ಮುಂದಿನ ವಾರ ಐದು ದಿನ ಕೋರ್ಟ್ ರಜೆ: ಎರಡೇ ದಿನ ಕಲಾಪ ಯಾಕೆ ಗೊತ್ತೇ..?
ಮುಂದಿನ ವಾರ ಐದು ದಿನ ಕೋರ್ಟ್ ರಜೆ: ಎರಡೇ
ದಿನ ಕಲಾಪ ಯಾಕೆ ಗೊತ್ತೇ..?
ರಾಜ್ಯದಲ್ಲಿ ಮುಂದಿನ ವಾರ ಕೋರ್ಟ್ ಕಲಾಪಗಳು
ಬಹುತೇಕ ಸ್ತಬ್ಧಗೊಳ್ಳಲಿದೆ. ಏಕೆಂದರೆ, ಇಡೀ ವಾರದಲ್ಲಿ ಐದು ದಿನ ಕೋರ್ಟ್ ಗೆ ರಜೆ ಸಾರಲಾಗಿದ್ದು,
ಕೇವಲ ಎರಡು ದಿನಗಳು ಮಾತ್ರ ಕೋರ್ಟ್ ಕಲಾಪಗಳು ನಡೆಯಲಿದೆ.
ಹೈಕೋರ್ಟ್ ಎಪ್ರಿಲ್ 30ರಂದು ಹೊರಡಿಸಿದ ಅಧಿಸೂಚನೆಯ
ಪ್ರಕಾರ ಸೋಮವಾರ ಕೋರ್ಟ್ ರಜಾ ದಿನವಾಗಲಿದೆ. ಅದೇ ರೀತಿ, ಮಂಗಳವಾರ ಮಹಾವೀರ ಜಯಂತಿ ಪ್ರಯುಕ್ತ ರಜೆ
ಘೋಷಿಸಲಾಗಿದೆ.
ಶುಕ್ರವಾರ ಗುಡ್ ಫ್ರೈಡೆ ಪ್ರಯುಕ್ತ ರಜೆ
ಘೋಷಿಸಲಾಗಿದ್ದು, ಶನಿವಾರ ವಾರದ ಎರಡನೇ ಶನಿವಾರದ ಹಿನ್ನೆಲೆಯಲ್ಲಿ ಕಲಾಪ ನಡೆಯುವುದಿಲ್ಲ.
ಹೀಗಾಗಿ, ಆ ವಾರದಲ್ಲಿ ಕೇವಲ ಬುಧವಾರ ಮತ್ತು
ಗುರುವಾರ ಮಾತ್ರ ಕೋರ್ಟ್ ಕಲಾಪ ನಡೆಯಲಿದ್ದು, ಆ ಎರಡು ದಿನಗಳ ಕಾಲ ರಜೆ ಹಾಕಿದರೆ ವಾರವಡೀ ರಜೆ ಸಿಗಲಿದೆ.
ಈ ಹಿನ್ನೆಲೆಯಲ್ಲಿ ಕೆಲವೊಂದು ಕೋರ್ಟ್ ಗಳಲ್ಲಿ
ನ್ಯಾಯಾಧೀಶರು ಆ ಎರಡು ದಿನಗಳ ಕಾಲ ರಜೆ ಹಾಕಿದರೆ ವಾರವಿಡೀ ಕೋರ್ಟ್ ಕಲಾಪಕ್ಕೆ ಬ್ರೇಕ್ ಬೀಳಬಹುದು.
ಒಟ್ಟಿನಲ್ಲಿ ರಾಜ್ಯದ ಎಲ್ಲ ನ್ಯಾಯಾಲಯಗಳು ಮುಂದಿನ ವಾರ ಎರಡೇ ದಿನ ಕಲಾಪದಲ್ಲಿ ಕಾರ್ಯಾಚರಿಸಬಹುದು..