ಹಾವೇರಿಯಲ್ಲಿ ಮನಕಲುಕುವ ದೃಶ್ಯ: ಲಂಚ ನೀಡಲು ಹಣ ಇಲ್ಲದ್ದಕ್ಕೆ ಎತ್ತು ಚಕ್ಕಡಿ ತಂದ ರೈತ!
ಹಾವೇರಿಯಲ್ಲಿ ಮನಕಲುಕುವ ದೃಶ್ಯ: ಲಂಚ ನೀಡಲು ಹಣ ಇಲ್ಲದ್ದಕ್ಕೆ ಎತ್ತು ಚಕ್ಕಡಿ ತಂದ ರೈತ!
ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂಬುದಕ್ಕೆ ಇದೊಂದು ಘಟನೆಯೇ ಸಾಕ್ಷಿ.
ಹಾವೇರಿಯ ಸವಣೂರಿನ ರೈತ ಭ್ರಷ್ಟಾಚಾರಕ್ಕೆ ಹಣ ಇಲ್ಲದ ಕಾರಣ ರೈತರೊಬ್ಬರು ತನ್ನ ಜೀವನಾಡಿಯಾಗಿರುವ ಎತ್ತು ಮತ್ತು ಚಕ್ಕಡಿಯನ್ನೇ ಅಧಿಕಾರಿಯ ಮುಂದೆ ತಂದಿಟ್ಟ ಘಟನೆ ನಡೆದಿದೆ. ಇಂತಹ ಮನಕಲಕುವ ಘಟನೆಗೆ ಸಾಕ್ಷಿಯಾಗಿದ್ದು ಸವಣೂರು ಪುರಸಭೆ.
ಆಸ್ತಿಯ ಇ-ಸ್ವತ್ತು ಮಾಡಿಕೊಡಲು ಪುರಸಭೆ ಅಧಿಕಾರಿಗಳು 25,000 ರೂಪಾಯಿ ಲಂಚದ ಬೇಡಿಕೆ ಇಟ್ಟಿದ್ದರು. ಇದರಿಂದ ಮನನೊಂದ ರೈತ ಹಣ ಇಲ್ಲದೆ ಹಾಗೂ ಬೇರೆ ದಾರಿ ಕಾಣದೆ ತನ್ನ ಜೀವನಾಡಿಯನ್ನೇ ಅಧಿಕಾರಿಗೆ ಅರ್ಪಿಸಲು ಮುಂದಾದರು.
ಹಾವೇರಿಯ ಸವಣೂರು ಪಟ್ಟಣ ನಿವಾಸಿ ಯಲ್ಲಪ್ಪ ತಿಪ್ಪಣ್ಣ ರಾಣೋಜಿ ಅವರಿಗೆ ಪಟ್ಟಣದಲ್ಲಿ ನಿವೇಶನವಿದೆ. ಮೊದಲು ಕೈಯಲ್ಲಿ ಬರೆದ ಉತಾರ ನೀಡುತ್ತಿದ್ದರು. ಇದೀಗ ಪುರಸಭೆ ವ್ಯಾಪ್ತಿಯಲ್ಲಿ ಇ-ಸ್ವತ್ತು ಬಂದಿದ್ದರಿಂದ ಅದರಡಿ ಆಸ್ತಿ ವರ್ಗಾಯಿಸಿ ಕೊಡಿ ಎಂದು ಪುರಸಭೆಗೆ ಅರ್ಜಿ ಸಲ್ಲಿಸಿದ್ದರು.
ಆಗ ಪುರಸಭೆ ಅಧಿಕಾರಿಗಳು ಲಂಚದ ಬೇಡಿಕೆ ಇಟ್ಟಿದ್ದರು. ಇದರಿಂದ ರೈತನಿಗೆ ದಿಕ್ಕೇ ಕಾಣದಾಗಿತ್ತು.