40 ಸಾವಿರ ಲಂಚಕ್ಕೆ ಕೈಚಾಚಿದ ಖಾಕಿ ಪಡೆ: ಪಿಎಸ್‌ಐ, ಕಾನ್ಸ್‌ಟೆಬಲ್ ಬಂಧನ
ಬಾಡಿಗೆ ವಸೂಲಿಗೆ 40 ಸಾವಿರ ಲಂಚ: ಪಿಎಸ್‌ಐ, ಕಾನ್ಸ್‌ಟೆಬಲ್ ಬಂಧನ
ಮನೆ ಬಾಡಿಗೆಯನ್ನು ವಸೂಲಿ ಮಾಡಲು 40 ಸಾವಿರ ರೂಪಾಯಿ ಎಂಜಲು ಕಾಸಿಗೆ ಕೈಚಾಚುತ್ತಿದ್ದ ಭ್ರಷ್ಟ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಸುನೀಲ ತೇಲಿ ಮತ್ತು ಕಾನ್ಸ್‌ಟೆಬಲ್ ಸಚಿನ್ ಓಲೇಕಾರ್ ಅವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.
ಇವರಿಬ್ಬರು ಸಿದ್ದೇಶ್ವರ ನಗರದ ಆಫ್ರೋಜ್ ಆಹ್ಮದ್ ಎಂಬವರಿಗೂ ಅವರ ಅಣ್ಣ ಪತ್ನಿ ರೌನಕ್ ಖಾನ್ ಅವರಿಗೂ ಮನೆ ಬಾಡಿಗೆ ವಿಚಾರದಲ್ಲಿ ವಿವಾದ ಇತ್ತು. ಈ ಬಗ್ಗೆ ರೌನಕ್ ರಾಣೆಬೆನ್ನೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಈ ದೂರನ್ನು ಹಿಂದಕ್ಕೆ ಪಡೆಯುವಂತೆ ಮಾಡಲು ಪೊಲೀಸರು ಆರೋಪಿ ಕಡೆಗೆ 50 ಸಾವಿರ ರೂಪಾಯಿ ಲಂಚದ ಬೇಡಿಕೆ ಇಟ್ಟಿದ್ದರು. ನಂತರ 40 ಸಾವಿರ ರೂ. ಹಣ ಕೊಡಲು ಒಪ್ಪಿಕೊಂಡು ಲಂಚದ ಹಣವನ್ನು ಪೊಲೀಸರ ಪರವಾಗಿ ಉಡುಪಿ ಟೀಸ್ಟಾಲ್ ಮಾಲೀಕ ಸಂತೋಷ್ ಶೆಟ್ಟಿ ಪಡೆದುಕೊಳ್ಳುವಾಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಆರೋಪಿ ಪೊಲೀಸರನ್ನು ಬಂಧಿಸಿದ್ದಾರೆ.
ಈ ಲಂಚ ಸ್ವೀಕಾರ ಪ್ರಕರಣದಲ್ಲಿ ಮಧ್ಯವರ್ತಿಯಾಗಿದ್ದ ಸಂತೋಷ್ ಶೆಟ್ಟಿಯನ್ನೂ ಬಂಧಿಸಿರುವ ಲೋಕಾಯುಕ್ತ ಪೊಲೀಸರು ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ.