ಎಪ್ರಿಲ್ 24ರಿಂದ ಹೈಕೋರ್ಟ್ ಬೇಸಿಗೆ ರಜೆ- ರಜಾಕಾಲೀನ ಪೀಠಗಳ ಬಗ್ಗೆ ಮಾಹಿತಿ
ಎಪ್ರಿಲ್ 24ರಿಂದ ಹೈಕೋರ್ಟ್ ಬೇಸಿಗೆ ರಜೆ- ರಜಾಕಾಲೀನ ಪೀಠಗಳ ಬಗ್ಗೆ ಮಾಹಿತಿ
ಎಪ್ರಿಲ್ 24ರಿಂದ ಹೈಕೋರ್ಟ್ ಮತ್ತು ರಾಜ್ಯದ ಸಿವಿಲ್ ಕೋರ್ಟ್ ಗಳಿಗೆ ಮೇ ಕಾಲದ ಬೇಸಿಗೆ ರಜೆ ಆರಂಭವಾಗಿದೆ.
ಎಪ್ರಿಲ್ 24ರಿಂದ ಮೇ 20ರ ವರೆಗೆ ಬೇಸಿಗೆ ರಜೆ ಪ್ರಯುಕ್ತ ಸಿವಿಲ್ ಕೋರ್ಟ್‌ಗಳು ಹಾಗೂ ಹೈಕೋರ್ಟ್ ಪೀಠಗಳು ಯಾವುದೇ ಕಾರ್ಯನಿರ್ವಹಿಸುವುದಿಲ್ಲ.
ಈ ಬೇಸಿಗೆ ರಜೆಯ ಅವಧಿಯಲ್ಲಿ ರಜಾಕಾಲೀನ ನ್ಯಾಯಪೀಠಗಳನ್ನು ರಚಿಸಲಾಗಿದೆ. ಈ ನ್ಯಾಯಪೀಠದಲ್ಲಿ ತುರ್ತು ಪ್ರಕರಣಗಳನ್ನು ಮಾತ್ರ ಆಲಿಸಲಾಗುತ್ತದೆ. ಮೇಲ್ಮನವಿ, ಕ್ರಿಮಿನಲ್ ಮೇಲ್ಮನವಿ, ಕ್ರಿಮಿನಲ್ ಅರ್ಜಿ ಮತ್ತು ಸಿವಿಲ್ ರೂಪದ ಅರ್ಜಿಗಳ ವಿಚಾರಣೆಯನ್ನು ನಡೆಸಲಾಗುವುದಿಲ್ಲ.
ರಜೆಯ ಅವಧಿಯಲ್ಲಿ ಎಪ್ರಿಲ್ 25, 27, ಮೇ 2, 4, 9, 11, 16, 18ರ ಒಂದು ವಿಭಾಗೀಯ ಪೀಠ ಮತ್ತು ಎರಡು ಏಕಸದಸ್ಯ ಪೀಠಗಳು ತುರ್ತು ಪ್ರಕರಣಗಳ ವಿಚಾರಣೆ ನಡೆಸಲಿವೆ.
ತುರ್ತು ವಿಚಾರಣೆ ಕೋರಿ ಸಲ್ಲಿಸುವ ಹಾಗೂ ತಡೆಯಾಜ್ಞೆ, ಮಧ್ಯಂತರ ನಿರ್ದೇಶನ ಮತ್ತು ತಾತ್ಕಾಲಿಕ ಪ್ರತಿಬಂಧಕಾದೇಶ ಇತ್ಯಾದಿ ವಿಚಾರಗಳಿಗೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆಯನ್ನು ಮಾತ್ರ ಇಲ್ಲಿ ನಡೆಸಲಾಗುತ್ತದೆ.
ಈ ಬಗ್ಗೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಆದೇಶದ ಪ್ರಕಾರ ರಿಜಿಸ್ಟ್ರಾರ್ ಎಂ. ಚಂದ್ರಶೇಖರ್ ರೆಡ್ಡಿ ಅವರು ಅಧಿಸೂಚನೆ ಹೊರಡಿಸಿದ್ದಾರೆ.
.