ರಸ್ತೆ ಮಾಡಿಲ್ಲ, ಶೌಚಾಲಯ ಮಾಡಿಲ್ಲ ಎಂದು ಪ್ರಶ್ನಿಸಿದ್ದಕ್ಕೆ FIR: ಪತ್ರಕರ್ತನಿಗೆ ಕೈಕೋಳ!
ರಸ್ತೆ ಮಾಡಿಲ್ಲ, ಶೌಚಾಲಯ ಮಾಡಿಲ್ಲ ಎಂದು ಪ್ರಶ್ನಿಸಿದ್ದಕ್ಕೆ FIR: ಪತ್ರಕರ್ತನಿಗೆ ಕೈಕೋಳ!
ಗ್ರಾಮಕ್ಕೆ ರಸ್ತೆ ನಿರ್ಮಾಣ ಮಾಡುವ ಭರವಸೆ ನೀಡಿದ್ದೀರಿ... ಶೌಚಾಲಯ ಕಟ್ಟಿಸಿಕೊಡುವ ಭರವಸೆ ನೀಡಿದ್ದೀರಿ.. ಆದರೆ ಇದುವರೆಗೂ ಯಾವ ಕೆಲಸ ಮಾಡಿಲ್ಲ ಎಂದು ಪ್ರಶ್ನಿಸಿದ ಪತ್ರಕರ್ತನ ಕೈಗೆ ಕೋಳ ಹಾಕಲಾಗಿದೆ.
ಈ ಘಟನೆ ನಡೆದಿರುವುದು ಉತ್ತರ ಪ್ರದೇಶದಲ್ಲಿ.. ಚುನಾವಣೆ ಸಂದರ್ಭದಲ್ಲಿ ನೀಡಿದ್ದ ಭರವಸೆ ಈಡೇರಿಸಿಲ್ಲ ಎಂದು ರಾಜ್ಯ ಸರ್ಕಾರದ ಸಚಿವರೊಬ್ಬರನ್ನು ಪ್ರಶ್ನಿಸಿದ್ದ ಪತ್ರಕರ್ತನನ್ನು ಬಂಧಿಸಲಾಗಿದ್ದು, ಕೈಕೋಳ ತೊಡಿಸಿ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ.
ಯೂಟ್ಯೂಬ್ ಚಾನೆಲ್ ವೊಂದನ್ನು ನಡೆಸುತ್ತಿರುವ ಸಂಜಯ್ ರಾಣಾ ಎಂಬವರು ಬಂಧಿತ ಪತ್ರಕರ್ತ. ಅವರ ವಿರುದ್ಧ ಬಿಜೆಪಿ ಕಾರ್ಯಕರ್ತರೊಂದಿಗೆ ಅನುಚಿತವಾಗಿ ವರ್ತಿಸಿದ ಹಾಗೂ ಅವರನ್ನು ನಿಂದಿಸಿದ ಆರೋಪವನ್ನು ಮಾಡಲಾಗಿದೆ. ಈ ಬಗ್ಗೆ ದೂರು ಕೂಡ ದಾಖಲಾಗಿದ್ದು, ಎಫ್‌ಐಆರ್ ದಾಖಲಿಸಲಾಗಿದೆ.
ಆದರೆ, ಪತ್ರಕರ್ತನಿಂದ ವಶಕ್ಕೆ ಪಡೆದ ವೀಡಿಯೋ ದೃಶ್ಯದಲ್ಲಿ ಸಚಿವರನ್ನು ಅವರು ನೀಡಿದ ಭರವಸೆ ಈಡೇರಿಸಿಲ್ಲ ಎಂದು ಪತ್ರಕರ್ತ ಪ್ರಶ್ನೆ ಮಾಡುವ ವೀಡಿಯೋ ಮಾತ್ರ ಇದೆ.