![ವಿದೇಶಿ ವಕೀಲರ ಸೇವೆ: ಬಿಸಿಐ ಆದೇಶ ಆಕ್ಷೇಪಿಸಿ ಪತ್ರ ಬರೆದ ಎಎಬಿ ಮಾಜಿ ಅಧ್ಯಕ್ಷರು- ಅನುಮತಿ ಏಕೆ ಬೇಡ...? ವಿದೇಶಿ ವಕೀಲರ ಸೇವೆ: ಬಿಸಿಐ ಆದೇಶ ಆಕ್ಷೇಪಿಸಿ ಪತ್ರ ಬರೆದ ಎಎಬಿ ಮಾಜಿ ಅಧ್ಯಕ್ಷರು- ಅನುಮತಿ ಏಕೆ ಬೇಡ...?](https://blogger.googleusercontent.com/img/b/R29vZ2xl/AVvXsEiSoJRtbQxNAGGUNbTqmRGekc8xu3BmIlL__kc2HbY5tKOrbpdPWU3QZLDPJWGoUHCuRVi7on6O7t4DZJh0n6LwhuZgnmqPBys1jLEcYOKUSR4dc1NXv6wLF71JCd6MiFClmCkVPEKj1kTeCpyvmc3KNgFCY9ff5FH02uExVPAi7a5gOX_CEkKtCMqksQ/w640-h622/Logo_of_Bar_Council_of_India.png)
ವಿದೇಶಿ ವಕೀಲರ ಸೇವೆ: ಬಿಸಿಐ ಆದೇಶ ಆಕ್ಷೇಪಿಸಿ ಪತ್ರ ಬರೆದ ಎಎಬಿ ಮಾಜಿ ಅಧ್ಯಕ್ಷರು- ಅನುಮತಿ ಏಕೆ ಬೇಡ...?
ವಿದೇಶಿ ವಕೀಲರ ಸೇವೆ: ಬಿಸಿಐ ಆದೇಶ ಆಕ್ಷೇಪಿಸಿ ಪತ್ರ ಬರೆದ ಎಎಬಿ ಮಾಜಿ ಅಧ್ಯಕ್ಷರು- ಅನುಮತಿ ಏಕೆ ಬೇಡ...?
ವಿದೇಶಿ ವಕೀಲರು ಯಾ ವಿದೇಶಿ ಕಾನೂನು ಸಂಸ್ಥೆಗಳು ಭಾರತದಲ್ಲಿ ವೃತ್ತಿ ನಡೆಸಲು ಅನುಮತಿ ನೀಡುವ ಭಾರತೀಯ ವಕೀಲರ ಪರಿಷತ್ತು(ಬಿಸಿಐ) ನಿರ್ಧಾರಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದೆ.
ಬೆಂಗಳೂರು ವಕೀಲರ ಸಂಘದ ನಿಕಟಪೂರ್ವ ಅಧ್ಯಕ್ಷ ಎ.ಪಿ. ರಂಗನಾಥ್ ಬಿಸಿಐ ನಿರ್ಧಾರವನ್ನು ಆಕ್ಷೇಪಿಸಿ ಅದರ ಅಧ್ಯಕ್ಷ ಮನನ್ ಕುಮಾರ್ ಮಿಶ್ರಾ ಅವರಿಗೆ ಲಿಖಿತ ಪತ್ರ ಬರೆದಿದ್ದಾರೆ.
ಇದು ದೇಶದಾದ್ಯಂತ ವಕೀಲರ ಧ್ವನಿ ಅಡಗಿಸುವ ಕ್ರಮ. ಕಾನೂನು ವೃತ್ತಿಯನ್ನು ಕಾರ್ಪೊರೇಟೀಕರಣ ಮಾಡುವ, ವೃತ್ತಿಯನ್ನು ಮಾರಾಟ ಮಾಡುವ ಸರಕಿನಂತೆ ಬಳಸುವ ದಂಧೆಯ ಒಂದು ಹುನ್ನಾರ ಎಂದು ಅವರು ಬಣ್ಣಿಸಿದ್ದಾರೆ.
ಈ ನಿರ್ಧಾರವು ಶ್ರೀಮಂತ ವಕೀಲರು ಮತ್ತು ಸಮರ್ಥರಾದರೂ ಸ್ಥಿತಿವಂತರಲ್ಲದ ವಕೀಲರ ನಡುವಿನ ಅಂತರವನ್ನು ಹೆಚ್ಚಿಸಲಿದೆ. ವಿದೇಶದಲ್ಲಿ ಭಾರತದ ಕಾನೂನು ಪದವೀಧರರ ಅಡ್ಡಿ, ಆಂತಕಗಳನ್ನು ಹೆಚ್ಚಿಸಲಿದೆ ಅಲ್ಲದೆ, ಇದು ಕಾನೂನು ಸಮುದಾಯಕ್ಕೆ ಮುಳುವಾಗಲಿದೆ ಎಂದು ರಂಗನಾಥ್ ತಮ್ಮ ಪತ್ರದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳುವ ಮುನ್ನ ವೃತ್ತಿ ಬಾಂಧವರು, ಹಿರಿಯ ವಕೀಲರು ಮತ್ತು ವಕೀಲರ ಸಂಘಗಳ ಜೊತೆಗೆ ಸಮಾಲೋಚನೆ ನಡೆಸುವಂತೆ ಅವರು ತಮ್ಮ ಪತ್ರದಲ್ಲಿ ಬಿಸಿಐಯನ್ನು ಆಗ್ರಹಿಸಿದ್ದಾರೆ.
ಇದನ್ನೂ ಓದಿ:
ವಿದೇಶಿ ವಕೀಲರು, ಕಾನೂನು ಸಂಸ್ಥೆಗೆ ಭಾರತದಲ್ಲಿ ಅನುಮತಿ: ಬಿಸಿಐ ಮಹತ್ವದ ನಿರ್ಧಾರ