16 Spl. PP ಹುದ್ದೆ ನೇಮಕಾತಿ: ಬೆಂಗಳೂರು, ಹುಬ್ಬಳ್ಳಿ, ಮಂಗಳೂರು, ಬೆಳಗಾವಿ ಸಹಿತ ಹಲವೆಡೆ ವಕೀಲರಿಗೆ ಅವಕಾಶ
16 ವಿಶೇಷ ಸರ್ಕಾರಿ ಅಭಿಯೋಜಕರ ಹುದ್ದೆ: ವಕೀಲರಿಗೆ
ಸುವರ್ಣಾವಕಾಶ, ಬೆಂಗಳೂರು, ಹುಬ್ಬಳ್ಳಿ, ಮಂಗಳೂರು, ಬೆಳಗಾವಿ ಸಹಿತ ಹಲವೆಡೆ ನೇಮಕಾತಿ
ಕರ್ನಾಟಕ ಮತ್ತು ಗೋವಾ ಪ್ರಾದೇಶಿಕ ಆದಾಯ
ತೆರಿಗೆ ಪ್ರಧಾನ ಮುಖ್ಯ ಆಯುಕ್ತರ ಕಚೇರಿಯಲ್ಲಿ ಖಾಲಿ ಇರುವ ವಿಶೇಷ ಸರ್ಕಾರಿ ಅಭಿಯೋಜಕರ ಹುದ್ದೆಯನ್ನು
ಭರ್ತಿ ಮಾಡುವ ನಿಟ್ಟಿನಲ್ಲಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಈ ಬಗ್ಗೆ ಬೆಂಗಳೂರು ಕ್ವೀನ್ಸ್ ರಸ್ತೆಯಲ್ಲಿ
ಇರುವ ಸೆಂಟ್ರಲ್ ರೆವೆನ್ಯೂ ಕಟ್ಟಡದಲ್ಲಿ ಇರುವ ಪ್ರಧಾನ ಮುಖ್ಯ ಆಯುಕ್ತರ ಕಚೇರಿಯಿಂದ ದಿನಾಂಕ
06-04-2023ರಂದು ಅಧಿಸೂಚನೆ
ಹೊರಡಿಸಲಾಗಿದೆ.
16
ಹುದ್ದೆಗಳು ಖಾಲಿ ಇದ್ದು, ಬೆಂಗಳೂರು ಮತ್ತು ತುಮಕೂರು ನ್ಯಾಯಾಲಯಗಳ ವ್ಯಾಪ್ತಿಯಲ್ಲಿ ಆರು ಹುದ್ದೆಗಳು
ಖಾಲಿ ಇವೆ. ಹುಬ್ಬಳ್ಳಿ-ಧಾರವಾಡದಲ್ಲಿ ಮೂರು, ಮಂಗಳೂರು-ಉಡುಪಿ ಮತ್ತು ಪಣಜಿ-ಮರ್ಗೋವಾದಲ್ಲಿ ತಲಾ
ಎರಡು ಹುದ್ದೆಗಳನ್ನು ತುಂಬಲಾಗುವುದು. ಬೆಳಗಾವಿ, ಬಳ್ಳಾರಿ, ಚಿತ್ರದುರ್ಗ, ಮೈಸೂರು-ಮಂಡ್ಯಗಳಲ್ಲಿ
ತಲಾ ಒಂದು ಹುದ್ದೆಯ ನೇಮಕಾತಿಗೆ ಅವಕಾಶ ಇರುತ್ತದೆ.
ಕರ್ನಾಟಕ
ಮತ್ತು ಗೋವಾ ರಾಜ್ಯದಲ್ಲಿ ಆರ್ಥಿಕ ಅಪರಾಧಗಳ ನ್ಯಾಯಾಲಯದ ಮುಂದೆ ಇರುವ ಕಚೇರಿಯ ಪ್ರಕರಣಗಳಲ್ಲಿ ಇಲಾಖೆಯನ್ನು
ಪ್ರತಿನಿಧಿಸುವ ಜವಾಬ್ದಾರಿಯನ್ನು ವಿಶೇಷ ಸರ್ಕಾರಿ ಅಭಿಯೋಜಕರಿಗೆ ನೀಡಲಾಗುವುದು.
ಅರ್ಜಿಯನ್ನು
ಸಲ್ಲಿಸಲು ಕೊನೆಯ ದಿನಾಂಕ: 08-05-2023
ಅರ್ಜಿ
ಪ್ರತಿಯಲ್ಲಿ (Hard Copy Only) ಮಾತ್ರ ಈ ಮೇಲ್ಕಂಡ ಹುದ್ದೆಗೆ ಅರ್ಜಿ ಸಲ್ಲಿಸಬೇಕು. ಇಮೇಲ್, ಫ್ಯಾಕ್ಸ್
ಮೂಲಕ ಸಲ್ಲಿಸಲಾದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.
ಅರ್ಜಿಗಳನ್ನು
ಈ ಕೆಳಗಿನ ವಿಳಾಸಕ್ಕೆ ಕಳುಹಿಸಬಹುದು.
Commissioner
of Income Tax (Judicial)
Central
Revenue Building, 1st Floor, Queens Road, Bengaluru- 560001
Bangalore.cit.judicial@incometax.gov.in
ಹೆಚ್ಚಿನ ಮಾಹಿತಿಗೆ ಈ ಕೆಳಗಿನ ವ್ಯಕ್ತಿಗಳನ್ನು
ಸಂಪರ್ಕಿಸಬಹುದು.
Medehal Sreeram: 8762301196 /
080-22869280
Smt. Bharathi Ramakrishnan :
8762300347/ 080-22868904