ಸುಪ್ರೀಂ ಮತ್ತು ಹೈ ಕೋರ್ಟ್ ತೀರ್ಪುಗಳು ಕನ್ನಡದಲ್ಲೇ ಲಭ್ಯ: ವೆಬ್ ಜಾಲ ಅನಾವರಣ
ಸುಪ್ರೀಂ ಮತ್ತು ಹೈ ಕೋರ್ಟ್ ತೀರ್ಪುಗಳು ಕನ್ನಡದಲ್ಲೇ ಲಭ್ಯ: ವೆಬ್ ಜಾಲ ಅನಾವರಣ
ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ಗಳ ಪ್ರಮುಖ ತೀರ್ಪುಗಳು ಕನ್ನಡದಲ್ಲೇ ಲಭ್ಯವಾಗಬೇಕು ಎಂಬ ಬಹುದಿನಗಳ ಕನಸು ಇದೀಗ ಈಡೇರಿದೆ.
ಎಲ್ಲರಿಗೂ ಕಾನೂನು ಲಭ್ಯವಾಗಬೇಕು ಮತ್ತು ಜನರು ಕಾನೂನನ್ನು ಸುಲಭವಾಗಿ ಅರಿತುಕೊಳ್ಳಬೇಕು ಎಂಬ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್ ಆಶಯದಂತೆ ಹೈಕೋರ್ಟ್ ಕನ್ನಡದಲ್ಲೇ ಪ್ರಮುಖ ತೀರ್ಪುಗಳನ್ನು ಜನರಿಗೆ ಲಭ್ಯವಾಗುವಂತೆ ಮಾಡಿದೆ.
ಕರ್ನಾಟಕ ಹೈಕೋರ್ಟ್‌ನ 169 ತೀರ್ಪುಗಳನ್ನು, ಸುಪ್ರೀಂ ಕೋರ್ಟ್‌ನ 28 ತೀರ್ಪುಗಳನ್ನು ಒಟ್ಟು 197 ಪ್ರಮುಖ ತೀರ್ಪುಗಳನ್ನು ಹೈಕೋರ್ಟ್ ತನ್ನ ವೆಬ್ ಜಾಲದಲ್ಲಿ ಪ್ರಕಟಿಸಿದೆ.
ಇಂತಹ ಪ್ರಯತ್ನ ದೇಶದಲ್ಲಿ ಇದೇ ಮೊದಲಲ್ಲ. ಕೇರಳ, ಗುಜರಾತ್ ಮತ್ತು ಮಹಾರಾಷ್ಟ್ರ ಹೈಕೋರ್ಟ್‌ಗಳು ತಮ್ಮ ರಾಜ್ಯ ಭಾಷೆಯಲ್ಲಿ ತೀರ್ಪುಗಳನ್ನು ಇದೇ ಮಾದರಿಯಲ್ಲಿ ಪ್ರಕಟಿಸಿವೆ. ಆದರೆ, ಅತಿ ಹೆಚ್ಚು ತೀರ್ಪುಗಳನ್ನು ಕನ್ನಡದಲ್ಲಿ ಪ್ರಕಟಿಸಲಾಗಿದೆ ಎಂಬುದು ಸಮಾಧಾನಕರ ಸಂಗತಿ.
ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಈ ವೆಬ್ ಪೇಜನ್ನು ಲೋಕಾರ್ಪಣೆ ಮಾಡಿದ್ದಾರೆ.
ಕನ್ನಡದಲ್ಲಿ ಹೈಕೋರ್ಟ್ ತೀರ್ಪುಗಳು:
https://karnatakajudiciary.kar.nic.in/hck_judgments.php
ಕನ್ನಡದಲ್ಲಿ ಸುಪ್ರೀಂ ಕೋರ್ಟ್ ತೀರ್ಪುಗಳು: