ಅಂಬೇಡ್ಕರ್ ಜಯಂತಿ: ರಜೆ ಘೋಷಿಸಿದ ಸುಪ್ರೀಂ ಕೋರ್ಟ್
ಅಂಬೇಡ್ಕರ್ ಜಯಂತಿ: ರಜೆ ಘೋಷಿಸಿದ ಸುಪ್ರೀಂ ಕೋರ್ಟ್
ಅಂಬೇಡ್ಕರ್ ಜಯಂತಿ ಆಚರಣೆ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ರಿಜಿಸ್ತ್ರಿ ರಜೆ ಘೋಷಿಸಿ ಸುತ್ತೋಲೆ ಹೊರಡಿಸಿದೆ.
ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನಿರ್ದೇಶನದ ಮೇರೆಗೆ ಈ ಸುತ್ತೋಲೆಯನ್ನು ಹೊರಡಿಸಿರುವುದಾಗಿ ರಿಜಿಸ್ಟ್ರಾರ್ ತಿಳಿಸಿದ್ದಾರೆ.
ಇದಕ್ಕೂ ಮೊದಲು ಸುಪ್ರೀಂ ಕೋರ್ಟ್ ವಕೀಲರ ಸಂಘ ಮತ್ತು ಇತರ ಹಿರಿಯ ವಕೀಲರು ಸಿಜೆಐ ಚಂದ್ರಚೂಡ್ ಅವರಿಗೆ ಲಿಖಿತ ಪತ್ರ ಬರೆದು ಅಂಬೇಡ್ಕರ್ ಜಯಂತಿ ದಿನವನ್ನು ಅಧಿಕೃತ ರಜೆಯನ್ನಾಗಿ ಘೋಷಿಸುವಂತೆ ಕೋರಿಕೊಂಡಿದ್ದರು.
ಡಾ. ಬಿ. ಆರ್. ಅಂಬೇಡ್ಕರ್ ಅವರನ್ನು ಸಂವಿಧಾನದ ಶಿಲ್ಪಿ ಎಂದು ಬಣ್ಣಿಸಿದ ಸಿಜೆಐ ಚಂದ್ರಚೂಡ್, ಕಳೆದ ವರ್ಷದ ಡಿಸೆಂಬರ್ 6ರಂದು ಅಂಬೇಡ್ಕರ್ ಅವರ ಪುಣ್ಯತಿಥಿಗೆ ಗೌರವ ನಮನ ಸಲ್ಲಿಸಿದ್ದರು.
ವೈಯಕ್ತಿಕವಾಗಿ ನಾನು ಅವರ ಬಗ್ಗೆ ಅಪಾರವಾದ ಗೌರವವನ್ನು ಹೊಂದಿದ್ದೇನೆ. ಅವರು ನಮ್ಮ ಸಂವಿಧಾನದ ಶಿಲ್ಪಿ. ನಾವಿಂದು ಇಲ್ಲಿದ್ದೇವೆ ಎನ್ನುವುದಕ್ಕೆ ಅವರ ದೂರದೃಷ್ಟಿತ್ವವೇ ಪ್ರಮುಖ ಕಾರಣ ಎಂದು ಅವರು ಹೇಳಿದ್ದರು.