ನೆಲದ ಕಾನೂನು ಅನುಸರಿಸಿ: ಜಿಲ್ಲಾ ನ್ಯಾಯಾಂಗಕ್ಕೆ ಸೂಕ್ತ ತರಬೇತಿ, ಮಾರ್ಗದರ್ಶನ ನೀಡುವುದು ಹೈಕೋರ್ಟ್ ಕರ್ತವ್ಯ- ಸುಪ್ರೀಂ ಕೋರ್ಟ್
ನೆಲದ ಕಾನೂನು ಅನುಸರಿಸಿ: ಜಿಲ್ಲಾ ನ್ಯಾಯಾಂಗಕ್ಕೆ ಸೂಕ್ತ ತರಬೇತಿ, ಮಾರ್ಗದರ್ಶನ ನೀಡುವುದು ಹೈಕೋರ್ಟ್ ಕರ್ತವ್ಯ- ಸುಪ್ರೀಂ ಕೋರ್ಟ್
ವಿಚಾರಣಾ ನ್ಯಾಯಾಲಯಗಳು ಆರೋಪಿಗಳಿಗೆ ಜಾಮೀನು ನೀಡುವ ಸಂದರ್ಭದಲ್ಲಿ ಅನಗತ್ಯವಾಗಿ ಜೈಲಿಗೆ ಕಳುಹಿಸುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ನ್ಯಾ. ಸಂಜಯ್ ಕಿಶನ್ ಕೌಲ್, ನ್ಯಾ. ಅಹ್ಸಾನುದ್ದೀನ್ ಅಮಾನುಲ್ಲ ಮತ್ತು ನ್ಯಾ. ಅರವಿಂದ ಕುಮಾರ್ ನೇತೃತ್ವದ ವಿಭಾಗೀಯ ನ್ಯಾಯಪೀಠ ವಿಚಾರಣಾ ನ್ಯಾಯಾಲಯಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿತು.
ಸತೆಂದರ್ ಕುಮಾರ್ ಅಂಟಿಲ್ VS ಸಿಬಿಐ ಪ್ರಕರಣದಲ್ಲಿ 10 ತಿಂಗಳಿನಿಂದ ಸುಪ್ರೀಮ ಕೋರ್ಟ್ ಆದೇಶವನ್ನು ಪಾಲನೆ ಮಾಡದಿರುವ ಬಗ್ಗೆ ನ್ಯಾಯಪೀಠ ಅಸಮಾಧಾನ ವ್ಯಕ್ತಪಡಿಸಿತು.
ಅನಗತ್ಯ ಕಸ್ಟಡಿಗೆ ಕಳುಹಿಸುವ ಮ್ಯಾಜಿಸ್ಟ್ರೇಟರುಗಳನ್ನು ನ್ಯಾಯಾಂಗ ಸೇವೆಯಿಂದ ಹಿಂದಕ್ಕೆ ಪಡೆಯಬೇಕು. ಅಂಥವರನ್ನು ನ್ಯಾಯಾಂಗ ಅಕಾಡೆಮಿಗಳಿಗೆ ಕಳುಹಿಸಿ ಸೂಕ್ತ ತರಬೇತು ನೀಡಬೇಕು ಎಂದು ನ್ಯಾಯಪೀಠ ಹೇಳಿದೆ.
ಜಿಲ್ಲಾ ನ್ಯಾಯಾಂಗವು ಹೈಕೋರ್ಟ್ ಅಧೀನ ಮತ್ತು ನಿಯಂತ್ರಣದಲ್ಲಿ ಇದೆ. ಈ ಜಿಲ್ಲಾ ನ್ಯಾಯಾಂಗ ವ್ಯವಸ್ಥೆಯಲ್ಲಿ ನೆಲದ ಕಾನೂನನ್ನು ಅನುಸರಿಸಲಾಗತ್ತಿದೆಯೇ ಎಂಬುದನ್ನು ಪರಿಶೀಲಿಸುವುದು ಹೈಕೋರ್ಟ್‌ಗಳ ಕರ್ತವ್ಯ. ಅದೇ ರೀತಿ, ಅವರಿಗೆ ಸೂಕ್ತ ಮಾರ್ಗದರ್ಶನ ಮಾಡುವುದು ಮತ್ತು ಅವರನ್ನು ಸಮರ್ಪಕವಾಗಿ ತರಬೇತುಗೊಳಿಸುವುದು ಕೂಡ ಹೈಕೋರ್ಟ್‌ಗಳ ಪ್ರಮುಖ ಜವಾಬ್ದಾರಿ ಎಂದು ನ್ಯಾಯಪೀಠ ತಾಕೀತು ಮಾಡಿದೆ.
ದೇಶದಲ್ಲಿ 2800ಕ್ಕೂ ಅಧಿಕ ಮಂದಿ ಜಾಮೀನು ಮಾಡಿಕೊಳ್ಳುವ ಸಾಮರ್ಥ್ಯ ಇಲ್ಲದೆ ಜೈಲಿನಲ್ಲಿ ಇದ್ದಾರೆ ಎಂಬ ಅಮಿಕಸ್ ಕ್ಯೂರಿ ಅವರ ಮಾಹಿತಿಗೆ ದನಿಗೂಡಿಸಿದ ನ್ಯಾಯಪೀಠ, ಜಾಮೀನು ನೀಡಿಕೆ ಬಗ್ಗೆ ಪ್ರತ್ಯೇಕ ಕಾಯ್ದೆ ರೂಪಿಸುವ ಅಗತ್ಯವಿದೆ ಎಂದು ಕೇಂದ್ರ ಸರ್ಕಾರಕ್ಕೆ ಸೂಚಿಸಿತು.
ಪ್ರಕರಣ: ಸತೆಂದರ್ ಕುಮಾರ್ ಅಂಟಿಲ್ Vs ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಸುಪ್ರೀಂ ಕೋರ್ಟ್)