ಬ್ರಿಟಿಷ್ ಕಾಲದ ಪದ ಬದಲಿ: ಇನ್ನು ಮುಂದೆ ಕೋರ್ಟ್‌ಗಳಲ್ಲಿ ಈ ಪದಗಳು ಇರುವುದಿಲ್ಲ...
ಬ್ರಿಟಿಷ್ ಕಾಲದ ಪದ ಬದಲಿ: ಇನ್ನು ಮುಂದೆ ಕೋರ್ಟ್‌ಗಳಲ್ಲಿ ಈ ಪದಗಳು ಇರುವುದಿಲ್ಲ...
ವಸಾಹತುಶಾಹಿ ವ್ಯವಸ್ಥೆಯಲ್ಲಿ ಭಾರತ ಬ್ರಿಟಿಷ್ ಆಡಳಿತಕ್ಕೆ ಒಳಪಟ್ಟ ಸಂದರ್ಭದಲ್ಲಿ ಕೋರ್ಟ್‌ಗಳಲ್ಲಿ ಬಳಕೆಯಲ್ಲಿ ಇದ್ದ ಪದಗಳನ್ನು ಬದಲಿಸಲಾಗಿದೆ.
ಕೆಲವು ಪದಗಳನ್ನು ಬದಲಿಸಿ ಪರ್ಯಾಯ ಪದಗಳನ್ನು ಬಳಸುವಂತೆ ಸುಪ್ರೀಂ ಕೋರ್ಟ್ ಗಜೆಟ್ ಅಧಿಸೂಚನೆ ಹೊರಡಿಸಿದೆ.
ಈ ಮೂಲಕ ಜಮಾದಾರ್ ಹುದ್ದೆಯ ಹೆಸರನ್ನು ಬದಲಿಸಿ ಮೇಲ್ವಿಚಾರಕ ಹುದ್ದೆ ಎಂದು ಮರುನಾಮಕರಣ ಮಾಡಲಾಗಿದೆ.
ಫರಾಶ್ (ಮಹಡಿ) ಮತ್ತು ಸಫಾಯಿವಾಲಾ (ಕ್ಲೀನರ್) ವರ್ಗಗಳ ಜಮಾದಾರ್ ಹುದ್ದೆಗಳಿಗೆ ಅನ್ವಯವಾಗುವಂತೆ ಅಧಿಸೂಚನೆಯಲ್ಲಿ ಬದಲಾವಣೆ ಮಾಡಲಾಗಿದೆ.
ಸಂವಿಧಾನದ 146ನೇ ವಿಧಿಯಡಿ ಪ್ರದತ್ತ ಅಧಿಕಾರವನ್ನು ಬಳಸಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ಈ ತಿದ್ದುಪಡಿ ಮಾಡಿದ್ದಾರೆ.
ಜಮಾದಾರ್ ಎಂಬ ಪದವನ್ನು ಸಾಮಾನ್ಯವಾಗಿ ಕ್ಲೀನಿಂಗ್ ಸ್ಟಾಫ್ ಮೇಲ್ವಿಚಾರಣೆ ನಡೆಸುವ ಕಿರಿಯ ಅಧಿಕಾರಿಯನ್ನು ಉಲ್ಲೇಖಿಸಲು ಬಳಸಲಾಗುತ್ತದೆ. ಜಮಾದಾರ್ ಎಂಬ ಈ ಪದ ವಸಾಹತುಶಾತಿ ಯುಗಕ್ಕೆ ಸೇರಿದೆ ಎಂದು ಅಧಿಸೂಚನೆಯಲ್ಲಿ ಹೇಳಲಾಗಿದೆ.