High Court Recruitment | ಹೈಕೋರ್ಟ್‌ನಲ್ಲಿ ಡ್ರೈವರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
High Court Recruitment | ಹೈಕೋರ್ಟ್‌ನಲ್ಲಿ ಡ್ರೈವರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
ಕರ್ನಾಟಕ ಹೈಕೋರ್ಟ್‌ನಲ್ಲಿ ಖಾಲಿ ಇರುವ 37 ವಾಹನ ಚಾಲಕರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಉಳಿದ ಮೂಲ ವೃಂದದ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಹೈಕೋರ್ಟ್ ಸೇವಾ ನಿಯಮಗಳ ಪ್ರಕಾರ ನೇರ ನೇಮಕಾತಿ ನಡೆಯಲಿದ್ದು, SSLC ಯಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು ಹಾಗೂ ಭಾರೀ ಪ್ರಯಾಣಿಕ ಮೋಟಾರು ವಾಹನ ಅಥವಾ ಸರಕು ಸಾಗಣೆ ಮಾಡುವ ಭಾರೀ ಪ್ರಮಾಣದ ವಾಹನದ ಚಾಲನಾ ಪರವಾನಿಗೆ ಹೊಂದಿರಬೇಕು.
ಡ್ರೈವಿಂಗ್ ಕೆಲಸದಲ್ಲಿ ಕನಿಷ್ಟ ಐದು ವರ್ಷಗಳ ಅನುಭವ ಹೊಂದಿರಬೇಕು. ಅಭ್ಯರ್ಥಿಯು ಇಂಗ್ಲಿಷ್ ಮತ್ತು ಕನ್ನಡ ಭಾಷೆಯನ್ನು ಬಲ್ಲವರಾಗಿರಬೇಕು.
ವೇತನ: ಮಾಸಿಕ ರೂ. 25500/- ದಿಂದ ರೂ. 81100/-ರ ವರೆಗೆ
ಎರಡು ವರ್ಷಗಳ ಅವಧಿಗೆ ಅಥವಾ ವಿಸ್ತರಿಸಬಹುದಾದ ಪರಿವೀಕ್ಷಣಾರ್ಥಿಗಳಾಗಿರುತ್ತಾರೆ.
ಹೆಚ್ಚಿನ ವಿವರಗಳಿಗೆ ಹೈಕೋರ್ಟ್ ಅಧಿಸೂಚನೆಯನ್ನು ಓದಬಹುದಾಗಿದೆ.
ಅದರ ಲಿಂಕ್ ಈ ಕೆಳಗಿನಂತಿದೆ;
https://karnatakajudiciary.kar.nic.in/recruitmentNotifications/drvr2023/Notification_RPC.pdf