'30 ವರ್ಷ ಮೀರಿದೆ' ಎಂದ ಮಾತ್ರಕ್ಕೆ ವಿಲ್ ಅಸಲಿಯಾಗದು: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು
'30 ವರ್ಷ ಮೀರಿದೆ' ಎಂದ ಮಾತ್ರಕ್ಕೆ ವಿಲ್ ಅಸಲಿಯಾಗದು: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು
ಮರಣಶಾಸನ, ವೀಲುನಾಮೆ, ವಿಲ್ ಯಾ ಉಯಿಲು ದಾಖಲೆಯು 30 ವರ್ಷ ಹಳೆಯದು ಎಂದ ಮಾತ್ರಕ್ಕೆ ಅದನ್ನು ಅಸಲಿ ಎಂದು ಪರಿಗಣಿಸಲು ಬರುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಭಾರತೀಯ ಸಾಕ್ಷ್ಯ ಕಾಯ್ದೆ ಸೆಕ್ಷನ್ 90ರ ಅಡಿಯಲ್ಲಿ ಪೂರ್ವಭಾವನೆ ಮೇಲೆ ವೀಲುನಾಮೆಯ ಕ್ರಮಬದ್ಧತೆಯನ್ನು ಪರಿಗಣಿಸಲು ಬರುವುದಿಲ್ಲ. ಉತ್ತರಾಧಿಕಾರ ಕಾಯ್ದೆ 1925ರ ಸೆಕ್ಷನ್ 63(c) ಮತ್ತು ಎವಿಡೆನ್ಸ್ ಆಕ್ಟ್ 68ರ ಅಡಿಯಲ್ಲಿ ಈ ದಾಖಲೆಗಳನ್ನು ರುಜುವಾತುಪಡಿಸಬೇಕು ಎಂದು ನ್ಯಾಯಪೀಠ ಹೇಳಿದೆ.
ದಿ. ಅಶುತೋಷ್ ಸಮಂತಾ Vs ರಂಜನ್ ಬಾಲ ದಾಸಿ ಪ್ರಕರಣದ ವಿಚಾರಣೆ ನಡೆಸಿದ ನ್ಯಾ. ಎಸ್. ರವೀಂದ್ರ ಭಟ್ ಮತ್ತು ಹಿಮಾ ಕೊಹ್ಲಿ ನೇತೃತ್ವದ ವಿಭಾಗೀಯ ಪೀಠ ಈ ಮಹತ್ವದ ತೀರ್ಪು ನೀಡಿದೆ.
ಪ್ರಸ್ತುತ ಪ್ರಕರಣದಲ್ಲಿ ವೀಲುನಾಮೆಯನ್ನು ದೃಢೀಕರಿಸಿದ ಸಾಕ್ಷಿಗಳಿಬ್ಬರೂ ಮೃತಪಟ್ಟಿದ್ದಾರೆ. ಆದರೆ, ವಿಲ್‌ಗೆ ಸಹಿ ಹಾಕಿದಾಗ ವೀಲುನಾಮೆ ಬರೆದಾತನ ಇಬ್ಬರು ಪುತ್ರರು ತಮ್ಮ ಉಪಸ್ಥಿತಿಯ ಬಗ್ಗೆ ತಿಳಿಸಿದ್ದಾರೆ.
ವೀಲುನಾಮೆ ಬರೆದು ಸಹಿ ಮಾಡಿದ ನಿವಾಸ್ ಭುಯಾ ಅವರ ಸಹಿಯನ್ನು ಗುರುತಿಸಿದ್ದಾರೆ. ಅಷ್ಟೇ ಅಲ್ಲದೆ, ನಿವಾಸ್ ಭುಯ್ಯಾ ಅವರ ಪುತ್ರ ಫಣಿ ಭೂಷಣ್ ಭುಯಾ ಅವರು ವೀಲುನಾಮೆಗೆ ಸಹಿ ಹಾಕಿ ಇಬ್ಬರು ವ್ಯಕ್ತಿಗಳು ಆ ಸಹಿಯನ್ನು ದೃಢೀಕರಿಸಿದ್ದಾರೆ. ಈ ಎಲ್ಲ ಅಂಶಗಳನ್ನು ಗಮನಿಸಿದ ನ್ಯಾಯಪೀಠ, ವಿಲ್ ಸರಿಯಾಗಿ ಕಾರ್ಯಗತವಾಗಿದೆ ಎಂದು ತೀರ್ಮಾನಿಸಿ ಮೇಲ್ಮನವಿಯನ್ನು ವಜಾಗೊಳಿಸಿತು.
ಪ್ರಕರಣ: ಅಶುತೋಷ್ ಸಮಂತಾ Vs ರಂಜನ್ ಬಾಲ ದಾಸಿ (ಸುಪ್ರೀಂ ಕೋರ್ಟ್ 14-03-2023)