ಮಹಿಳಾ ಜಡ್ಜ್‌ಗೆ ಅಸಹ್ಯ, ಆಕ್ಷೇಪಾರ್ಹ ಸಂದೇಶ: ಕಿರುಕುಳ ನೀಡಿದ ವಕೀಲನ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕ್ರಿಯೆ- ಹೈಕೋರ್ಟ್ ಆದೇಶ
ಮಹಿಳಾ ಜಡ್ಜ್‌ಗೆ ಅಸಹ್ಯ, ಆಕ್ಷೇಪಾರ್ಹ ಸಂದೇಶ: ಕಿರುಕುಳ ನೀಡಿದ ವಕೀಲನ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕ್ರಿಯೆ- ಹೈಕೋರ್ಟ್ ಆದೇಶ
ವಕೀಲನೊಬ್ಬ ಮಹಿಳಾ ನ್ಯಾಯಾಧೀಶರ ಮೊಬೈಲ್‌ಗೆ ಆಕ್ಷೇಪಾರ್ಹ ಹಾಗೂ ಅಸಹ್ಯಕರ ಸಂದೇಶವನ್ನು ಕಳಿಸಿರುವ ಪ್ರಕರಣದಲ್ಲಿ ಆರೋಪಿ ವಕೀಲನ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಿಸುವಂತೆ ಹೈಕೋರ್ಟ್ ವಿಚಾರಣಾ ನ್ಯಾಯಾಲಯಕ್ಕೆ ಆದೇಶ ನೀಡಿದೆ.
ಈ ಬೆಚ್ಚಿ ಬೀಳಿಸುವ ಪ್ರಕರಣ ನಡೆದಿರುವುದು ಅಲಹಾಬಾದ್ ಹೈಕೋರ್ಟ್‌ನಲ್ಲಿ... ನ್ಯಾ. ವಿನೋದ್ ದಿವಾಕರ್ ಮತ್ತು ನ್ಯಾ. ಅಶ್ವನಿ ಕುಮಾರ್ ಮೆಹ್ರಾ ನೇತೃತ್ವದ ವಿಭಾಗೀಯ ಪೀಠ ವಕೀಲರ ವಿರುದ್ಧದ ನ್ಯಾಯಾಂಗ ನಿಂದನೆ ಪ್ರಕರಣದ ಕಾಗ್ನಿಜೆನ್ಸ್ ತೆಗೆದುಕೊಳ್ಳುವಂತೆ ವಿಚಾರಣಾ ನ್ಯಾಯಾಲಯಕ್ಕೆ ಆದೇಶ ನೀಡಿದ್ದು, ಆರೋಪಿ ವಕೀಲರಿಗೆ ನೀಡಲಾಗಿದ್ದ ಜಾಮೀನು ರದ್ದುಗೊಳಿಸಿದೆ.
ಘಟನೆಯ ವಿವರ
ಮಹರಾಜ್ ಗಂಜ್ ನ್ಯಾಯಾಲಯದಲ್ಲಿ ಸೇವೆ ಸಲ್ಲಿಸುತ್ತಿರುವ ಮಹಿಳಾ ನ್ಯಾಯಾಧೀಶರಿಗೆ ತಮ್ಮ ಫೇಸ್‌ಬುಕ್ ಖಾತೆಗೆ ಅಭಯ ಪ್ರತಾಪ್ ಎಂಬಾತ ಆಕ್ಷೇಪಾರ್ಹ ಸಂದೇಶಗಳನ್ನು ಕಳುಹಿಸುತ್ತಿದ್ದ.
ಇದರಿಂದ ತೀವ್ರ ವಿಚಲಿತರಾಗಿರುವ ನ್ಯಾಯಾಧೀಶರು ತಮ್ಮ ಕರ್ತವ್ಯದ ಕಡೆಗೆ ಸಂಪೂರ್ಣ ಗಮನ ನೀಡಲಾಗದೆ ಸಂಕಷ್ಟಕ್ಕೆ ಒಳಗಾಗಿದ್ದರು. ಅಷ್ಟೇ ಅಲ್ಲದೆ, ಈ ವಕೀಲ ಯಾವುದೇ ಕೆಲಸ ಇಲ್ಲದಿದ್ದರೂ ಮಹಿಳಾ ನ್ಯಾಯಾಧೀಶರು ಇರುವ ಕೋರ್ಟ್ ಕಲಾಪದಲ್ಲಿ ಬಂದು ಕುಳಿತುಕೊಳ್ಳುತ್ತಿದ್ದ.
ಈ ಬಗ್ಗೆ, ಮಹಿಳಾ ನ್ಯಾಯಾಧೀಶರು ಆರೋಪಿ ವಕೀಲನ ವಿರುದ್ಧ ಸ್ಥಳೀಯ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ವಕೀಲರನ್ನು ಬಂಧಿಸಲಾಗಿತ್ತು. ಆದರೆ, ಸಿಜೆಎಂ ನ್ಯಾಯಾಲಯ ವಕೀಲರಿಗೆ ಜಾಮೀನು ನೀಡಿತ್ತು.
ಇದನ್ನು ಪ್ರಶ್ನಿಸಿ ಮಹಿಳಾ ನ್ಯಾಯಾಧೀಶರು ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಆರೋಪಿ ವಕೀಲನ ಜಾಮೀನು ಆದೇಶವನ್ನು ರದ್ದುಗೊಳಿಸಿತ್ತು.
.