ಮಾರ್ಚ್ 25: ನಾಲ್ಕನೇ ಶನಿವಾರ ಕೋರ್ಟ್ ಕಲಾಪ ಇದೆ.. ಯಾಕೆ ಗೊತ್ತೇ..?
Tuesday, March 21, 2023
ಮಾರ್ಚ್ 25: ನಾಲ್ಕನೇ ಶನಿವಾರ ಕೋರ್ಟ್ ಕಲಾಪ ಇದೆ.. ಯಾಕೆ ಗೊತ್ತೇ..?
ಹೋಳಿ ಹಬ್ಬದ ಪ್ರಯುಕ್ತ 18-03-2022ರಂದು ರಜೆ ಘೋಷಿಸಲಾಗಿತ್ತು. ಹೋಳಿ ಹಬ್ಬದ ರಜೆ ಘೋಷಿಸಿದ ಹಿನ್ನೆಲೆಯಲ್ಲಿ ನಾಲ್ಕನೇ ಶನಿವಾರದ ಕಲಾಪ ರಹಿತ ದಿನವನ್ನು ಕರ್ತವ್ಯದ ದಿನವಾಗಿ ಗುರುತಿಸಿ ರಜೆಯನ್ನು ರದ್ದುಗೊಳಿಸುವುದಾಗಿ ಹೈಕೋರ್ಟ್ ತನ್ನ ಅಧಿಸೂಚನೆಯಲ್ಲಿ ಪ್ರಕಟಿಸಿದೆ.
ಹೋಳಿ ಹಬ್ಬದ ಪ್ರಯುಕ್ತ ನೀಡಿದ್ದ ರಜೆಯ ಬದಲಿಗೆ ಮಾರ್ಚ್ ತಿಂಗಳ ನಾಲ್ಕನೇ ಶನಿವಾರದ ರಜೆಯನ್ನು ರದ್ದುಗೊಳಿಸಲಾಗಿದೆ.
25-03-2022ರಂದು ರಾಜ್ಯದ ಎಲ್ಲ ಕೋರ್ಟ್ ಗಳು ಕಚೇರಿಯ ಪೂರ್ಣ ಅವಧಿಯಲ್ಲಿ ಕಾರ್ಯನಿರ್ವಹಿಸಲಿದೆ ಎಂದು ಹೈಕೋರ್ಟ್ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.