ಭಿನ್ನ ಸಾಕ್ಷಿ, ಅನುಮಾನ ಇದ್ದಾಗ ಆರೋಪಿ ಮುಗ್ಧ ಎಂದೇ ಭಾವಿಸಬೇಕು: ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು
ಭಿನ್ನ ಸಾಕ್ಷಿ, ಅನುಮಾನ ಇದ್ದಾಗ ಆರೋಪಿ ಮುಗ್ಧ ಎಂದೇ ಭಾವಿಸಬೇಕು: ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು
ಕ್ರಿಮಿನಲ್ ಪ್ರಕರಣದ ವಿಚಾರಣೆಯಲ್ಲಿ ಆರೋಪಿಯ ಕೃತ್ಯದ ಬಗ್ಗೆ ಅನುಮಾನ ಅಥವಾ ಭಿನ್ನ ಅಭಿಪ್ರಾಯಗಳ ಸಾಧ್ಯತೆ ಇದ್ದಾಗ ಆರೋಪಿ ಮುಗ್ಧ ಎಂದೇ ಭಾವಿಸಬೇಕು ಎಂದು ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿದೆ.
ಬೆಳಗಾವಿಯ ರಮೇಶ್ ಈರಪ್ಪ ಮುತ್ಯನಟ್ಟಿ ಮತ್ತೊಬ್ಬರು ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ರಾಜೇಶ್ ರೈ ಕಲ್ಲಂಗಲ ಅವರ ನೇತೃತ್ವದ ಹೈಕೋರ್ಟ್ ಧಾರವಾಡ ಏಕಸದಸ್ಯ ಪೀಠ ಈ ಮಹತ್ವದ ತೀರ್ಪು ನೀಡಿದೆ.
ವಿಚಾರಣಾ ನ್ಯಾಯಾಲಯವು ಆರೋಪಿಯನ್ನು ಅಪರಾಧಿ ಎಂದು ತೀರ್ಪು ನೀಡುವಾಗ ಅಸಮರ್ಪಕ ಮಾಹಿತಿಯ ಆಧಾರದಲ್ಲೋ ಕಾಲ್ಪನಿಕ ಘಟನೆಗಳ ಆಧಾರದಲ್ಲೋ ತೀರ್ಪು ನೀಡಲಾಗದು. ಸಾಕ್ಷ್ಯ ಪರಿಗಣನೆ ಮತ್ತು ಮೌಲ್ಯೀಕರಣದ ವೇಳೆ ಅದರಲ್ಲಿ ತದ್ವಿರುದ್ಧತೆ, ವಿರೋಧಾಭಾಸಗಳು, ಅಸಂಗತ ಅಡಕಗಳು, ಉತ್ಪ್ರೇಕ್ಷೆಗಳನ್ನು ವಿಚಾರಣಾ ನ್ಯಾಯಾಲಯ ಕೂಲಂಕಷವಾಗಿ ಪರಿಗಣಿಸಬೇಕು ಎಂದು ನ್ಯಾಯಪೀಠ ಹೇಳಿದೆ.
ಅಪ್ರಾಪ್ತ ಬಾಲಕಿಯ ನಾಪತ್ತೆ ಮತ್ತು ಅಕ್ರಮ ಒತ್ತೆ ಪ್ರಕರಣದ ಇಬ್ಬರು ಆರೋಪಿಗಳಿಗೆ ವಿಚಾರಣಾ ನ್ಯಾಯಾಲಯ ನೀಡಿದ ಶಿಕ್ಷೆಯನ್ನು ರದ್ದುಗೊಳಿಸಿದೆ.
ಪ್ರಕರಣ: ರಮೇಶ್ ಈರಪ್ಪ ಮುತ್ಯನಟ್ಟಿ Vs ಕರ್ನಾಟಕ ರಾಜ್ಯ
ಕರ್ನಾಟಕ ಹೈಕೋರ್ಟ್, Cr.A. 100197/2014 Dated 24-04-2023