ಕಳಪೆ ಗುಣಮಟ್ಟದ ಔಷಧ ತಯಾರಿ: 76 ಕಂಪೆನಿಗಳ ಲೈಸನ್ಸ್ ರದ್ದು
Tuesday, March 28, 2023
ಕಳಪೆ ಗುಣಮಟ್ಟದ ಔಷಧ ತಯಾರಿ: 76 ಕಂಪೆನಿಗಳ ಲೈಸನ್ಸ್ ರದ್ದು
ದೇಶದಲ್ಲಿ ಕಳಪೆ ಗುಣಮಟ್ಟದ ಔಷಧ ತಯಾರಿ ನಡೆಸುತ್ತಿದ್ದ 203 ಕಂಪೆನಿಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಗುರುತಿಸಿದ್ದು, ಈ ಪೈಕಿ 18 ಔಷಧ ತಯಾರಕ ಕಂಪೆನಿಗಳ ಲೈಸನ್ಸ್ ರದ್ದು ಮಾಡಲಾಗಿದೆ.
203 ಕಂಪೆನಿಗಳ ಪೈಕಿ ಹಿಮಾಚಲ ಪ್ರದೇಶದಲ್ಲಿ ಅತಿ ಹೆಚ್ಚು 70 ಕಂಪೆನಿಗಳು ಕಾರ್ಯನಿರ್ವಹಿಸುತ್ತಿವೆ. ಉತ್ತರಾಖಂಡದಲ್ಲಿ 45 ಮತ್ತು ಮಧ್ಯಪ್ರದೇಶದಲ್ಲಿ 23 ಕಂಪೆನಿಗಳು ಔಷಧ ತಯಾರಿಯಲ್ಲಿ ತೊಡಗಿಕೊಂಡಿವೆ.
ಕಳಪೆ ಗುಣಮಟ್ಟದ ಔಷಧ ತಯಾರಿ ನಡೆಸುತ್ತಿರುವ ಕಂಪೆನಿಗಳ ಮೇಲೆ ಕೇಂದ್ರ ಮತ್ತು ಕೆಲವು ರಾಜ್ಯ ಸರ್ಕಾರಗಳು ಜಂಟಿ ತಪಾಸಣೆ ನಡೆಸಿದ ಸಂದರ್ಭದಲ್ಲಿ ಈ ಅಂಶ ಬೆಳಕಿಗೆ ಬಂದಿದೆ.
ಗುಣಮಟ್ಟದ ಔಷಧ ತಯಾರಿಸುತ್ತಿದ್ದ 6 ಕಂಪೆನಿಗಳಿಗೆ ಮೊದಲ ಹಂತದ ಕ್ರಮಗಳನ್ನು ಜರುಗಿಸಲಾಗಿದೆ. 26 ಕಂಪೆನಿಗಳಿಗೆ ಕಾರಣ ಕೇಳಿ ನೋಟೀಸ್ ಜಾರಿಗೊಳಿಸಲಾಗಿದೆ.