ಸೆ. 30ರೊಳಗೆ ನಾಮನಿರ್ದೇಶನ: ಇಲ್ಲವೇ ಹೂಡಿಕೆ ಹಿಂಪಡೆಯಲು ಅವಕಾಶ ಇಲ್ಲ...!
Tuesday, March 28, 2023
ಸೆ. 30ರೊಳಗೆ ನಾಮನಿರ್ದೇಶನ: ಇಲ್ಲವೇ ಹೂಡಿಕೆ ಹಿಂಪಡೆಯಲು ಅವಕಾಶ ಇಲ್ಲ...!
ಶೇರು ಮಾರುಕಟ್ಟೆಯಲ್ಲಿ ವ್ಯವಹಾರ ನಡೆಸುವ, ಟ್ರೇಡಿಂಗ್ ಯಾ ಡಿಮ್ಯಾಟ್ ಖಾತೆ ಹೊಂದಿರುವವರು ನಾಮ ನಿರ್ದೇಶನ ಮಾಡಲು ಅಥವಾ ಯಾರನ್ನೂ ನಾಮನಿರ್ದೇಶನ ಮಾಡುವುದಿಲ್ಲ ಎಂಬ ಹೇಳಿಕೆ ನೀಡಲು ಇದ್ದ ಗಡುವನ್ನು ಸೆಪ್ಟೆಂಬರ್ 30ರ ವರೆಗೆ ವಿಸ್ತರಿಸಲಾಗಿದೆ.
ಭಾರತೀಯ ಶೇರು ಪೇಟೆ ನಿಯಂತ್ರಣ ಮಂಡಳಿ(ಸೆಬಿ) ಈ ಬಗ್ಗೆ ಅಧಿಕೃತ ಪ್ರಕಟಣೆ ಹೊರಡಿಸಿದ್ದು, ಮ್ಯೂಚುವಲ್ ಫಂಡ್‌ಗಳಿಗೆ ಹೂಡಿಕೆ ಮಾಡುವವರಿಗೆ ಇದೇ ಕಾಲಮಿತಿ ಅನ್ವಯವಾಗಲಿದೆ.
ಒಂದು ವೇಳೆ, ನಾಮನಿರ್ದೇಶನ ಮಾಡದಿದ್ದರೆ ಇಲ್ಲವೇ ಯಾರನ್ನೂ ನಾಮನಿರ್ದೇಶನ ಮಾಡಿಲ್ಲ ಎಂಬ ಘೋಷಣೆ ಮಾಡದೇ ಇದ್ದರೆ ಅವರಿಗೆ ತಮ್ಮ ಹೂಡಿಕೆ ಹಿಂದಕ್ಕೆ ಪಡೆಯಲು ಅವಕಾಶ ಇರುವುದಿಲ್ಲ ಎಂದು ಸೆಬಿ ಪ್ರಕಟಣೆ ತಿಳಿಸಿದೆ.
ಶೇರು ದಲ್ಲಾಳಿಗಳು ತಮ್ಮ ಗ್ರಾಹಕರಿಗೆ ಈ ಬಗ್ಗೆ 15 ದಿನಕ್ಕೊಮ್ಮೆ ಎಸ್‌ಎಂಎಸ್ ಮತ್ತು ಇಮೇಲ್ ಮೂಲಕ ಮಾಹಿತಿ ನೀಡುವಂತೆ ಸೆಬಿ ಸೂಚಿಸಿದೆ.