-->
ಲಂಚ ಪ್ರಕರಣ: ಆರೋಪಿ ಕಡ್ಡಾಯ ನಿವೃತ್ತಿ ಬದಲು ಹಿಂಬಡ್ತಿ: ಶಿಸ್ತು ಪ್ರಾಧಿಕಾರದ ಆದೇಶ ಎತ್ತಿ ಹಿಡಿದ ಹೈಕೋರ್ಟ್

ಲಂಚ ಪ್ರಕರಣ: ಆರೋಪಿ ಕಡ್ಡಾಯ ನಿವೃತ್ತಿ ಬದಲು ಹಿಂಬಡ್ತಿ: ಶಿಸ್ತು ಪ್ರಾಧಿಕಾರದ ಆದೇಶ ಎತ್ತಿ ಹಿಡಿದ ಹೈಕೋರ್ಟ್

ಲಂಚ ಪ್ರಕರಣ: ಆರೋಪಿ ಕಡ್ಡಾಯ ನಿವೃತ್ತಿ ಬದಲು ಹಿಂಬಡ್ತಿ: ಶಿಸ್ತು ಪ್ರಾಧಿಕಾರದ ಆದೇಶ ಎತ್ತಿ ಹಿಡಿದ ಹೈಕೋರ್ಟ್





ಭ್ರಷ್ಟಾಚಾರ ಪ್ರಕರಣದಲ್ಲಿ ಆರೋಪಿ ಸಿಬ್ಬಂದಿಗೆ ಕಡ್ಡಾಯ ನಿವೃತ್ತಿ ನೀಡುವಂತೆ ಲೋಕಾಯುಕ್ತ ಇಲಾಖೆ ನೀಡಿದ್ದ ಶಿಫಾರಸಿನ ಬದಲು ಹಿಂಬಡ್ತಿ ನೀಡಿದ್ದ ಶಿಸ್ತು ಪ್ರಾಧಿಕಾರದ ಕ್ರಮವನ್ನು ಕರ್ನಾಟಕ ಹೈಕೋರ್ಟ್ ಎತ್ತಿ ಹಿಡಿದಿದೆ.



ಲೋಕಾಯುಕ್ತ ರಿಜಿಸ್ಟ್ರಾರ್ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಎಂ. ನಾಗಪ್ರಸನ್ನ ನೇತೃತ್ವದ ನ್ಯಾಯಪೀಠ ಈ ಮಹತ್ವದ ಆದೇಶ ನೀಡಿದೆ.



ಸೇವೆಯಲ್ಲಿ ಕರ್ತವ್ಯ ಲೋಪ ಎಸಗಿದ ಸರ್ಕಾರಿ ನೌಕರರಿಗೆ ಲೋಕಾಯುಕ್ತರು ನಿರ್ದಿಷ್ಟ ಶಿಕ್ಷೆ ವಿಧಿಸಲು ಶಿಫಾರಸ್ಸು ಮಾಡಿದ್ದಾರೆ ಎಂಬ ಕಾರಣಕ್ಕೆ ತಪ್ಪಿತಸ್ಥ ನೌಕರನ ವಿರುದ್ಧ ವಿವೇಚನೆ ಬಳಸಿ ಕ್ರಮ ಕೈಗೊಳ್ಳಲು ಸರ್ಕಾರದ ಶಿಸ್ತು ಪ್ರಾಧಿಕಾರಕ್ಕೆ ಇರುವ ಅಧಿಕಾರ ಕಸಿದುಕೊಳ್ಳಲಾಗದು ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ ಹಾಗೂ ಲೋಕಾಯುಕ್ತ ರಿಜಿಸ್ಟ್ರಾರ್ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ.



ಘಟನೆಯ ವಿವರ

2009ರಲ್ಲಿ ರೂ. 700 ಲಂಚ ಸ್ವೀಕರಿಸಿದ ಆರೋಪದಲ್ಲಿ ಬೀದರ್ ಜಿಲ್ಲೆಯ ಔರಾದ್‌ ಕ್ಷೇತ್ರದ ಶಿಕ್ಷಣಾಧಿಕಾರಿಗಳ ಕಚೇರಿಯ ದ್ವಿತೀಯ ದರ್ಜೆ ಸಹಾಯಕ ಚಂದ್ರಶೇಖರ್ ಎಂಬವರ ವಿರುದ್ಧ ಲೋಕಾಯುಕ್ತ ಸಂಸ್ಥೆ ತನಿಖೆ ನಡೆಸಿತ್ತು.



