಪ್ಪಂದ ಪತ್ರದ ಪ್ರಕಾರ ಮತ್ತು ಬ್ಯಾಂಕಿಂಗ್ ಕಾನೂನು ಸಿದ್ದಾಂತಕ್ಕೆ ವ್ಯತಿರಿಕ್ತವಾಗಿರುತ್ತದೆ ಎಂಬ ಅರ್ಜಿದಾರರ ವಾದವನ್ನು ಗ್ರಾಹಕರ ಆಯೋಗ ಪರಿಗಣಿಸಿತು.



ಹೆಚ್ಚುವರಿಯಾಗಿ ಪಡೆದ ಹಣವನ್ನು ಬಡ್ಡಿ ಸಹಿತ ಅರ್ಜಿದಾರ ಗ್ರಾಹಕರಿಗೆ ಹಿಂತಿರುಗಿಸುವಂತೆ ಆಯೋಗದ ಸದಸ್ಯರಾದ ರವಿಶಂಕರ್ ಮತ್ತು ಸುನೀತಾ ಸಿ. ಬಾಗೇವಾಡಿ ಅವರಿದ್ದ ನ್ಯಾಯಪೀಠ ಆದೇಶ ನೀಡಿತು.



ಅರ್ಜಿದಾರ ಗ್ರಾಹಕರ ಪರವಾಗಿ ನ್ಯಾಯವಾದಿ ಪ್ರಶಾಂತ್ ಟಿ. ಪಂಡಿತ್ ವಾದ ಮಂಡಿಸಿದ್ದರು.



Ads on article

Advertise in articles 1

advertising articles 2

Advertise under the article