-->
ನವಿಲುಗರಿಯ ಹಾರ: ದರ್ಶನ್‌ಗೆ ನೋಟೀಸ್ ನೀಡಲು ಕಾರಣವೇನು...?

ನವಿಲುಗರಿಯ ಹಾರ: ದರ್ಶನ್‌ಗೆ ನೋಟೀಸ್ ನೀಡಲು ಕಾರಣವೇನು...?

ನವಿಲುಗರಿಯ ಹಾರ: ದರ್ಶನ್‌ಗೆ ನೋಟೀಸ್ ನೀಡಲು ಕಾರಣವೇನು...?





ನವಿಲುಗರಿಯಿಂದ ತಯಾರಿಸಿದ ಹಾರವನ್ನು ಹಾಕಿಸಿಕೊಂಡಿದ್ದಕ್ಕೆ ದರ್ಶನ್ ಅವರಿಗೆ ಅರಣ್ಯ ಇಲಾಖೆ ನೋಟೀಸ್ ಜಾರಿಗೊಳಿಸಿದೆ.



ಕರ್ನಾಟಕ ಸರ್ವೋದಯ ಪಕ್ಷದ ಘೋಷಿತ ಅಭ್ಯರ್ಥಿ ದರ್ಶನ್ ಪುಟ್ಟಣ್ಣಯ್ಯ ತಮ್ಮ ಕ್ಷೇತ್ರದ ಜನಮನ ಪಾದಯಾತ್ರೆ ನಡೆಸಿದ ಸಂದರ್ಭದಲ್ಲಿ ಮಾರ್ಚ್ 12ರಂದು ಈ ಹಾರ ಹಾಕಿಸಿಕೊಂಡಿದ್ದರು.



ದರ್ಶನ್‌ ಪುಟ್ಟಣ್ಣಯ್ಯ ಅವರಿಗೆ ಅವರ ಅಭಿಮಾನಿ ಬಳಗ ಕಾರ್ಯಕ್ರಮದಲ್ಲಿ ನವಿಲುಗರಿಯ ಹಾರ ಹಾಕಿ ಸಂಭ್ರಮಿಸಿರು.



ನವಿಲು ರಾಷ್ಟ್ರಪಕ್ಷಿ. ಅದರ ಗರಿಯನ್ನು ಬಳಸಿ ಹಾರ ತಯಾರಿಸಿರುವುದು ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಸ್ಪಷ್ಟ ಉಲ್ಲಂಘನೆ ಆಗಿದೆ. ಈ ಹಾರ ತಯಾರಿಕೆ ಕಾನೂನು ವಿರೋಧಿಯಾಗಿದ್ದು, ಈ ಬಗ್ಗೆ ಮಾಹಿತಿ ನೀಡಬೇಕು ಮತ್ತು ಹಾರವನ್ನು ಪರಿಶೀಲನೆಗೆ ನೀಡಬೇಕು ಎಂದು ದರ್ಶನ್‌ ಅವರಿಗೆ ಜಾರಿಗೊಳಿಸಿದ ನೋಟೀಸ್‌ನಲ್ಲಿ ಹೇಳಲಾಗಿದೆ.



ವಲಯ ಅರಣ್ಯಾಧಿಕಾರಿಗಳು ಈ ನೋಟೀಸ್ ಜಾರಿಗೊಳಿಸಿದ್ದು, ದರ್ಶನ್‌ ಪುಟ್ಟಣ್ಣಯ್ಯ ಅವರು ಸಂಕಷ್ಟಕ್ಕೆ ಸಿಲುಕುವಂತಾಗಿದೆ.




Ads on article

Advertise in articles 1

advertising articles 2

Advertise under the article