ಈ ಆರೋಪ ಕುರಿತು ವಿಚಾರಣೆ ನಡೆಸಿದ ಲೋಕಾಯುಕ್ತ ನ್ಯಾಯಾಲಯ, ಆರೋಪಿಯು ಲಂಚ ಕೇಳಿರುವ ವ್ಯಕ್ತಿಯ ಯಾವುದೇ ಕೆಲಸ ಬಾಕಿ ಇಟ್ಟುಕೊಂಡಿಲ್ಲ. ಹೀಗಾಗಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಎಂಬುದಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದು ತೀರ್ಪು ನೀಡಿ ಆರೋಪಿಯನ್ನು ಖುಲಾಸೆಗೊಳಿಸಿತ್ತು.


ಆದರೆ, ಲೋಕಾಯುಕ್ತ ಕಾಯ್ದೆ 1984 ಸೆಕ್ಷನ್ 12(3)ರನ್ನು ಬಳಸಿ ಆರೋಪಿಗೆ ಕಡ್ಡಾಯ ನಿವೃತ್ತಿ ಶಿಕ್ಷೆ ನೀಡುವಂತೆ ಲೋಕಾಯುಕ್ತ ಶಿಫಾರಸ್ಸು ಮಾಡಿತ್ತು. ಆದರೆ, ಸರ್ಕಾರ ಕಡ್ಡಾಯ ನಿವೃತ್ತಿ ನೀಡದೆ ಹಿಂಬಡ್ತಿ ನೀಡಿ ಆದೇಶ ಹೊರಡಿಸಿತ್ತು. ಇದನ್ನು ಪ್ರಶ್ನಿಸಿ ಲೋಕಾಯುಕ್ತ ರಿಜಿಸ್ಟ್ರಾರ್ ಹೈಕೋರ್ಟ್ ಮೆಟ್ಟಿಲೇರಿತ್ತು.



ವಿಚಾರಣೆ ವೇಳೆ, ಪ್ರತಿವಾದಿ/ಆರೋಪಿ ತಪ್ಪಿತಸ್ಥ ಎಂದು ಪರಿಗಣಿಸಿ ಕಡ್ಡಾಯ ನಿವೃತ್ತಿ ನೀಡುವಂತೆ ಶಿಫಾರಸ್ಸು ಮಾಡಲಾಗಿದೆ. ಆದರೆ, ಶಿಸ್ತು ಪ್ರಾಧಿಕಾರ ಶಿಫಾರಸ್ಸು ಪರಿಗಣಿಸದೆ ಹಿಂಬಡ್ತಿ ನೀಡಿದ್ದು, ಇದಕ್ಕೆ ಸಕಾರಣ ನೀಡಿಲ್ಲ ಎಂದು ಅರ್ಜಿದಾರರು ವಾದಿಸಿದ್ದರು.



ಶಿಸ್ತು ಪ್ರಾಧಿಕಾರವು ತಪ್ಪಿತಸ್ಥ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳುವುದಕ್ಕೆ ಅಧಿಕಾರವಿದೆ. ಅಲ್ಲದೆ, ಲೋಕಾಯುಕ್ತರ ಶಿಫಾರಸ್ಸನ್ನು ಪಾಲಿಸಿಲ್ಲ ಎಂಬ ಕಾರಣಕ್ಕೆ ಲೋಕಾಯುಕ್ತ ಸಂಸ್ಥೆ ನೊಂದ ವ್ಯಕ್ತಿ ಎಂಬುದಾಗಿ ಪರಿಣಲಾಗದು. ಜೊತೆಗೆ, ಪ್ರಕರಣದ ವಿಚಾರಣೆ ನಡೆಸಿರುವ ನ್ಯಾಯಾಲಯ ಆರೋಪಿಯನ್ನು ಖುಲಾಸೆಗೊಳಿಸಿದೆ. ಹೀಗಾಗಿ ಕಡ್ಡಾಯ ನಿವೃತ್ತಿ ನೀಡಲಾಗಿಲ್ಲ ಎಂದು ಪ್ರತಿವಾದಿ ಪರ ವಾದ ಮಂಡಿಸಲಾಯಿತು.




Ads on article

Advertise in articles 1

advertising articles 2

Advertise under the article