ಹೈಕೋರ್ಟ್ ನ್ಯಾಯಾಧೀಶರಾಗಿ ನಿವೃತ್ತ ನ್ಯಾಯಾಧೀಶರು: ಕೊಲೀಜಿಯಂ ಶಿಫಾರಸ್ಸು
ಹೈಕೋರ್ಟ್ ನ್ಯಾಯಾಧೀಶರಾಗಿ ನಿವೃತ್ತ ನ್ಯಾಯಾಧೀಶರು: ಕೊಲೀಜಿಯಂ ಶಿಫಾರಸ್ಸು
ಜಿಲ್ಲಾ ನ್ಯಾಯಾಧೀಶರಾಗಿ ನಿವೃತ್ತರಾದ ನ್ಯಾಯಾಧೀಶರೊಬ್ಬರನ್ನು ಹೈಕೋರ್ಟ್ ನ್ಯಾಯಾಧೀಶರಾಗಿ ನೇಮಿಸುವಂತೆ ಕೊಲೀಜಿಯಂ ಶಿಫಾರಸ್ಸು ಮಾಡಿದೆ. ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ಸುಪ್ರೀಂಕೋರ್ಟ್ ಕೊಲೀಜಿಯಂ ಈ ಶಿಫಾರಸ್ಸು ಮಾಡಿದೆ.
ನಿವೃತ್ತ ನ್ಯಾಯಾಧೀಶ ರೂಪೇಶ್ ಚಂದ್ರ ವಾರ್ಷ್ಣೇಯ್ ಅವರು ಮಧ್ಯಪ್ರದೇಶ ಹೈಕೋರ್ಟ್ ನ್ಯಾಯಾಧೀಶರ ಹುದ್ದೆಗೆ ಶಿಫಾರಸ್ಸು ಆದ ನ್ಯಾಯಾಧೀಶರಾಗಿದ್ದಾರೆ. ರೂಪೇಶ್ ಚಂದ್ರ 1987ರಂದು ಮಧ್ಯಪ್ರದೇಶ ನ್ಯಾಯಾಂಗ ಸೇವೆಗೆ ನ್ಯಾಯಾಂಗ ಅಧಿಕಾರಿಯಾಗಿ ಸೇರ್ಪಡೆಗೊಂಡಿದ್ದರು.
ವೈಯಕ್ತಿಕ ಚಾರಿತ್ರ್ಯ ಹಾಗೂ ಪರಿಶುದ್ಧ ವೃತ್ತಿ ಜೀವನವನ್ನು ಪರಿಗಣಿಸಿ ಈ ಶಿಫಾರಸ್ಸು ಮಾಡಲಾಗಿದೆ. ಅವರ ಪ್ರಾಮಾಣಿಕತೆ ಮತ್ತು ಸಭ್ಯತೆ, ವಿಶ್ವಾಸಾರ್ಹತೆ ಪ್ರಶ್ನಾತೀತಾಗಿದೆ ಎಂದು ಕೊಲೀಜಿಯಂ ಹೇಳಿದೆ. ಗುಪ್ತಚರ ಸಂಸ್ಥೆ ನೀಡಿರುವ ವರದಿಯನ್ನೂ ಉಲ್ಲೇಖಿಸಲಾಗಿದೆ.
ಈ ಹಿಂದೆ ಬಹಾರುಲ್ ಇಸ್ಲಾಂ, ಫಾತಿಮಾ ಬೀವಿ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಸ್ಥಾನದಿಂದ ನಿವೃತ್ತರಾದ ಮೇಲೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾಗಿ ನೇಮಕವಾಗಿ ಇತಿಹಾಸ ನಿರ್ಮಿಸಿದ್ದರು.