ಭ್ರಷ್ಟ ಎಂಜಿನಿಯರ್‌ಗೆ 26.5 ಲಕ್ಷ ದಂಡ, 4 ವರ್ಷ ಜೈಲು: ಮಂಗಳೂರು ನ್ಯಾಯಾಲಯ
Thursday, March 16, 2023
ಭ್ರಷ್ಟ ಎಂಜಿನಿಯರ್‌ಗೆ 26.5 ಲಕ್ಷ ದಂಡ, 4 ವರ್ಷ ಜೈಲು: ಮಂಗಳೂರು ನ್ಯಾಯಾಲಯ
ಲೋಕಾಯುಕ್ತ ದಾಳಿ ವೇಳೆ ಸಿಕ್ಕಿ ಬಿದ್ದಿದ್ದ ಎಂಜಿನಿಯರ್ ಭಾರೀ ಮೊತ್ತದ ದಂಡ ಹಾಗೂ ನಾಲ್ಕು ವರ್ಷದ ಜೈಲು ಶಿಕ್ಷೆ ವಿಧಿಸಿ ಮಂಗಳೂರಿನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶ ಹೊರಡಿಸಿದೆ.
ಮೂಲ್ಕಿ ನಗರ ಪಂಚಾಯತ್ ಜ್ಯೂನಿಯರ್ ಎಂಜಿನಿಯರ್ ಪದ್ಮನಾಭ ಎನ್.ಕೆ. ಜೈಲು ಶಿಕ್ಷೆಗೆ ಒಳಗಾಗಿರುವ ಅಪರಾಧಿ ಭ್ರಷ್ಟ ಅಧಿಕಾರಿ.
ಈತನ ಬಳಿ ಆದಾಯಕ್ಕಿಂತ ಹೆಚ್ಚಿನ ಪ್ರಮಾಣದ ಆಸ್ತಿ ಇತ್ತು. ಇದು ಲೋಕಾಯುಕ್ತ ದಾಳಿ ವೇಳೆ ಬಯಲಾಗಿತ್ತು.
ಲೋಕಾಯುಕ್ತ ವಿಶೇಷ ನ್ಯಾಯಾಲಯವಾಗಿರುವ ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಬಿ.ಬಿ. ಜಕಾತಿ ಈ ತೀರ್ಪು ನೀಡಿದ್ದಾರೆ.
ದಂಡ ತೆರಲು ತಪ್ಪಿದ್ದಲ್ಲಿ ಹೆಚ್ಚುವರಿ ಆರು ತಿಂಗಳು ಜೈಲು ಶಿಕ್ಷೆ ಅನುಭವಿಸುವಂತೆ ಭ್ರಷ್ಟ ಅಧಿಕಾರಿಗೆ ಆದೇಶ ನೀಡಿದ್ದಾರೆ.