-->
Online Birth Certificate- ಆನ್‌ಲೈನ್‌ನಲ್ಲಿ ಜನನ ಪ್ರಮಾಣಪತ್ರ ಪಡೆಯುವುದು ಹೇಗೆ..?

Online Birth Certificate- ಆನ್‌ಲೈನ್‌ನಲ್ಲಿ ಜನನ ಪ್ರಮಾಣಪತ್ರ ಪಡೆಯುವುದು ಹೇಗೆ..?

Online Birth Certificate- ಆನ್‌ಲೈನ್‌ನಲ್ಲಿ ಜನನ ಪ್ರಮಾಣಪತ್ರ ಪಡೆಯುವುದು ಹೇಗೆ..?






ಜನನ ಮತ್ತು ಮರಣ ಪ್ರಮಾಣ ಪತ್ರಗಳಿಗೆ ಇನ್ನು ಮುಂದೆ ಸರ್ಕಾರಿ ಕಚೇರಿ ಅಲೆಯಬೇಕಾಗಿಲ್ಲ. ಸೂಕ್ತ ದಾಖಲೆಯನ್ನು ನೀಡಿದರೆ, ನೀವು ಮನೆಯಿಂದಲೇ ಜನನ ಯಾ ಮರಣ ಪ್ರಮಾಣಪತ್ರಕ್ಕೆ ಅರ್ಜಿ ಸಲ್ಲಿಸಿ ಪಡೆಯಬಹುದು.



ಈ ಸದುದ್ದೇಶದಿಂದಲೇ ಸರ್ಕಾರ ಇ-ಜನ್ಮ ಎಂಬ ಪೋರ್ಟಲ್ ಆರಂಭಿಸಿದೆ. ಈ ಅಂತರ್ಜಾಲಕ್ಕೆ ಲಾಗ್‌-ಇನ್ ಆಗುವ ಮೂಲಕ ಸೂಕ್ತ ಮಾಹಿತಿ ಮತ್ತು ದಾಖಲೆಯನ್ನು ನೀಡಿ ನೀವು ಆನ್‌ಲೈನ್‌ನಲ್ಲೇ ಜನನ ಯಾ ಮರಣ ಪ್ರಮಾಣಪತ್ರವನ್ನು ಪಡೆಯಬಹುದು.



ಇದಕ್ಕಾಗಿ ನೀವು ಕೆಲವೊಂದು ದಾಖಲೆಪತ್ರಗಳನ್ನು ಈ ಆನ್‌ಲೈನ್‌ ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಬೇಕಾಗುತ್ತದೆ.



ಜನನ ಪ್ರಮಾಣಪತ್ರಕ್ಕೆ ಅರ್ಜಿ ಸಲ್ಲಿಸುವುದಿದ್ದರೆ ಇ-ಜನ್ಮ ಪೋರ್ಟಲ್‌ಗೆ ಭೇಟಿ ನೀಡಿ ಮಗುವಿನ ಜನ್ಮ ದಿನಾಂಕ, ಜನನ ಸ್ಥಳ, ಮಗುವಿನ ಹೆತ್ತವರ ಆಧಾರ್ ಕಾರ್ಡ್ ಸೇರಿದಂತೆ ಇತರ ಮಾಹಿತಿಗಳನ್ನು ನೀಡಬೇಕು, ಕೆಲವೊಂದು ಸ್ಕ್ಯಾನ್ ಮಾಡಲಾದ ಪ್ರತಿಗಳನ್ನು ಅಪ್‌ಲೋಡ್ ಮಾಡಬೇಕು.



ಅರ್ಜಿ ಸಲ್ಲಿಸುವ ವಿಧಾನ ಹೀಗಿದೆ...;

ಇಜನ್ಮ ವೆಬ್ ಪೋರ್ಟಲ್‌ಗೆ ಭೇಟಿ ನೀಡಿ.. ಅಲ್ಲಿ ಜನನ ಪ್ರಮಾಣಪತ್ರಕ್ಕೆ ಅರ್ಜಿ ಸಲ್ಲಿಸುವ ಆಯ್ಕೆಯನ್ನು ಕ್ಲಿಕ್ ಮಾಡಿ


ನಂತರ ನೋಂದಣಿ ಮಾಡುವಂತಹ ಆಯ್ಕೆಯನ್ನು ಕ್ಲಿಕ್ ಮಾಡಿ


ಆ ಸಂದರ್ಭದಲ್ಲಿ ಅರ್ಜಿದಾರರಿಗೆ ಐಡಿ ಮತ್ತು ಪಾಸ್‌ವರ್ಡ್ ದೊರೆಯುತ್ತದೆ. ಅದನ್ನು ನಮೂದಿಸಿ ಮುಂದುವರಿಯಬೇಕು.


ಆ ಬಳಿಕ, ಕೇಳಲಾದ ಸೂಕ್ತ ದಾಖಲೆಗಳನ್ನು ತುಂಬಿದ ನಂತರ ಅದನ್ನು ನೀವು ಸಲ್ಲಿಕೆ ಕಾರ್ಯ ಮಾಡಬೇಕು. (Press the button Submit)


ಈ ಎಲ್ಲ ಮಾಹಿತಿ ಮತ್ತು ದಾಖಲೆಗಳನ್ನು ಒದಗಿಸಿದ ಬಳಿಕ ನಿಗದಿತ ದಿನದೊಳಗೆ ಸೂಕ್ತ ಪರಿಶೀಲನೆ ಬಳಿಕ ನಿಮಗೆ ಡಿಜಿಟಲ್ ಆಗಿ ಪ್ರಮಾಣಪತ್ರ ಸಿದ್ಧವಾಗುತ್ತದೆ. ಅದನ್ನು ಆನ್‌ಲೈನ್‌ನಲ್ಲೇ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ.

.

Ads on article

Advertise in articles 1

advertising articles 2

Advertise under the article